ಹಿಂದೂ ಧರ್ಮದ ಮಹಿಳೆಯರು ತಲೆ ಮೇಲೆ ಸೆರಗು ಧರಿಸುವುದು ಮೊದಲು ನಿಷೇಧಿಸಿ ಎಂದ ಈ ರಾಜ್ಯದ ಮುಖ್ಯಮಂತ್ರಿ

ಹಿಂದೂ ಧರ್ಮದ ಹೆಣ್ಣು ಮಕ್ಕಳು ತಲೆಯ ಮೇಲೆ ಸೆರಗು ಹಾಕುವುದನ್ನ ನಿಷೇಧಿಸಬೇಕು ಎಂದು ವಿವಾದಾತ್ಮಕ ಹೇಳಿಕೆ ನೀಡಿದ ಮುಖ್ಯಮಂತ್ರಿಯ ವಿರುಹಿದ್ದ ಆಕ್ರೋಶ..! ಕೆಲವೊಂದು ಸೂಕ್ಷ್ಮ ವಿಚಾರಗಳ ಬಗ್ಗೆ ಮಾತನಾಡುವಾಗ ಬಹಳ ಎಚ್ಚರಿಕೆಯಿಂದ ಇರಬೇಕು.ಅದರಲ್ಲಿಯೂ ಸಾರ್ವಜನಿಕ ಜೀವನದಲ್ಲಿ ಇರುವ ವ್ಯಕ್ತಿಗಳು ಮತ್ತು ಸರ್ಕಾರದಲ್ಲಿ ಉನ್ನತ ಹುದ್ದೆಯಲ್ಲಿ ಇರುವವರು ಕೊಂಚ ಜಾಗೃತವಾಗಿಯೇ ಮಾತನಾಡಬೇಕಾಗುತ್ತದೆ. ಅಂತಹದರಲ್ಲಿ ದೇಶದ ರಾಜ್ಯವೊಂದರ ಮುಖ್ಯ ಮಂತ್ರಿಗಳು ಧರ್ಮ,ಧಾರ್ಮಿಕ ನಂಬಿಕೆಗಳಂತಹ ಸೂಕ್ಷ್ಮ ವಿಚಾರಗಳ ಬಗ್ಗೆ ಮಾತನಾಡುವಾಗ ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು.ಇದೀಗ ಈ ಧಾರ್ಮಿಕ ಸಂಪ್ರದಾಯ ವಿಚಾರದ ಬಗ್ಗೆ ಮಾತನಾಡಿ ಸುದ್ದಿಯಾಗಿರುವುದು ಕಾಂಗ್ರೆಸ್ ಹಿರಿಯ ಮುಖಂಡ ಮತ್ತು ರಾಜಸ್ಥಾನದ ಮುಖ್ಯಮಂತ್ರಿ ಆಗಿರುವ ಅಶೋಕ್ ಗೆಹ್ಲೋಟ್ ಅವರು. ಸಿ.ಎಂ.ಅಶೋಕ್ ಗೆಹ್ಲೋಟ್ ಅವರು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಮಹಿಳೆಯರಿಗೆ ಮುಸುಕು ಇರುವವರೆಗೆ ಮುಂದೆ ಬರಲು ಸಾಧ್ಯವಿಲ್ಲ.ಮೊದಲು ಈ ಮುಸುಕು ವ್ಯವಸ್ಥೆಯನ್ನ ನಿಷೇಧ ಮಾಡಬೇಕು ಇದು ಅಗತ್ಯವಾಗಿದೆ ಎಂದು ಟ್ವೀಟ್ ಮಾಡಿದ್ದಾರೆ.

ಈ ಟ್ವೀಟ್ ಗೆ ಪರ-ವಿರೋಧ ಎರಡೂ ವ್ಯಕ್ತವಾಗಿವೆ.ಹೆಚ್ಚು ಡಿಸ್ ಲೈಕ್ ಒತ್ತಿ ಗೆಹ್ಲೋಟ್ ಅವರ ಟ್ವೀಟ್ ಗೆ ಪ್ರತಿಯಾಗಿ ಕೆಲವರು ನೀವು ಹಿಂದೂ ಹೆಣ್ಣು ಮಕ್ಕಳು ಮುಸುಕು ಧರಿಸುವ ದಿಯಾ ವ್ಯವಸ್ಥೆಯ ಕುರಿತು ಹೇಳಿಕೆ ನೀಡಿದ್ದೀರಿ.ಅದೇ ರೀತಿಯಾಗಿ ಇಸ್ಲಾಂ ಧರ್ಮದ ಹೆಣ್ಣು ಮಕ್ಕಳು ಬುರ್ಖಾ ಧರಿಸುವ ಬಗ್ಗೆ ಯಾಕೆ ಮಾತನಾಡುವುದಿಲ್ಲ.ಕೇವಲ ಹಿಂದೂ ಧರ್ಮದ ಹೆಣ್ಣು ಮಕ್ಕಳ ಬಗ್ಗೆ ಮಾತ್ರ ಯಾಕೆ ಮಾತನಾಡುತ್ತೀರಿ ಎಂದು ರೀ ಟ್ವೀಟ್ ಮಾಡಿದ್ದಾರೆ.ಸಿ.ಎ.ಅಶೋಕ್ ಗೆಹ್ಲೋಟ್ ಅವರು ಮಹಿಳೆಯರ ಆರೋಗ್ಯ ಮತ್ತು ಸಬಲೀಕರಣಕ್ಕೆ ಅಸ್ಪ್ರುಶ್ಯತೆ ಮತ್ತು ಮುಸುಕು ತೆಗೆಯಬೇಕು.ಇಂದಿನ ದಿನಮಾನಗಳಲ್ಲಿ ಬಹಳಷ್ಟು ಮಹಿಳೆಯರು ಬರವಣಿಗೆ,ಅಧ್ಯಾಯನ ಮತ್ತು ಇತರೆ ಕ್ಷೇತ್ರಗಳಲ್ಲಿ ಉತ್ತಮ ಸಾಧನೆ ಮಾಡುತ್ತಿದ್ದಾರೆ.ಅದಕ್ಕೆ ಉತ್ತಮ ಉದಾಹರಣೆಯಾಗಿ ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರ ಜೀವನ ನಮ್ಮ ಮುಂದಿದೆ.

ಮುಸುಕು,ಅಸ್ಪ್ರುಶ್ಯತೆ,ಕರವಸ್ತ್ರದ ಉಪಯೋಗದ ಬಗ್ಗೆ ಜಾಗೃತಿ ಮೂಡಿಸಿ,ಅವರಿಗೆ ಶಿಕ್ಷಣ,ಆರೋಗ್ಯ,ಮಹಿಳಾ ಸಬಲೀಕರಣದ ಬಗ್ಗೆ ಮಾಹಿತಿ ನೀಡಬೇಕು ಎಂದು ಅಶೋಕ್ ಗೆಹ್ಲೋಟ್ ಅವರು ಅಭಿಪ್ರಾಯ ಪಟ್ಟಿದ್ದಾರೆ.ಇನ್ನು ನೆಟ್ಟಿಗರೊಬ್ಬರು ನಿಮಗೆ ಸಾಮರ್ಥ್ಯವಿದ್ದರೆ ಮುಸುಕು ಮತ್ತು ಬುರ್ಖಾ ಎರಡನ್ನೂ ನಿಷೇಧಿಸಬೇಕು.ಮುಸುಕು ನಮ್ಮ ಧರ್ಮದ ಸಂಸ್ಕೃತಿಯಾಗಿದೆ ಎಂದು ಉತ್ತರಿಸಿದ್ದಾರೆ.ಇನ್ನೊಂದೆಡೆ ಮಹಿಳೆಯೊಬ್ಬರು ಮುಸುಕಿನಿಂದ ನಿಮಗೆ ತೊಂದರೆ ಏನಿದೆ,ಮುಸುಕು ಹಾಕಿಕೊಂಡಿರವವರು ಯಾರೂ ಭಯೋತ್ಪಾದಕರಲ್ಲ ಮಹಿಳಾ ಟ್ವಿಟರ್ ಬಳಕೆದಾರರು, ಚಿಕ್ಕ ವಯಸ್ಸಿನಲ್ಲಿ ಹುಡುಗಿಯನ್ನು ಮದುವೆಯಾಗುವ ಕಾರಣದಿಂದ, ಜನಸಂಖ್ಯೆ ನಿಯಂತ್ರಣವನ್ನು ಒಳಗೊಂಡಿದೆ. ಅಂದಹಾಗೆ, ಸೀರೆಯಿಂದ ಹಾಕುವ ಮುಸುಕಿನಿಂದ ನಿಮಗೆ ತೊಂದರೆ ಏನಿದೆ, ನಿಮ್ಮ ರಾಜಕಾರಣ ಮಾಡಲು ಧರ್ಮದ ಸಂಸ್ಕೃತಿಯನ್ನ ಬಳಸಿಕೊಳ್ಳಬೇಡಿ ಎಂದು ಅಸಮಾಧಾನ ಹೊರ ಹಾಕಿದ್ದಾರೆ.