ಹಿಂದಿಯಲ್ಲಿ ಅದ್ದೂರಿಯಾಗಿ ಬಿಡುಗಡೆ ಆದ ಕಾಂತಾರ ಚಿತ್ರ, ಮೊದಲ ದಿನದ ಗಳಿಕೆ ಎಷ್ಟು

ಕನ್ನಡದ ಕಾಂತಾರ ಸಿನಿಮಾ ಕ್ರೇಜ಼್ ಕಂಡು ಬಾಲಿವುಡ್ ಬೆಚ್ಚಿ ಬಿದ್ದಿದೆ ಎಂದು ಹೇಳಬಹುದು. ರಿಷಬ್ ಶೆಟ್ಟಿ ಅವರ ನಿರ್ದೇಶನ ಮತ್ತು ನಟನೆಯಲ್ಲಿ ಮೂಡಿ ಬಂದಿರುವ ಕಾಂತಾರ ಸಿನಿಮಾ ಕೇವಲ ಕನ್ನಡ ಪ್ರೇಕ್ಷಕರನ್ನ ಮಾತ್ರ ಅಲ್ಲದೆ ಪರಭಾಷೆಯ ಪ್ರೇಕ್ಷಕರಿಗೂ ಕೂಡ ಭಾರಿ ಮೋಡಿ ಮಾಡಿದೆ. ಸಿನಿಮಾ ನೋಡಿದ ಪ್ರತಿಯೊಬ್ಬರು ಕೂಡ ರಿಷಬ್ ಶೆಟ್ಟಿ ಅವರಿಗೆ ಜೈ ಹೋ ಅಂದಿದ್ದಾರೆ. ಆರಂಭದಲ್ಲಿ ಕಾಂತಾರ ಸಿನಿಮಾ ಕೇವಲ ಕನ್ನಡ ಒಂದೇ ಭಾಷೆಯಲ್ಲಿ ರಿಲೀಸ್ ಆಗಿತ್ತು. ಅದರ ಜೊತೆಗೆ ರಾಜ್ಯದ್ಯಂತ ಸರಿ ಸುಮಾರು ಇನ್ನೂರೈವತ್ತು ಸೆಂಟರ್ ಗಳಲ್ಲಿ ರಿಲೀಸ್ ಆಗಿತ್ತು. ಆದರೆ ಯಾವಾಗ ಕಾಂತಾರ ಸಿನಿಮಾ ಬಗ್ಗೆ ಒಳ್ಳೆಯ ಮಾತುಗಳು ಕೇಳಿಬಂದ್ವೋ ಅಲ್ಲಿಂದ ದಿನದಿಂದ ದಿನಕ್ಕೆ ಈ ಚಿತ್ರ ನೋಡಲು ಸಿನಿ ಪ್ರೇಕ್ಷಕರು ಕೂಡ ಹೆಚ್ಚಾಗುತ್ತಾ ಹೋದರು. ಬಾಕ್ಸ್ ಆಫೀಸ್ ಕಲೆಕ್ಷನ್ ನಲ್ಲಿಯೂ ಕೂಡ ಒಂದು ರೀತಿಯ ಹೊಸ ಇತಿಹಾಸ ಸೃಷ್ಟಿ ಮಾಡಲು ಮುಂದಾಯಿತು. ಪರಭಾಷಿಕರು ಈ ಚಿತ್ರವನ್ನ ತಮ್ಮ ಭಾಷೆಗೆ ಡಬ್ ಮಾಡುವಂತೆ ಮನವಿ ಮಾಡಿದರು.

ಅದರಂತೆ ಈ ಕಾಂತಾರ ಸಿನಿಮಾವನ್ನ ಮತ್ತಷ್ಟು ಹಿರಿದಾಗಿಸಲು ಚಿತ್ರತಂಡ ಯೋಜನೆ ಹಾಕಿತು. ಕನ್ನಡ ಭಾಷೆಯಲ್ಲಿ ಜೊತೆಗೆ ಇದೀಗ ನಿನ್ನೆ ಅಂದರೆ ಶುಕ್ರವಾರ ತೆಲುಗು, ತಮಿಳು ಸೇರಿದಂತೆ ಪಂಚಭಾಷೆಗಳಲ್ಲಿ ಪ್ಯಾನ್ ಇಂಡಿಯಾ ಸಿನಿಮಾವಾಗಿ ರಿಲೀಸ್ ಮಾಡಿದ್ದಾರೆ. ಕಾಂತಾರ ಸಿನಿಮಾ ಸರಿ ಸುಮಾರು ಹತ್ತರಿಂದ ಹನ್ನೆರಡು ಕೋಟಿ ವೆಚ್ಚದಲ್ಲಿ ತಯಾರಾದ ಸಿನಿಮಾ. ಆದರೆ ಬಾಕ್ಸ್ ಆಪೀಸ್ ನಲ್ಲಿ ಈ ಚಿತ್ರ ಗಳಿಕೆ ಮಾಡಿರೋದು ಅದರ ಹತ್ತರಷ್ಟು ಎಂದು ತಿಳಿದು ಬಂದಿದೆ. ಮೂಲಗಳ ಪ್ರಕಾರ ಹಿಂದಿ ಅವತರಣಿಕೆಯಲ್ಲಿ ಕಾಂತಾರ ಸಿನಿಮಾ ಒಂದೇ ದಿನದಲ್ಲಿ ಬರೋಬ್ಬರಿ ಒಂದು ಕೋಟಿಗೂ ಅಧಿಕ ಕಲೆಕ್ಷನ್ ಮಾಡಿದೆ ಎಂದು ತಿಳಿದು ಬಂದಿದೆ. ನಿನ್ನೆಯಷ್ಟೇ ಪರರಾಜ್ಯಗಳಿಗೆ ಕಾಲಿಟ್ಟಿರುವ ಕಾಂತಾರ ಸಿನಿಮಾ ನಿಧಾನವಾಗಿ ಅಲ್ಲಿಯೂ ಕೂಡ ಬಾಕ್ಸ್ ಆಫೀಸ್ ನಲ್ಲಿ ಭರ್ಜರಿ ಬೇಟೆ ಆಡಲಿದೆ ಎನ್ನಬಹುದು. ಕಳೆದ ಸೆಪ್ಟೆಂಬರ್ 30ರಂದು ರಾಜ್ಯಾದ್ಯಂತ ರಿಲೀಸ್ ಆದ ರಿಷಬ್ ಶೆಟ್ಟಿ ಅವರ ಕಾಂತಾರ ಸಿನಿಮಾಗೆ ಎಲ್ಲೆಡೆ ಅಭೂತಪೂರ್ವ ಪ್ರತಿಕ್ರಿಯೆ ಸಿಕ್ಕಿದ್ದು, ರಿಷಬ್ ಅವರ ನಿರ್ದೇಶನ ಮತ್ತು ಅವರ ಅಮೋಘ ನಟನೆಯ ಬಗ್ಗೆ ಅಪಾರ ಪ್ರಶಂಸೆ ವ್ಯಕ್ತವಾಗಿದೆ.