ಹಿರಣ್ಯನಾಗಿ ತೆರೆಮೇಲೆ ಅಬ್ಬರಿಸಲಿದ್ದಾರೆ ಕನ್ನಡದ ಖ್ಯಾತ ಹಿರಿಯ ನಟನ ಪುತ್ರ

ಕನ್ನಡದ ಖ್ಯಾತ ಹಿರಿಯ ಹಾಸ್ಯ ನಟರಾದ ಡಿಂಗ್ರಿ ನಾಗರಾಜ್ ಅವರ ಪುತ್ರ ನಟ ರಾಜವರ್ಧನ್ ಅವರು ಹೊಸದೊಂದು ಸಿನಿಮಾದಲ್ಲಿ ಸಖತ್ ರಗಡ್ ಲುಕ್ ನಲ್ಲಿ ಕಾಣಿಸಿಕೊಂಡಿದ್ದಾರೆ. ಹೌದು ನಟ ರಾಜವರ್ಧನ್ ಅವರು ಬಿಚ್ಚುಗತ್ತಿ ಸಿನಿಮಾದ ಮೂಲಕ ಕನ್ನಡ ಚಿತ್ರರಂಗಕ್ಕೆ ಭರವಸೆಯ ನಟರಾಗಿ ಗುರುತಿಸಿಕೊಂಡರು. ರಾಜವರ್ಧನ್ ಅವರಿಗೆ ಬಿಚ್ಚುಗತ್ತಿ ಚಿತ್ರ ಮೂರನೇ ಚಿತ್ರ. ಫ್ಲೈ ಎಂಬ ಚಿತ್ರದ ಮೂಲಕ ರಾಜವರ್ಧನ್ ಅವರು ಚಂದನವನಕ್ಕೆ ಪಾದಾರ್ಪಣೆ ಮಾಡಿದರು. ಇದಾದ ನಂತರ ನೂರೊಂದು ನೆನಪು ಎಂಬ ಚಿತ್ರ ಮಾಡಿದರು. ಆದರೆ ರಾಜವರ್ಧನ್ ಅವರಿಗೆ ಒಂದೊಳ್ಳೆ ಹೆಸರು ತಂದು ಕೊಟ್ಟದ್ದು ಬಿಚ್ಚುಗತ್ತಿ ಸಿನಿಮಾ. ಭರಮಣ್ಣ ಎಂಬ ಪಾತ್ರದ ಮೂಲಕ ನಟ ರಾಜವರ್ಧನ್ ಅವರು ಕನ್ನಡ ಸಿನಿ ಪ್ರೇಕ್ಷಕರಿಗೆ ಮೋಡಿ ಮಾಡಿದರು. ಇದೀಗ ಹಿರಣ್ಯ ಎಂಬ ಸಿನಿಮಾದ ಮೂಲಕ ಮತ್ತೆ ಸುದ್ದಿಯಾಗಿದ್ದಾರೆ.

ಹಿರಣ್ಯ ಸಿನಿಮಾದಲ್ಲಿ ರಾಜವರ್ಧನ್ ಅವರು ಫುಲ್ ನೆಗೆಟೀವ್ ಶೇಡ್ ನಲ್ಲಿ ಕಾಣಿಸಿಕೊಳ್ಳುತ್ತಿದ್ದಾರಂತೆ. ಅದಕ್ಕೆ ಪೂರಕವಾಗಿ ಇತ್ತೀಚೆಗೆ ಹಿರಣ್ಯ ಸಿನಿಮಾದ ಪೋಸ್ಟರ್ ವೊಂದು ಬಿಡುಗಡೆಯಾಗಿದೆ. ಈ ಪೋಸ್ಟರ್ ನಲ್ಲಿ ರಾಜವರ್ಧನ್ ರಕ್ತ ಸಿಕ್ತವಾಗಿ ಸಖತ್ ರಗಡ್ ಲುಕ್ ನಲ್ಲಿ ಕಾಣಿಸಿಕೊಂಡಿದ್ದಾರೆ. ಈ ಚಿತ್ರದ ಟೈಟಲ್ ಅನ್ನ ಡಾಲಿ ಧನಂಜಯ್ ಅವರು ರಾಜವರ್ಧನ್ ಅವರ ಜೊತೆ ಇದ್ದ ಉತ್ತಮ ಸ್ನೇಹ ಭಾಂಧವ್ಯಕ್ಕೆ ಬೆಲೆ ಕೊಟ್ಟು ಬಿಟ್ಟುಕೊಟ್ಟಿದ್ದಾರಂತೆ. ಈ ಚಿತ್ರದಲ್ಲಿ ಹಿರಣ್ಯನಿಗೆ ಭಾವನೆಗಳೇ ಇರುವುದಿಲ್ಲವಂತೆ. ಪ್ರೀತಿ, ಪ್ರೇಮ ಶೃಂಗಾರ, ಸ್ಟೈಲ್ ಯಾವುದೇ ರೀತಿ ನಾರ್ಮಲ್ ಪಾತ್ರ ಅಲ್ಲದೇ ಕಂಪ್ಲೀಟ್ ಕ್ರೌರ್ಯ ತುಂಬಿರೋ ಅಂತಹ ಪಾತ್ರವಂತೆ‌. ಇಂತಹ ಪಾತ್ರವನ್ನ ನಟ ರಾಜವರ್ಧನ್ ಅವರು ಕೂಡ ನಿರೀಕ್ಷೆ ಮಾಡುತ್ತಿದ್ದರಂತೆ. ಬಿಚ್ಚುಗತ್ತಿ ಸಿನಿಮಾ ನೋಡಿದ ಅನೇಕ ಪ್ರೇಕ್ಷಕರು ಮಾಸ್ ಸಿನಿಮಾ ಮಾಡುವಂತೆ ಸಲಹೆ ನೀಡಿದ್ದರಂತೆ‌.

ಅದರಂತೆ ಇದೀಗ ಹಿರಣ್ಯ ಸಿನಿಮಾ ಅಂತಹದೊಂದು ಪಾತ್ರವನ್ನ ಕೊಟ್ಟಿದೆ ಎಂದು ಚಿತ್ರದ ಬಗ್ಗೆ ನಟ ರಾಜವರ್ಧನ್ ಅವರು ಮಾಹಿತಿ ನೀಡಿದ್ದಾರೆ. ಹಿರಣ್ಯ ಚಿತ್ರಕ್ಕೆ ಬಿದರಹಳ್ಳಿಯ ವಿಜಯ್ ಕುಮಾರ್ ಅವರು ಬಂಡವಾಳ ಹಾಕಿದ್ದಾರೆ‌. ಹಿರಣ್ಯ ಚಿತ್ರಕ್ಕೆ ಪ್ರವೀಣ್ ಎಂಬುವವರು ಆಕ್ಷನ್ ಕಟ್ ಹೇಳಿದ್ದು, ಜೂಡಾ ಸ್ಯಾಂಡಿ ಅವರು ರಾಗ ಸಂಯೋಜನೆ ಮಾಡಿದ್ದಾರೆ. ಇನ್ನು ರಾಜವರ್ಧನ್ ಅವರಿಗೆ ಜೋಡಿಯಾಗಿ ಬಿಗ್ ಬಾಸ್ ಶೋ ಖ್ಯಾತಿಯ ದಿವ್ಯಾ ಸುರೇಶ್ ಅವರು ನಟಿಸಿದ್ದಾರೆ. ಈಗಾಗಲೇ ಶೇಕಡಾವಾರು ಚಿತ್ರೀಕರಣ ಮುಗಿಸಿಕೊಂಡಿರುವ ಚಿತ್ರತಂಡ ಪೋಸ್ಟ್ ಪ್ರೊಡಕ್ಷನ್ ಕೆಲಸ ಕಾರ್ಯಗಳಲ್ಲಿ ತೊಡಗಿಕೊಂಡಿದೆ‌. ಹಿರಣ್ಯನಾಗಿ ಬರ್ತಿರೋ ನಟ ರಾಜವರ್ಧನ್ ಅವರಿಗೆ ಈ ಸಿನಿಮಾ ಯಾವ ರೀತಿ ಕೈ ಹಿಡಿಯಲಿದೆ ಅನ್ನೋದನ್ನ ಕಾದು ನೋಡಬೇಕಾಗಿದೆ.

Leave a Reply

%d bloggers like this: