ಹೆಂಡತಿ ಜೊತೆ ಪ್ರತಿ ರಾತ್ರಿ ಈ ಕೆಲಸ ಮಾಡಿದರೆ ಸಾಕು.. ಹೆಂಡತಿ ಎಷ್ಟೇ ಕೋಪದಲ್ಲಿದ್ದರು ಕರಗಿ ನೀರಾಗ್ತಾಳೆ

ಗಂಡ – ಹೆಂಡತಿ ಜಗಳ ಉಂಡು ಮಲಗುವ ತನಕ ಅಂತಾದ್ರೇ ನಂತರದಲ್ಲಿ ಹೆಂಡತಿ ಬಯಸೋದು ಏನು ಗೊತ್ತಾ…! ದಾಂಪತ್ಯ ಜೀವನದಲ್ಲಿ ಸತಿ – ಪತಿಗಳ ನಡುವೆ ಪ್ರೀತಿ ಪ್ರೇಮ ಎಷ್ಟೇ ಇದ್ದರು ಕೆಲವೊಮ್ಮೆ ವಿರಸ ಉಂಟಾಗುವುದು ಸರ್ವೇ ಸಾಮಾನ್ಯ. ಆದರೆ ಆ ವಿರಸಕ್ಕೆ ಸರಸ ಎಂಬ ಅಸ್ತ್ರ ಬಳಸಿ ತಮ್ಮ ವಿರಸಗಳನ್ನೆಲ್ಲಾ ದೂರ ಮಾಡಿಕೊಂಡು ಹೇಗೆ ಸಾಂಸಾರಿಕ ಜೀವನ ಸಾಗಿಸಬೇಕು ಎಂಬುದನ್ನ ಸತಿ-ಪತಿ ಇಬ್ಬರು ಅರಿತಿದ್ದರೆ ಅವರ ಬದುಕು ಸ್ವರ್ಗ ಸುಖದಂತೆ ಇರುತ್ತದೆ. ಆದರೆ ಇಂದಿನ ಯುವ ಪೀಳಿಗೆಯ ದಂಪತಿಗಳಿಗೆ ಪರಸ್ಪರ ಸ್ವಾಭಿಮಾನ ಹೆಚ್ಚಾಗಿರುತ್ತದೆ. ಯಾರೂ ಕೂಡ ತಮ್ಮ ತಪ್ಪನ್ನು ಒಪ್ಪಿಕೊಂಡು ಸೋಲುವ ಗುಣ ಸ್ವಭಾವವನ್ನು ಹೊಂದಿರುವುದಿಲ್ಲ. ದಾಂಪತ್ಯ ಜೀವನ ಎಂಬುದು ಎತ್ತಿನ ಗಾಡಿ ಇದ್ದಂಗೆ. ಎತ್ತಿನಗಾಡಿಯಲ್ಲಿರುವ ಎರಡೂ ಎತ್ತುಗಳು ಸಮವಾಗಿ ಸಾಗಿದರೆ ಬದುಕಿನ ದಾರಿಯನ್ನ ಸರಾಗವಾಗಿ ಸಾಗಬಹುದು. ಆದರೆ ಆಧುನಿಕ ಜೀವನ ಶೈಲಿಯಲ್ಲಿ ಗಂಡ- ಹೆಂಡತಿ ಇಬ್ಬರು ಕೂಡ ದುಡಿಯಬೇಕಾದ ಅನಿವಾರ್ಯತೆ ಇರುವುದರಿಂದ ಮನೆಯ ಹೊರಗಡೆ ಮತ್ತು ಮನೆಯ ಒಳಗಡೆ ಎರಡೂ ಕಡೆ ಮಹಿಳೆ ದುಡಿಯುತ್ತಾರೆ.

ಅದೇ ರೀತಿಯಾಗಿ ಪುರುಷರು ಕೂಡ ಸಂಸಾರ ಚೆನ್ನಾಗಿ ನಡೆಸಬೇಕು ಎಂದು ಹೆಚ್ಚು ದುಡಿಯಲು ಆರಂಭಿಸುತ್ತಾರೆ. ಹೀಗಾಗಿ ಗಂಡ – ಹೆಂಡತಿ ಇಬ್ಬರಿಗೂ ಕೂಡ ಕೆಲಸದ ಒತ್ತಡ ಎಂಬುದು ಇದ್ದೇ ಇರುತ್ತದೆ. ಅದರಲ್ಲಿಯೂ ಈ ಮಹಿಳೆಯರಿಗೆ ಹೆಚ್ಚು ಜವಬ್ದಾರಿ ಇರುತ್ತದೆ. ಹೀಗಾಗಿ ಮನೆಯಲ್ಲಿ ಮಹಿಳೆಯರು ಕೆಲಸದ ಒತ್ತಡ ಇರುವ ಕಾರಣ ಸಾಮಾನ್ಯವಾಗಿ ಕೋಪದಲ್ಲಿ ಇರುತ್ತಾರೆ. ಆ ಸಂಧರ್ಭದಲ್ಲಿ ಅವರೊಂದಿಗೆ ಪತಿಯಾದವರು ಅವರನ್ನ ಅರ್ಥ ಮಾಡಿಕೊಂಡು ಕೆಲಸ ಕಾರ್ಯಗಳಲ್ಲಿ ಸಹಾಯ ಮಾಡುವ ಮೂಲಕ ಅವರಿಗೆ ನೆರವಾಗಬೇಕು. ಆದರೆ ಬಹುತೇಕ ಗಂಡಸರು ಈ ಆತ್ಮೀಯತೆಯನ್ನ ತಮ್ಮ ಹೆಂಡತಿಯರಿಗೆ ನೀಡುವುದಿಲ್ಲ. ಇದಕ್ಕೆ ಪ್ರಮುಖ ಕಾರಣ ಕೂಡ ಇದೆ. ಗಂಡಸರು ಹೌದು ದಿನದಲ್ಲಿ ಬೆಳಿಗ್ಗೆಯಿಂದ ರಾತ್ರಿವರೆಗೆ ಇನ್ನೊಬ್ಬರ ಬಳಿ ಕೆಲಸ ಮಾಡಿ ಅವರಿವರ ಹತ್ರ ನೂರಾರು ಮಾತುಗಳನ್ನ ಕೇಳಿ ಬೇಸರವಾಗಿರುತ್ತಾರೆ. ಇದಕ್ಕೆ ಮಹಿಳೆಯರು ಕೂಡ ಹೊರತಾಗಿಲ್ಲ. ಹೀಗಿರುವಾಗ ಪರಸ್ಪರ ಇಬ್ಬರಿಗೂ ಕೂಡ ಒತ್ತಡ ಅನ್ನೋದು ಇರುತ್ತದೆ.

ದಂಪತಿಗಳು ಈ ಕೆಲಸದ ಒತ್ತಡವನ್ನು ತಮ್ಮ ಸಾಂಸಾರಿಕ ಜೀವನಕ್ಕೂ ಕೂಡ ಅವಕಾಶ ಮಾಡಿಕೊಟ್ಟು ಬಿಡುತ್ತಾರೆ. ಹೆಂಡತಿಯರಿಗೆ ಕೋಪ ಇದ್ದಾಗ ಗಂಡಂದಿರು ಈ ಎರಡು ಕೆಲಸ ಮಾಡಿದರೆ ತಮ್ಮ ಸಂಗಾತಿಯೊಂದಿಗಿರುವ ವಿರಸವನ್ನು ದೂರವಿಡಬಹುದು. ಹೌದು ಯಾವಾಗ ತಮ್ಮ ಹೆಂಡತಿ ಕೋಪದಲ್ಲಿ ಇರುತ್ತಾರೋ ಆ ಸಂಧರ್ಭದಲ್ಲಿ ಅವರ ಕೈ ಹಿಡಿದು ಆತ್ಮೀಯತೆಯಿಂದ ಮಾತನಾಡಬೇಕು. ಮದುವೆಯ ಆರಂಭದಲ್ಲಿ ತಾವು ಮಾಡಿದಂತಹ ತರಲೆ ತುಂಟಾಟ ಗಳನ್ನ ನೆನಪಿಸಿ ನೆನಪುಗಳನ್ನ ಮೆಲುಕು ಹಾಕಬೇಕು. ಅವರ ಸೌಂದರ್ಯದ ಕಾಳಜಿ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ. ಮೊದಲಿನ ಹಾಗೆ ನೀನು ಸುಂದರವಾಗಿರಬೇಕು ಎಂದು ಅವರಿಗೆ ಪ್ರೋತ್ಸಾಹದಾಯಕ ಮಾತುಗಳನ್ನ ಹೇಳಬೇಕು. ಹೀಗೆ ಅವರಿಗೆ ಪ್ರೀತಿಯಿಂದ ಹಿತವಾಗಿ ಮಾತನಾಡಿ ಅವರನ್ನ ಒಲಿಸಿಕೊಳ್ಳಬೇಕು. ಇದರಿಂದ ಸಾಮಾನ್ಯವಾಗಿ ಮಹಿಳೆಯರು ಪುರುಷರಿಗೆ ಸೋಲುತ್ತಾರೆ.