ಹಬ್ಬದ ದಿನವೇ ಸಿಹಿ ಸುದ್ದಿ ನೀಡಿದ ಸ್ಯಾಂಡಲ್ ವುಡ್ ಕ್ವೀನ್ ರಮ್ಯಾ ಅವರು

ಸ್ಯಾಂಡಲ್ ವುಡ್ ಬ್ಯೂಟಿ ಕ್ವೀನ್ ರಮ್ಯಾ ಎಲ್ಲರ ಅಭಿಲಾಶೆಯಂತೆ ಸಿನಿಮಾರಂಗಕ್ಕೆ ಮತ್ತೇ ರೀ ಎಂಟ್ರಿ ಕೊಟ್ಟಿದ್ದಾರೆ, ಆದರೆ ನಟಿಯಾಗಿ ಅಲ್ಲ. ಹೌದು ಕನ್ನಡ ಚಿತ್ರರಂಗದ ಎಂದೂ ಮರೆಯದ ಮೋಹಕ ತಾರೆ ನಟಿ ರಮ್ಯಾ ಅವರು ರಾಜಕೀಯರಂಗ ಪ್ರವೇಶ ಪಡೆದ ನಂತರ ಬಣ್ಣದ ಲೋಕದಿಂದ ಅಂತರ ಕಾಯ್ದುಕೊಂಡಿದ್ದರು. ಅವರು ನಟಿಸಿದ ಕೊನೆಯ ಕನ್ನಡ ಸಿನಿಮಾ ಅಂದರೆ ಅದು ದಿಗಂತ್ ಮುಖ್ಯ ಭೂಮಿಕೆಯಲ್ಲಿ ಬಂದ ನಾಗರಹಾವು ಸಿನಿಮಾ. ಇದಾದ ನಂತರ ಅತ್ತ ರಾಜಕೀಯ ಕ್ಷೇತ್ರದಲ್ಲಿಯೂ ಇಲ್ಲದೆ ಇತ್ತ ಸಿನಿಮಾರಂಗದಲ್ಲಿಯೂ ಇಲ್ಲದೆ ಹೆಚ್ಚಿನ ಅಧ್ಯಾಯನಕ್ಕಾಗಿ ಎಂದು ವಿದೇಶದಲ್ಲಿದ್ದರು. ತದ ನಂತರ ದೇಶದ ಪ್ರಚಲಿತ ಘಟನೆಗಳ ಬಗ್ಗೆ ತಮ್ಮ ಅನಿಸಿಕೆ ಅಭಿಪ್ರಾಯಗಳನ್ನ ಸೋಶೀಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುವ ಮೂಲಕ ಸಾಮಾಜಿಕ ಜಾಲತಾಣದಲ್ಲಿ ಸಕ್ರೀಯವಾಗಿ ತೊಡಗಿಕೊಂಡರು.

ನಂತರ ತಮ್ಮ ದೈನಂದಿನ ಅಪ್ ಡೇಟ್ಸ್ ನೀಡುವ ಮೂಲಕ ಅಭಿಮಾನಿಗಳಿಗೆ ಮತ್ತೆ ಹತ್ತಿರವಾದರು. ಕನ್ನಡದ ಹೊಸ ಹೊಸ ಸಿನಿಮಾಗಳ ಬಗ್ಗೆ ಚಿತ್ರಗಳ ಪೋಸ್ಟರ್ ಗಳನ್ನ ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳುವುದರ ಜೊತೆಗೆ ಹೊಸ ತಂಡಗಳಿಗೆ ಪ್ರೋತ್ಸಾಹ ನೀಡುವಂತೆ ಮನವಿ ಮಾಡುತ್ತಿದ್ದಾರೆ. ರಮ್ಯಾ ಅವರು ಯಾವಾಗ ಸೋಶಿಯಲ್ ಮೀಡಿಯಾದಲ್ಲಿ ಸಕ್ರೀಯವಾಗಿ ತೊಡಗಿಸಿಕೊಂಡರೋ ಆಗ ಮತ್ತೆ ಅವರ ಅಭಿಮಾನಿಗಳು ನೀವು ಮತ್ತೆ ಸಿನಿಮಾದಲ್ಲಿ ನಟಿಸಿ ಎಂದು ಮನವಿ ಮಾಡುತ್ತಿದ್ದರು. ರಮ್ಯಾ ಅವರು ಕೂಡ ಮತ್ತೆ ತಾನು ಸಿನಿಮಾರಂಗಕ್ಕೆ ರೀ ಎಂಟ್ರಿ ಆದ್ರೆ ಅಪ್ಪು ಅವರ ಚಿತ್ರದ ಮೂಲಕವೇ ಎಂದು ಹೇಳಿದ್ರು. ಆದರೆ ಇದು ಈಗ ಅಸಾಧ್ಯವಾಗಿದೆ.

ಆದರೆ ರಮ್ಯಾ ಅವರು ಅಭಿಮಾನಿಗಳ ಒತ್ತಾಸೆಯಂತೆ ಸಿನಿಮಾರಂಗಕ್ಕೆ ರೀ ಎಂಟ್ರಿ ಕೊಟ್ಟಿದ್ದಾರೆ. ಅದು ಕೂಡ ನಿರ್ಮಾಪಕಿಯಾಗಿ ಎಂಬುದು ವಿಶೇಷ. ಹೌದು ರಮ್ಯಾ ಅವರು ಇತ್ತೀಚೆಗೆ ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಗುಡ್ ನ್ಯೂಸ್ ನೀಡ್ತೀನಿ ಅಂದಿದ್ರು. ಅದ್ರಂತೆ ಈಗ ಆ ಗುಡ್ ನ್ಯೂಸ್ ಒಂದನ್ನ ತಿಳಿಸಿದ್ದಾರೆ. ಆಪಲ್ ಬಾಕ್ಸ್ ಸ್ಟೂಡಿಯೋಸ್ ಎಂಬ ನಿರ್ಮಾಣ ಸಂಸ್ಥೆಯನ್ನ ರಮ್ಯಾ ಅವರು ಆರಂಭಿಸಿದ್ದಾರೆ. ಈ ಮೂಲಕ ರಮ್ಯಾ ಅವರು ಕನ್ನಡ ಚಿತ್ರರಂಗಕ್ಕೆ ನಿರ್ಮಾಪಕಿಯಾಗಿ ರೀ ಎಂಟ್ರಿ ಪಡೆದುಕೊಂಡಿದ್ದಾರೆ. ಈ ಬಗ್ಗೆ ಪೋಸ್ಟ್ ವೊಂದನ್ನ ಹಂಚಿಕೊಂಡಿರೋ ರಮ್ಯಾ ಅವರು ತಮ್ಮ ಚಿತ್ರರಂಗದ ಪ್ರಯಾಣವನ್ನ ಮೆಲುಕು ಹಾಕಿದ್ದಾರೆ. ತಮ್ಮ ಆಪಲ್ ಬಾಕ್ಸ್ ಸಂಸ್ಥೆ ಈಗ ಎರಡು ಚಿತ್ರಗಳನ್ನ ನಿರ್ಮಾಣ ಮಾಡಲು ಸಜ್ಜಾಗಿದೆಯಂತೆ.