ಹಲವು ವರ್ಷಗಳಿಂದ ಚಿತ್ರರಂಗದಿಂದ ದೂರ ಉಳಿದಿದ್ದ ಸ್ಟಾರ್ ನಟಿ ಈಗ ಮತ್ತೆ ಮಗುವಿನ ಮೂಲಕ ಸುದ್ದಿ

ನಿಮ್ಮ ಕೆನ್ನೆಯ ಹೊಳಪು ನೋಡುತ್ತಿದ್ದರೆ ನಿಮಗೆ ಖಂಡಿತಾ ಹೆಣ್ಣು ಮಗುನೇ ಜನಿಸುತ್ತದೆ ಎಂದು ಬಾಲಿವುಡ್ ಜನಪ್ರಿಯ ನಟಿ ಬಿಪಾಶಾ ಬಸು ಅವರಿಗೆ ನೆಟ್ಟಿಗರು ಕಮೆಂಟ್ ಮಾಡುತ್ತಿದ್ದಾರೆ. ಬಾಲಿವುಡ್ ನಟಿ ಬಿಪಾಶಾ ಬಸು ಅವರು ಸದ್ಯಕ್ಕೆ ತುಂಬು ಗರ್ಭಿಣಿ. ಇತ್ತೀಚೆಗೆ ಕೆಲವು ದಿನಗಳ ಹಿಂದೆಯಷ್ಟೇ ನಟಿ ಬಿಪಾಶಾ ಬಸು ಅವರು ಬೇಬಿ ಬಂಪ್ ಪೋಟೋಶೂಟ್ ಮಾಡಿಸಿ ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಶೇರ್ ಮಾಡಿಕೊಳ್ಳುವ ಮೂಲಕ ಬಿಟೌನ್ ನಲ್ಲಿ ಭಾರಿ ಸೌಂಡ್ ಮಾಡಿದ್ದರು. ಬಿಪಾಶಾ ಬಸು ಮತ್ತು ಕರಣ್ ಸಿಂಗ್ ಗ್ರೋವರ್ ದಂಪತಿಗಳು ಇದೀಗ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಬಿಪಾಶಾ ಬಸು ಅವರು 2016ರಲ್ಲಿ ಕರಣ್ ಸಿಂಗ್ ಗ್ರೋವರ್ ಎಂಬುವರೊಟ್ಟಿಗೆ ದಾಂಪತ್ಯ ಜೀವನಕ್ಕೆ ಹೆಜ್ಜೆ ಇಟ್ಟಿದ್ದರು.

ಸಾಂಸಾರಿಕ ಜೀವನಕ್ಕೆ ಹೆಜ್ಜೆ ಇಟ್ಟ ಬಳಿಕ ನಟಿ ಬಿಪಾಶಾ ಬಸು ಅವರು ಬಣ್ಣದ ಲೋಕದಿಂದ ಕೊಂಚ ಅಂತರ ಕಾಯ್ದುಕೊಂಡು ತಮ್ಮ ಜೀವನ ಸಂಗಾತಿ ಕರಣ್ ಸಿಂಗ್ ಅವರೊಟ್ಟಿಗೆ ದಾಂಪತ್ಯ ಜೀವನದಲ್ಲಿ ತೊಡಗಿಸಿಕೊಂಡು ಕುಟುಂಬದವರೊಟ್ಟಿಗೆ ಹೆಚ್ಚು ಕಾಲ ಕಳೆಯುತ್ತಿದ್ದರು. ಅದರ ಜೊತೆಗೆ ತಮ್ಮ ಅಭಿಮಾನಿಗಳಿಗೆ ತಮ್ಮ ವೈಯಕ್ತಿಕ ಜೀವನದ ಒಂದಷ್ಟು ವಿಚಾರಗಳನ್ನ ಸೋಶಿಯಲ್ ಮೀಡಿಯಾ ಮುಖಾಂತರ ಶೇರ್ ಮಾಡಿಕೊಳ್ಳುತ್ತಿದ್ದರು. ಇದೀಗ ಅದರಂತೆ ತಮ್ಮ ಮೊದಲ ಮಗುವಿನ ನಿರೀಕ್ಷೆಯಲ್ಲಿ ಇರೋ ಬಿಪಾಶಾ ಬಸು ಅವರು ತಮ್ಮ ಹೊಟ್ಟೆಯ ಭಾಗವನ್ನ ನಯವಾಗಿ ನೇವರಿಸುತ್ತಾ ತನ್ನೊಟ್ಟೆಯಲ್ಲಿರುವ ಮಗುವಿಗೆ ಮುತ್ತು ನೀಡುತ್ತಿರುವುದನ್ನ ವೀಡಿಯೋ ಮಾಡಿ ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಶೇರ್ ಮಾಡಿದ್ದಾರೆ. ಇದನ್ನ ಕಂಡ ನೆಟ್ಟಿಗರು ನೀವು ತುಂಬಾ ಮುದ್ದಾಗಿದ್ದೀರಿ. ನಿಮಗೆ ನಿಮ್ಮಂತೆಯೇ ಒಂದು ಮುದ್ದಾದ ಹೆಣ್ಣು ಮಗು ಜನಿಸಲಿದೆ ಎಂದು ಕಮೆಂಟ್ ಮಾಡಿ, ಬಿಪಾಶಾ ಬಸು ಅವರ ಈ ಹೊಸ ವೀಡಿಯೋಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

Leave a Reply

%d bloggers like this: