ಹರಿದು ಹೋದ ಹಳೆ ಬಟ್ಟೆ ಹಾಕಿ ಜಿಲ್ಲಾಧಿಕಾರಿ ಕಚೇರಿಗೆ ಬಂದ ಅಜ್ಜ! ಜಿಲ್ಲಾಧಿಕಾರಿ ಮಾಡಿದ್ದೇನು ಗೊತ್ತಾ?

ಉತ್ತರ ಪ್ರದೇಶದ ಲಕ್ಕಿಮ್ ಪುರ್ ಕೇರ್ ಎಂಬ ಸಿಟಿಯಲ್ಲಿ ಡಿಸಿ ಆಗಿ ಕೆಲಸ ಮಾಡುತ್ತಿರುವ ಶ್ರೀಧರ್ ಸಿಂಗ್ ಅವರ ಆಫೀಸಿನಲ್ಲಿ ಜನತಾದರ್ಶನ ಕಾರ್ಯಕ್ರಮ ನಡೆಯುತ್ತಿತ್ತು ಈ ಕಾರ್ಯಕ್ರಮಕ್ಕೆ ಹರಿದ ಬಟ್ಟೆ ಹಾಕಿಕೊಂಡಿದ್ದ ವಯಸ್ಸಾದ ವ್ಯಕ್ತಿಯೊಬ್ಬರು ತನ್ನ ಕಷ್ಟ ಹೇಳಿಕೊಳ್ಳಲು ಬಂದಿದ್ದರು ಜನತಾದರ್ಶನದಲ್ಲಿ ಜನಗಳ ಕಷ್ಟಗಳನ್ನು ಜಿಲ್ಲಾಧಿಕಾರಿ ಶ್ರೀಧರ್ ಸಿಂಗ್ ಅವರು ವಿಚಾರಿಸುತ್ತಿದ್ದರು ಆಗಲೆ ಇವರ ಬಳಿ ಕಂಪ್ಲೇಂಟ್ ಹೇಳಲು ಬಂದಿದ್ದ ಹಿರಿಯ ವ್ಯಕ್ತಿಯನ್ನು ನೋಡಿ ಶ್ರೀಧರ್ ಸಿಂಗ್ ಅವರಿಗೆ ತುಂಬಾ ಬೇಸರವಾಯಿತು.

ಈ ಹಿರಿಯ ವ್ಯಕ್ತಿ ಹರಿದುಹೋಗಿದ್ದ ಬಟ್ಟೆ ಹಾಕಿಕೊಂಡು ತನ್ನ ಕಷ್ಟ ಹೇಳಿಕೊಳ್ಳಲು ಡಿಸಿ ಆಫೀಸ್ ಗೆ ಬಂದಿದ್ದರು ಈ ವ್ಯಕ್ತಿಯ ಅವಸ್ಥೆ ನೋಡಿ ಶ್ರೀಧರ್ ಸಿಂಗ್ ಅವರ ಮನಸ್ಸು ಕರಗಿತು ತಕ್ಷಣ ಆನ್ ದ ಸ್ಪಾಟ್ ಈ ಬಡ ವ್ಯಕ್ತಿಗೆ ತನ್ನ ಅಧಿಕಾರಿಗಳಿಗೆ ಹೇಳಿ ಹೊಸ ಬಟ್ಟೆ ತರಿಸಿಕೊಟ್ಟರು. ಒಂದು ಜೊತೆಯಲ್ಲ ಬದಲಿಗೆ ಹತ್ತು ಜೊತೆ ಹೊಸ ಹೊಸ ಬಟ್ಟೆಗಳನ್ನು ತರಿಸಿ ತಾವೇ ಸ್ವಂತ ಹಣಕೊಟ್ಟು ಜಿಲ್ಲಾಧಿಕಾರಿ ಶ್ರೀಧರ್ ಸಿಂಗ್ ಬಡ ವ್ಯಕ್ತಿಗೆ ಸಹಾಯ ಮಾಡಿದ್ದಾರೆ ಇಷ್ಟೇ ಅಲ್ಲ ಆ ಹಿರಿಯ ವ್ಯಕ್ತಿನ ಊಟ ಮಾಡಿದ್ರಾ ಅಂತ ಡಿಸಿ ಕೇಳಿದಾಗ ಇಲ್ಲ ಸರ್ ಊಟ ಮಾಡಿ ಮೂರು ದಿನ ಆಯ್ತು ಅಂತ ಆ ಬಡ ವ್ಯಕ್ತಿ ಹೇಳಿದ.

ಶ್ರೀಧರ್ ಸಿಂಗ್ ಕೂಡಲೇ ಆ ವ್ಯಕ್ತಿಗೆ ತಮ್ಮ ಆಫೀಸಿನಲ್ಲಿ ಕೂರಿಸಿ ಹೋಟೆಲ್ ನಿಂದ ಆತನಿಗೆ ಹೊಟ್ಟೆತುಂಬಾ ಊಟ ತರಿಸಿಕೊಟ್ಟರು ಪಾಪ ಬಡ ವ್ಯಕ್ತಿ ಹೊಟ್ಟೆ ತುಂಬಾ ಊಟ ಮಾಡಿದ ನಂತರ ತಮ್ಮ ಪ್ಯಾಕೆಟ್ ನಲ್ಲಿದ್ದ ಪರ್ಸ್ ತೆಗೆದು ಹತ್ತು ಸಾವಿರ ಹಣವನ್ನು ಈ ವಯಸ್ಸಾದ ವ್ಯಕ್ತಿ ಕೈಗೆ ಕೊಟ್ಟರು.‌ ನಂತರ ತಾನು ಇಲ್ಲಿಗೇಕೆ ಬಂದೆ ತನ್ನ ಸಮಸ್ಯೆಗಳು ಏನು ಅಂತ ಡಿಸಿ ಶ್ರೀಧರ್ ಸಿಂಗ್ ಬಳಿ ಹೇಳಿಕೊಂಡರು ಈ ವ್ಯಕ್ತಿಯ ಸಮಸ್ಯೆ ಕೇಳಿ ತಕ್ಷಣ ಈ ವ್ಯಕ್ತಿಗೆ ಸಹಾಯ ಮಾಡುವಂತೆ ಶ್ರೀಧರ್ ಸಿಂಗ್ ತಮ್ಮ ಅಧಿಕಾರಿಗಳಿಗೆ ಸೂಚನೆ ಕೊಟ್ಟರು. ಇದೇ ಮೊದಲ ಬಾರಿ ಅಲ್ಲ ತಮ್ಮ ಬಳಿ ದೂರು ಹೇಳಿಕೊಳ್ಳಲು ಬರುವ ಹಲವು ಕಷ್ಟದಲ್ಲಿರುವ ಜನಗಳಿಗೆ ಶ್ರೀದರ್ ಸಿಂಗ್ ಕುಮಾರ್ ಅವರು ತಮ್ಮ ಸ್ವಂತ ಹಣದಿಂದ ಸಹಾಯ ಮಾಡುತ್ತಾರೆ.

Leave a Reply

%d bloggers like this: