ಹಳೆ ಕನ್ನಡ ಹಾಡಿಗೆ ರೀಲ್ಸ್ ಮಾಡಿದ ನಿವೇದಿತಾ ಗೌಡ, ವಿಡಿಯೋ ವೈರಲ್

ಟಿಕ್ ಟಾಕ್ ಸ್ಟಾರ್ ಬಿಗ್ ಬಾಸ್ ಶೋ ಸ್ಪರ್ಧಿಯಾಗಿ ಮಿಂಚಿದ ನಿವೇದಿತಾ ಗೌಡ ಇದೀಗ ಸೋಶಿಯಲ್ ಮೀಡಿಯಾದಲ್ಲಿ ಹರಿಬಿಟ್ಟಿರೋ ಹೊಸ ವೀಡಿಯೋವೊಂದು ಸಖತ್ ವೈರಲ್ ಆಗಿದೆ. ಇಷ್ಟು ದಿನಗಳ ಕಾಲ ತುಂಡುಡುಗೆ ತೊಟ್ಟು, ಡ್ಯಾನ್ಸ್ ಮತ್ತು ಕೆಲವು ರೀಲ್ಸ್ ಗಳನ್ನ ಮಾಡುವ ಎಲ್ಲರ ಗಮನ ಸೆಳೆದಿದ್ದ ನಿವೇದಿತಾ ಗೌಡ ಇದೀಗ ಕ್ರೇಜಿ಼ಸ್ಟಾರ್ ವಿ.ರವಿಚಂದ್ರನ್ ಅವರ ಸೂಪರ್ ಹಿಟ್ ಸಿನಿಮಾ ರಾಮಾಚಾರಿ ಚಿತ್ರದ ಹಾಡೊಂದಕ್ಕೆ ಲಂಗ ದಾವಣಿಯುಟ್ಟು ಗದ್ದೆಯ ನಡುವೆ ಹೆಜ್ಜೆ ಹಾಕಿದ್ದಾರೆ‌. ಹಸಿರು ಗದ್ದೆಯ ನಡುವೆ ನಿಂತು ರವಿಚಂದ್ರನ್ ಮತ್ತು ಮಾಲಾ ಶ್ರೀ ಅವರು ಕುಣಿದು ಕುಪ್ಪಳಿಸಿದ ಆಕಾಶದಾಗೆ ಯಾರೋ ಮಾಯಗಾರನೋ ಎಂಬ ಹಾಡಿಗೆ ನಿವೇದಿತಾ ಗೌಡ ಸಖತ್ ಎಂಜಾಯ್ ಮಾಡ್ತಾ ರೀಲ್ಸ್ ಮಾಡಿದ್ದಾರೆ. ನಿವೇದಿತಾ ಗೌಡ ಅವರ ಈ‌ ಹೊಸ ವೀಡಿಯೋ ಇದೀಗ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ.

ನಿವೇದಿತಾ ಗೌಡ ಈಗಾಗಲೇ ಸಾಕಷ್ಟು ರೀಲ್ಸ್ ಗಳನ್ನ ಮಾಡಿ ಸೋಶಿಯಲ್ ಮೀಡಿಯಾದಲ್ಲಿ ಅಪಾರ ಅಭಿಮಾನಿಗಳನ್ನ ಹೊಂದಿದ್ದಾರೆ. ಅವರು ಮಾಡುವ ಕೆಂಟೆಂಟ್ ಗಳಿಗೆ, ರೀಲ್ಸ್ ಗಳಿಗೆ ಮತ್ತು ನಿವೇದಿತಾ ಗೌಡ ಅವರ ಡ್ರೆಸ್ ಗಳಿಗೆ ನೆಟ್ಟಿಗರು ಫಿಧಾ ಆಗ್ತಾನೇ ಇರ್ತಾರೆ. ಬಿಗ್ ಬಾಸ್ ನಲ್ಲಿ ತನ್ನ ಬಬ್ಲಿ ಬಬ್ಲಿ ಮಾತುಗಳ ಮೂಲಕ ಎಲ್ಲರ ಗಮನ ಸೆಳೆದು ಅದೇ ಬಿಗ್ ಬಾಸ್ ಮನೆಯಲ್ಲಿ ಪರಿಚಯವಾದ ರ್ಯಾಪರ್ ಚಂದನ್ ಶೆಟ್ಟಿ ಅವರನ್ನ ಮದುವೆಯಾಗಿರೋ ನಿವೇದಿತಾ ಗೌಡ ಇದೀಗ ಮೊದಲಿಗಿಂತಾನೂ ಸಾಕಷ್ಟು ಜನಪ್ರಿಯತೆ ಪಡೆದುಕೊಂಡಿದ್ದಾರೆ. ಇನ್ನು ರಿಯಾಲಿಟಿ ಶೋಗಳಲ್ಲಿ ಭಾಗವಹಿಸುವ ನಿವೇದಿತಾ ಗೌಡ ಅವರು ಇದೀಗ ಕಿರುತೆರೆ ಮತ್ತು ಸೋಶಿಯಲ್ ಮೀಡಿಯಾಗಳಲ್ಲಿ ಸಖತ್ ಬಿಝಿ಼ಯಾಗಿದ್ದಾರೆ. ಈಗ ಇತ್ತೀಚೆಗೆ ತಾನೇ ಹರಿಬಿಟ್ಟಿರೋ ನಿವೇದಿತಾ ಗೌಡ ಅವರ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ಭಾರಿ ವೈರಲ್ ಆಗಿದ್ದು, ಅವರ ಅಭಿಮಾನಿಗಳು ಸೂಪರ್ ಎಂದು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.

Leave a Reply

%d bloggers like this: