ಹದಿನೈದು ವರ್ಷಗಳ ನಂತರ ಮತ್ತೆ ಕಾಣಿಸಿಕೊಂಡ ಕನ್ನಡದ ಜನಪ್ರಿಯ ನಟಿ, ಅಪ್ಪು ಅವರ ಬಗ್ಗೆ ಕುತೂಹಲದ ವಿಷಯ ಹೇಳಿದ್ರು

ಚಂದನವನದ ಧೃವತಾರೆ ಅಪ್ಪು ಅವರು ದೈಹಿಕವಾಗಿ ನಮ್ಮನ್ನಗಲಿ ವರ್ಷದ ಸನಿಹ ಆಗುತ್ತಿದ್ದರೂ ಕೂಡ ಅವರ ಬಗ್ಗೆ, ಅವರು ನಟಿಸಿದ್ದ ಸಿನಿಮಾದ ಬಗ್ಗೆ, ಅವರ ವ್ಯಕ್ತಿತ್ವ ಗುಣದ ಬಗ್ಗೆ ಸದಾ ಒಬ್ಬರಲ್ಲ ಒಬ್ಬರು ಮಾತಾನಾಡಿ ಅವರನ್ನ ಶಾಶ್ವತವಾಗಿ ನಮ್ಮ ನಡುವೆ ಇರುವಂತೆ ಮಾಡುತ್ತಿದ್ದಾರೆ. ಅದರಂತೆ ಇದೀಗ ಅಪ್ಪು ಅವರ ಜೊತೆ ತಾವು ಹೊಂದಿದ್ದ ಉತ್ತಮ ಒಡನಾಟ, ಅವರ ಸ್ನೇಹ ಪರತೆಯ ವ್ಯಕ್ತಿತ್ವ ನೆನೆದು ಸುದ್ದಿಯಾಗಿರೋದು ನಟಿ ಆಶಿತಾ. ನಟಿ ಆಶಿತಾ ಉತ್ತಮ ನಟಿ ಮಾತ್ರ ಅಲ್ಲದೆ ಒಂದೊಳ್ಳೆ ಡ್ಯಾನ್ಸರ್ ಕೂಡ ಹೌದು. ಸಿನಿಮಾರಂಗದಿಂದ ದೂರ ಇರೋ ನಟಿ ಆಶಿತಾ ಅವರು ಕನ್ನಡದಲ್ಲಿ ವಿಜಯ್ ರಾಘವೇಂದ್ರ ಅವರೊಟ್ಟಿಗೆ ಹಾರ್ಟ್ ಬೀಟ್ ಎಂಬ ಸೂಪರ್ ಹಿಟ್ ಚಿತ್ರದಲ್ಲಿ ಕನ್ನಡ ಸಿನಿ ಪ್ರೇಕ್ಷಕರ ಮನಗೆಲ್ಲುವ ಮೂಲಕ ಸ್ಯಾಂಡಲ್ ವುಡ್ ನಲ್ಲಿ ಶೈನ್ ಆಗಿದ್ರು.

ಅದ್ರಂತೆ ಅಜಯ್ ರಾವ್ ಜೊತೆ ಗ್ರೀನ್ ಸಿಗ್ನಲ್, ಸುನೀಲ್ ಜೊತೆ ಬಾ ಬಾರೋ ರಸಿಕ, ರೋಡ್ ರೋಮಿಯೋ, ತವರಿನ ಸಿರಿ ಸಿನಿಮಾದಲ್ಲಿ ಶಿವಣ್ಣ ಅವರ ತಂಗಿಯ ಪಾತ್ರದಲ್ಲಿ ಆಶಿತಾ ನಟಿಸಿದ್ದಾರೆ. ಅದರ ಜೊತೆಗೆ ಅಪ್ಪು ಅವರ ಜೊತೆ ಆಕಾಶ್ ಸಿನಿಮಾದಲ್ಲಿ ಅಪ್ಪು ಅವರ ತಂಗಿಯಾಗಿ ಕೂಡ ನಟಿಸಿದ್ದಾರೆ. ಇತ್ತೀಚೆಗೆ ನಟಿ ಆಶಿತಾ ಅವರು ಖಾಸಗಿ ಯೂಟ್ಯೂಬ್ ವೊಂದರಲ್ಲಿ ಸಂದರ್ಶನದಲ್ಲಿ ಮಾತನಾಡುತ್ತಾ ಅಪ್ಪು ಅವರ ಜೊತೆ ಆಕಾಶ್ ಚಿತ್ರದ ಮೂಲಕ ಅವರೊಟ್ಟಿಗೆ ಉತ್ತಮ ಸ್ನೇಹ ಭಾಂಧವ್ಯ ಹೇಗಿತ್ತು ಅನ್ನೋದನ್ನ ಹಂಚಿಕೊಂಡಿದ್ದಾರೆ. ಅಪ್ಪು ಸರ್ ಅವರು ತುಂಬಾ ಸಿಂಪಲ್ ಅಂಡ್ ಒಂದು ಅದ್ಬುತ ವ್ಯಕ್ತಿತ್ವ. ಅವರು ಒಬ್ಬ ಸೂಪರ್ ಡ್ಯಾನ್ಸರ್ ಆಗಿ ನನಗೂ ಕೂಡ ನೀವೊ ಕೂಡ ಉತ್ತಮ ಡ್ಯಾನ್ಸರ್ ಎಂದು ಅಶಿತಾ ಅವರಿಗೆ ಮೆಚ್ಚುಗೆಯ ಮಾತುಗಳನ್ನಾಡಿದ್ದರಂತೆ. ಅವರು ಒಬ್ಬ ಸ್ನೇಹಿತರಾಗಿ, ಅಣ್ಣನ ರೀತಿಯಲ್ಲಿ ಆಶಿತಾ ಅವರಿಗೆ ಜೊತೆ ಆಗಿದ್ದರಂತೆ.

ಅವರ ಸ್ನೇಹ ಭಾಂಧವ್ಯ ಹೇಗಿತ್ತು ಅಂದ್ರೆ ಆಕಾಶ್ ಚಿತ್ರದ ಶೂಟಿಂಗ್ ನಂತರ ರಮ್ಯಾ, ಅಪ್ಪು ಮತ್ತು ಆಶಿತಾ ಅವರು ಲಾಂಗ್ ಡ್ರೈವ್ ಕೂಡ ಹೋಗಿದ್ದರಂತೆ. ಅಪ್ಪು ಅವರನ್ನ ಆಶಿತಾ ಅವರು ತಮ್ಮ ಅಕ್ಕನ ಮದುವೆಗೆ ಮೂರು ದಿನ ಮುಂಚೆ ಬರ್ಬೇಕು ಅಂತ ಹೇಳಿದಾಗ ಅದ್ರಂತೆ ಮೂರ್ ದಿನಕ್ಕೆ ಮುಂಚೆನೇ ಮದುವೆಗೆ ಹೋಗಿ ಸುಮಾರು ಗಂಟೆಗಳ ಕಾಲ ಮದುವೆ ಮನೆಯಲ್ಲಿ ಎಲ್ಲರೊಟ್ಟಿಗೆ ಬೆರೆತು ಮಾತನಾಡಿದ್ದರಂತೆ. ಅದಲ್ಲದೆ ಅಪ್ಪು,ಸರ್ ಅವರಿಗೆ ಮುಸ್ಲಿಂ ಬಿರಿಯಾನಿ ಅಂದರೆ ತುಂಬಾ ಇಷ್ಟ ಅಂತೆ. ಅವರು ಈ ಬಿರಿಯಾನಿಗೋಸ್ಕರ 15 ನಿಮಿಷಗಳ ಕಾಲ ಯಾವುದೇ ಹಮ್ಮು ಬಿಮ್ಮು ಇಲ್ಲದೆ ಸರತಿ ಸಾಲಿನಲ್ಲಿ ನಿಂತು ಬಿರಿಯಾನಿ ಸವಿದಿದ್ದರಂತೆ. ಹೀಗೆ ಅಪ್ಪು ಅವರ ಸರಳ ವ್ಯಕ್ತಿತ್ವ ಗುಣವನ್ನ ನೆನೆದಿದ್ದಾರೆ ನಟಿ ಆಶಿತಾ. ನಿಜಕ್ಕೂ ಕೂಡ ಪುನೀತ್ ರಾಜ್ ಕುಮಾರ್ ಅವರು ತಮ್ಮ ವ್ಯಕ್ತಿತ್ವ ಗುಣದ ಮೂಲಕವೇ ಎಲ್ಲರ ಮನ ಗೆದ್ದು ಸೂರ್ಯ ಚಂದ್ರು ಇರ್ತಾರೋ ಇಲ್ವೋ ಗೊತ್ತಿಲ್ಲ. ಆದ್ರೇ ಅಪ್ಪು ಮಾತ್ರ ಶಾಶ್ವತವಾಗಿ ಅಭಿಮಾನಿಗಳ ಹೃದಯ ಸಿಂಹಾಸನದಲ್ಲಿ ನೆಲೆಸಿರ್ತಾರೆ ಅನ್ನೋದಕ್ಕೆ ಇಂತಹ ಅದೆಷ್ಟೋ ಸೆಲೆಬ್ರಿಟಿಗಳು ಹೇಳೋ ಅವರ ಮಾತೇ ಸಾಕ್ಷಿ.

Leave a Reply

%d bloggers like this: