ಹಿಂದಿ ಚಿತ್ರಕ್ಕೆ ದೊಡ್ಡ ಪೈಪೋಟಿ ನೀಡಿದ ಕಾಂತಾರ, ಹಿಂದಿಯಲ್ಲಿ 3 ದಿನದಲ್ಲಿ ಗಳಿಸಿದ್ದೆಷ್ಟು

ಬಾಲಿವುಡ್ ಬಾಕ್ಸ್ ಆಫೀಸ್ ನಲ್ಲಿ ಕೋಟಿ ಕೋಟಿ ಬಾಚೋದಕ್ಕೆ ಶುರು ಮಾಡಿದೆ ಕನ್ನಡದ ಕಾಂತಾರ ಸಿನಿಮಾ. ಹೊಂಬಾಳೆ ಫಿಲಂಸ್ ಬ್ಯಾನರ್ ಅಡಿಯಲ್ಲಿ ನಿರ್ಮಾಣ ಆಗಿರುವ ರಿಷಬ್ ಶೆಟ್ಟಿ ಅವರ ನಟನೆ ಮತ್ತು ನಿರ್ದೇಶನದ ಕಾಂತಾರ ಸಿನಿಮಾ ದಿನ ಕಳೆದಂತೆ ಭಾರಿ ಜನಪ್ರಿಯತೆ ಗಳಿಸಿ ಪ್ರೇಕ್ಷಕರಿಂದ ಅಭೂತಪೂರ್ವ ಮೆಚ್ಚುಗೆ ಗಳಿಸುತ್ತಿದೆ. ಕಾಂತಾರ ಸಿನಿಮಾ ಕಳೆದ ಸೆಪ್ಟೆಂಬರ್ 30ರಂದು ಕನ್ನಡ ಭಾಷೆಯೊಂದರಲ್ಲಿ ಮಾತ್ರ ಎಲ್ಲೆಡೆ ರಿಲೀಸ್ ಆಗಿತ್ತು. ಸರಿ ಸುಮಾರು ಇನ್ನುರೈವತ್ತು ಪರದೆಗಳಲ್ಲಿ ಅಂತ ಹೇಳ್ಬೋದು. ಅದಾದ ನಂತರ ಕಾಂತಾರ ಸಿನಿಮಾವನ್ನ ನೋಡಿದ ಸಿನಿ ಪ್ರಿಯರು ಉತ್ತಮ ರೆಸ್ಪಾನ್ಸ್ ನೀಡಿದ್ರು.

ಕನ್ನಡ ಪ್ರೇಕ್ಷಕರು ಮಾತ್ರ ಅಲ್ಲದೆ ಪರಭಾಷಿಕರು ಕೂಡ ಕಾಂತಾರ ಸಿನಿಮಾ ನೋಡಿ ಮೆಚ್ಚುಗೆ ವ್ಯಕ್ತಪಡಿಸಿದ ಕಾರಣ ಈ ಕಾಂತಾರ ಸಿನಿಮಾವನ್ನ ಇತ್ತೀಚೆಗೆ ಅಕ್ಟೋಬರ್ 15 ರಂದು ತೆಲುಗು, ತಮಿಳು,ಮಲೆಯಾಳಂ ಮತ್ತು ಹಿಂದಿ ಭಾಷೆಗಳಲ್ಲಿ ಪ್ಯಾನ್ ಇಂಡಿಯಾ ಸಿನಿಮಾವಾಗಿ ರಿಲೀಸ್ ಮಾಡಲಾಯಿತು. ಕನ್ನಡ ಪ್ರೇಕ್ಷಕರು ತೋರಿದ ಪ್ರೀತಿಯನ್ನೇ ಬೇರೆ ಭಾಷಿಕ ಸಿನಿ ಪ್ರಿಯರು ಕೂಡ ಕಾಂತಾರ ಸಿನಿಮಾಗೆ ನೀಡಿದ್ದಾರೆ. ಕನ್ನಡ ಭಾಷೆಯೊಂದರಲ್ಲಿಯೇ ಕಾಂತಾರ ಸಿನಿಮಾ ಇದುವರೆಗೆ ನೂರು ಕೋಟಿಯಷ್ಟು ಕಲೆಕ್ಷನ್ ಮಾಡಿದೆ. ಇದೀಗ ಪಂಚ ಭಾಷೆಗಹಲ್ಲಿ ರಿಲೀಸ್ ಆಗಿದ್ದು ಮುಖ್ಯವಾಗಿ ತೆಲುಗು ಮತ್ತು ಹಿಂದಿ ಭಾಷೆಯಲ್ಲಿ ಕಾಂತಾರ ಸಿನಿಮಾಗೆ ನಿರೀಕ್ಷೆಗೂ ಮೀರಿ ಅದ್ಭುತ ರೆಸ್ಪಾನ್ಸ್ ಸಿಗುತ್ತಿದೆ.

ಮೊದಲ ದಿನದ ಹಿಂದಿ ಅವತರಣಿಕೆಯ ಕಾಂತಾರ ಸಿನಿಮಾ ಶುಕ್ರವಾರ 1.27 ಕೋಟಿ ಕಲೆಕ್ಷನ್ ಮಾಡಿತು. ಎರಡನೇ ದಿನ 2.75 ಕೋಟಿ ಅಂದರೆ ಎರಡೇ ದಿನದಲ್ಲಿ ಕಾಂತಾರ ಸಿನಿಮಾ ನಾಲ್ಕು ಕೋಟಿ ಕಲೆಕ್ಷನ್ ಮಾಡಿದೆ ಎಂದು ಹೇಳಲಾಗ್ತಿದೆ. ಹೀಗೆ ವಾರಾಂತ್ಯದಲ್ಲಿ ಅಂದರೆ ಭಾನುವಾರ ಒಂದೇ ದಿನ ಮೂರುವರೆ ಕೋಟಿಗೂ ಹೆಚ್ಚು ಕಲೆಕ್ಷನ್ ಮಾಡಿ ಮೂರೇ ದಿನದಲ್ಲಿ ಕಾಂತಾರ ಸಿನಿಮಾ ಹಿಂದಿ ವರ್ಶನ್ ನಲ್ಲಿ ಎಂಟು ಕೋಟಿಯಷ್ಟು ಕಲೆಕ್ಷನ್ ಮಾಡಿದೆ ಎಂದು ಬಿಟೌನ್ ನಲ್ಲಿ ಲೆಕ್ಕಾಚಾರ ಹಾಕಲಾಗುತ್ತಿದೆ. ಒಟ್ಟಾರೆಯಾಗಿ ಕನ್ನಡದ ಕಾಂತಾರ ಸಿನಿಮಾ ಕೆಜಿಎಫ್ ಅಂತೆಯೇ ಸಖತ್ ರಾಕ್ ಮಾಡುತ್ತಿದೆ. ಇದೀಗ ನಾಯಕ ನಟ ರಿಷಬ್ ಶೆಟ್ಟಿ ಎಲ್ಲಾ ಕಡೆ ಭೇಟಿ ಕೊಟ್ಟು ಅಭಿಮಾನಿಗಳ ಜೊತೆ ಸಂಭ್ರಮಿಸುತ್ತಿದ್ದಾರೆ.

Leave a Reply

%d bloggers like this: