ಹಿಂದಿಯಲ್ಲೂ ದಾಖಲೆ, ಕಾಂತಾರ ಚಿತ್ರ ಹಿಂದಿಯಲ್ಲಿ ಗಳಿಸಿದ್ದೆಷ್ಟು

ಕನ್ನಡದ ಕಾಂತಾರ ಸಿನಿಮಾ ಕೂಡ ಕೆಜಿಎಫ್ ಚಾಪ್ಟರ್2 ಸಿನಿಮಾದಂತೆಯೇ ಬಾಲಿವುಡ್ ಬಾಕ್ಸ್ ಆಫೀಸ್ ನಲ್ಲಿ 100 ಕೋಟಿ ಕ್ಲಬ್ ಸೇರಿಕೊಳ್ಳುವ ಮೂಲಕ ಮತ್ತೊಂದು ದಾಖಲೆ ಮಾಡಲು ಹೊರಟಿದೆ. ಹಾಗಾದರೆ ರಿಷಬ್ ಶೆಟ್ಟಿ ಅವರ ಕಾಂತಾರ ಸಿನಿಮಾ ಕೇವಲ ಹಿಂದಿ ಭಾಷೆಯೊಂದರಲ್ಲಿಯೇ ಎಷ್ಟು ಕಲೆಕ್ಷನ್ ಮಾಡಿದೆ ಅಂತ ಗೊತ್ತಾ. ಅದರ ಸಂಪೂರ್ಣ ಮಾಹಿತಿ ಈ ಲೇಖನದಲ್ಲಿದೆ. ಹೊಂಬಾಳೆ ಫಿಲಂಸ್ ಬ್ಯಾನರ್ ಅಡಿಯಲ್ಲಿ ವಿಜಯ್ ಕಿರಗಂದೂರ್ ಅವರು ಕಾಂತಾರ ಸಿನಿಮಾವನ್ನ ನಿರ್ಮಾಣ ಮಾಡಿದ್ದು, ರಿಷಬ್ ಶೆಟ್ಟಿ ನಾಯಕ ನಟನಾಗಿ ನಟಿಸುವುದರ ಜೊತೆಗೆ ನಿರ್ದೇಶನ ಮಾಡಿ ಯಶಸ್ವಿಯಾಗಿದ್ದಾರೆ. ಕಾಂತಾರ ಸಿನಿಮಾವನ್ನ ಕೇವಲ ಕನ್ನಡ ಪ್ರೇಕ್ಷಕರು ಮಾತ್ರ ಅಲ್ಲದೆ ತೆಲುಗು, ತಮಿಳು ವಿಶೇಷವಾಗಿ ಹಿಂದಿ ಸಿನಿಪ್ರಿಯರು ಕೂಡ ಮೆಚ್ಚಿ ಹಾಡಿ ಹೊಗಳಿದ್ದಾರೆ.

ಬಹುಶಃ ಯಶ್ ಅವರ ಕೆಜಿಎಫ್ ಚಿತ್ರದ ನಂತರ ಕನ್ನಡದ ಸಿನಿಮಾವೊಂದಕ್ಕೆ ಅಭೂತಪೂರ್ವ ಯಶಸ್ಸು ಸಿಕ್ಕಿರೋದು ಈ ಕಾಂತಾರ ಸಿನಿಮಾಗೇನೆ. ಇಂದು ಪಂಚ ಭಾಷೆಗಳಲ್ಲಿ ರಿಲೀಸ್ ಆಗಿ ದೇಶಾದ್ಯಂತ ಭಾರಿ ಸದ್ದು ಮಾಡುತ್ತಿರುವ ಕಾಂತಾರ ಸಿನಿಮಾ ಗಲ್ಲಾ ಪೆಟ್ಟಿಗೆಯಲ್ಲಿ ದಾಖಲೆಯ ಕಲೆಕ್ಷನ್ ಮಾಡ್ತಿದೆ. ಕಾಂತಾರ ಸಿನಿಮಾದ ಬಜೆಟ್ ಸರಿ ಸುಮಾರು 12-15 ಕೋಟಿ ಎಂದು ತಿಳಿದು ಬಂದಿದೆ. ಕನ್ನಡದಲ್ಲಿ ಕಾಂತಾರ ಸಿನಿಮಾ ನೂರು ಕೋಟಿ ಬಾಚಿದೆ. ಇನ್ನೂ ಅಚ್ಚರಿ ವಿಶೇಷ ಏನಪ್ಪಾ ಅಂದರೆ ಇತರೆ ಭಾಷೆಗಳಿಗಿಂತ ಬಾಲಿವುಡ್ ನಲ್ಲಿ ಕಾಂತಾರ ಸಿನಿಮಾ ಬಾಕ್ಸ್ ಅಫೀಸ್ ನಲ್ಲಿ ನೂರು ಕೋಟಿ ಗಳಿಕೆ ಮಾಡುವ ಸನಿಹದಲ್ಲಿದೆ. ಹೌದು ಕಾಂತಾರ ಅಪ್ಪಟ ನಮ್ಮ ಮಣ್ಣಿನ ಸಂಸ್ಕೃತಿ ಆಚಾರ ವಿಚಾರ ಪ್ರತೀಕದ ಸಿನಿಮಾ ಅಂತ ಹೇಳ್ಬೋದು.

ಈ ಚಿತ್ರದಲ್ಲಿ ರಿಷಬ್ ಶೆಟ್ಟಿ ಅವರ ಅಮೋಘ ನಟನೆಗೆ ಇಡೀ ಭಾರತೀಯ ಸಿನಿ ಪ್ರೇಕ್ಷಕರೇ ಮನಸೋತಿದ್ದಾರೆ. ಗಳಿಕೆ ಮತ್ತು ದಾಖಲೆಯ ವಿಚಾರದಲ್ಲಿ ಕಾಂತಾರ ಸಿನಿಮಾ ಕೆಜಿಎಫ್ ಚಿತ್ರವನ್ನ ಕೂಡ ಹಿಂದಿಕ್ಕಿದೆ. ಕರ್ನಾಟಕದಲ್ಲಿ ಕಾಂತಾರ ಸಿನಿಮಾ ಒಂದು ಕೋಟಿಗೂ ಅಧಿಕ ಮಂದಿ ವೀಕ್ಷಣೆ ಮಾಡುವುದರ ಮೂಲಕ ವಿಶೇಷ ದಾಖಲೆಯನ್ನ ತನ್ನದಾಗಿಸಿಕೊಂಡಿದೆ. ಇನ್ನು ಕಲೆಕ್ಷನ್ ವಿಚಾರವಾಗಿ ಕರ್ನಾಟಕದಲ್ಲಿ ನೂರು ಕೋಟಿಯಷ್ಟು, ಅದೇ ರೀತಿಯಾಗಿ ಹಿಂದಿಯಲ್ಲಿ ಕಾಂತಾರ ಸಿನಿಮಾ ಇದುವರೆಗೆ ಎಂಭತ್ತು ಕೋಟಿಗೂ ಹೆಚ್ಚು ಕಲೆಕ್ಷನ್ ಮಾಡಿದೆ. ಈ ವಾರದಲ್ಲಿ ಅಂದರೆ ಗುರುವಾರದವರೆಗೆ ಕಾಂತಾರ ಸಿನಿಮಾ 7 ಕೋಟಿಯಷ್ಟು ಕಲೆಕ್ಷನ್ ಮಾಡಿದೆ. ಒಟ್ಟಾರೆಯಾಗಿ ಕಾಂತಾರ ಸಿನಿಮಾ ಬಾಲಿವುಡ್ ನಲ್ಲಿ ಇನ್ನೊಂದತ್ತು ದಿನದಲ್ಲಿ ಬರೋಬ್ಬರಿ ನೂರು ಕೋಟಿ ಕಲೆಕ್ಷನ್ ಮಾಡುವತ್ತ ದಾಪುಗಾಲು ಇಡ್ತಿದೆ ಅನ್ನೋದು ಸಂತಸದ ವಿಚಾರವಾಗಿದೆ.

Leave a Reply

%d bloggers like this: