ಹಾಸ್ಯ ನಟ ಶಿವರಾಜ್ KR ಪೇಟೆ ಹೆಂಡತಿ ಇವರೇ.. ನೋಡಿ ಮೊದಲ ಬಾರಿಗೆ

ಕನ್ನಡ ಕಿರುತೆರೆಯ ರಿಯಾಲಿಟಿ ಶೋ ಗಳ ಮೂಲಕ ತೆರೆ-ಮರೆಯಲ್ಲಿದ್ದಂತಹ ರಾಜ್ಯದ ಅನೇಕ ಪ್ರತಿಭೆಗಳು ಬೆಳಕಿಗೆ ಬಂದು ಇಷ್ಟು ಬೆಳ್ಳಿತೆರೆಯಲ್ಲಿ ಮಿಂಚುತ್ತಿದ್ದಾರೆ. ಅದೇ ರೀತಿಯಾಗಿ ಕನ್ನಡದ ಪ್ರಸಿದ್ದ ಜೀ಼ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ ಕಾಮಿಡಿ ಕಿಲಾಡಿಗಳು ಹಾಸ್ಯ ಕಾರ್ಯಕ್ರಮದ ಮೂಲಕ ನಾಡಿಗೆ ಪರಿಚಯರಾದ ಶಿವರಾಜ್ ಕೆ.ಆರ್.ಪೇಟೆ ತಮ್ಮ ಗ್ರಾಮೀಣ ಸೊಗಡಿನ ಮಾತಿನ ಮೂಲಕ ಅಪಾರ ಜನಪ್ರಿಯತೆ ಪಡೆದಿದ್ದಾರೆ.ಖಾಸಗಿ ಸುದ್ದಿ ವಾಹನಿಯೊಂದರ ಹಾಸ್ಯ ಕಾರ್ಯಕ್ರಮದಲ್ಲಿ ಕನ್ನಡದ ಹಿರಿಯ ಖ್ಯಾತ ಹಾಸ್ಯ ನಟ ಧೀರೇಂದ್ರ ಗೋಪಾಲ್ ಅವರ ಧ್ವನಿಯನ್ನ ಮಿಮಿಕ್ರಿ ಮಾಡುವ ಮೂಲಕ ಗಮನ ಸೆಳೆದಿದ್ದರು. ಇದಾದ ಬಳಿಕ ಕಾಮಿಡಿ ಕಿಲಾಡಿಗಳು ಹಾಸ್ಯ ಕಾರ್ಯಕ್ರಮದಲ್ಲಿ ಅವಕಾಶ ಸಿಗುತ್ತದೆ. ಈ ಕಾಮಿಡಿ ಕಿಲಾಡಿಗಳು ಶೋ ನಲ್ಲಿ ಹಾಸ್ಯ , ಭಾವನಾತ್ಮಕ ಪಾತ್ರಗಳಿಗೆ ಜೀವ ತುಂಬಿ ನಟಿಸಿ ಪ್ರೇಕ್ಷಕರ ಮನ ಗೆದ್ದರು.

ಅದಲ್ಲದೇ ಈ ಕಾರ್ಯಕ್ರಮದಲ್ಲಿ ತೀರ್ಪುಗಾರರಾಗಿದ್ದ ನಟ ಜಗ್ಗೇಶ್, ನಿರ್ದೇಶಕ ಯೋಗರಾಜ್ ಭಟ್ , ನಟಿ ರಕ್ಷಿತಾ ಅವರಿಯಿಂದ ಮೆಚ್ಚುಗೆ ಪಡೆಯುತ್ತಾರೆ. ತಮ್ಮ ಗ್ರಾಮೀಣ ಭಾಷೆಯ ಮೂಲಕ ನಕ್ಕು ನಲಿಸಿ ಸಿನಿಮಾಗಳಲ್ಲಿಯೂ ಕೂಡ ಅವಕಾಶ ಗಿಟ್ಟಿಸಿಕೊಂಡು, ಸ್ಟಾರ್ ನಟರ ಜೊತೆ ತೆರೆ ಹಂಚಿಕೊಳ್ಳುತ್ತಾರೆ. ಹಾಸ್ಯ ನಟನಾಗಿ ಸ್ಯಾಂಡಲ್ ವುಡ್ ನಲ್ಲಿ ಜನಪ್ರಿಯ ನಟರಾಗಿ ಬೇಡಿಕೆಯ ಗುರುತಿಸಿಕೊಂಡಿದ್ದಾರೆ.ನೀನಾಸಂ ಸತೀಶ್ ಅಭಿನಯದ ಅಯೋಗ್ಯ, ಚಾಲೇಂಜಿಂಗ್ ಸ್ಟಾರ್ ದರ್ಶನ್ ಅವರೊಟ್ಟಿಗೆ ರಾಬರ್ಟ್, ಸೀತಾರಾಮ ಕಲ್ಯಾಣ, ಅಂಬಿ ನಿಂಗೆ ವಯಸ್ಸಾಯ್ತೋ, ರೈಡರ್, ಮದಗಜ ಚಿತ್ರಗಳಲ್ಲಿ ಹಾಸ್ಯ ನಟರಾಗಿ ಮಾತ್ರ ಅಲ್ಲದೆ ನಾನು ಮತ್ತು ಗುಂಡ ಎಂಬ ಚಿತ್ರದ ಮೂಲಕ ನಾಯಕ ನಟರಾಗಿ ಬಡ್ತಿ ಪಡೆದುಕೊಂಡರು.

ಸದ್ಯಕ್ಕೆ ಕಾಮಿಡಿ ಕಿಲಾಡಿ ಶೋ ಖ್ಯಾತಿಯ ನಯನಾ ಶರತ್ ಅವರೊಟ್ಟಿಗೆ ಧಮಾಕಾ ಎಂಬ ಚಿತ್ರದಲ್ಲಿ ಶಿವರಜ್ ಕೆ.ಆರ್.ಪೇಟೆ ಅವರು ನಾಯಕ ನಟರಾಗಿ ನಟಿಸುತ್ತಿದ್ದಾರೆ. ಈ ಧಮಾಕಾ ಚಿತ್ರದ ಪೋಸ್ಟರ್ ರಿಲೀಸ್ ಆಗಿದ್ದು, ಎಸ್.ಆರ್. ಮೀಡಿಯಾ ಪ್ರೊಡಕ್ಷನ್ ಬ್ಯಾನರ್ ಅಡಿಯಲ್ಲಿ ಸುನೀಲ್ ಎಸ್ ರಾಜ್ ಹಾಗೂ ಅನ್ನಪೂರ್ಣ ಬಿ ಪಾಟೀಲ್ ನಿರ್ಮಾಣ ಮಾಡುತ್ತಿರುವ ಈ ಚಿತ್ರಕ್ಕೆ ಲಕ್ಷ್ಮಿ ರಮೇಶ್ ನಿರ್ದೇಶನ ಮಾಡುತ್ತಿದ್ದಾರೆ. ಶಿವರಾಜ್ ಕೆ.ಆರ್. ಅವರು ಶೃತಿ ಎಂಬುವರೊಟ್ಟಿಗೆ ದಾಂಪತ್ಯ ಜೀವನ ನಡೆಸುತ್ತಿದ್ದಾರೆ.