ಹಬ್ಬದ ದಿನವೇ 1.4 ಕೋಟಿ ಬೆಲೆಯ ಐಷಾರಾಮಿ ಕಾರು ಖರೀದಿಸಿದ ಸ್ಟಾರ್ ದಂಪತಿ

ಬಾಲಿವುಡ್ ನ ಯಶಸ್ವಿ ತಾರಾ ದಂಪತಿಗಳ ಪೈಕಿ ನಟ ರಿತೇಶ್ ದೇಶ್ಮುಖ್ ಮತ್ತು ಜೆನಿಲಿಯಾ ಜೋಡಿ ಕೂಡ ಒಂದು. ಈ ಜೋಡಿಗಳು ಸೋಶಿಯಲ್ ಮೀಡಿಯಾದಲ್ಲಿ ಸದಾ ಸಕ್ರೀಯವಾಗಿ ತೊಡಗಿಸಿಕೊಂಡಿರುತ್ತಾರೆ. ನಟ ರಿತೇಶ್ ದೇಶ್ ಮುಖ್ ಅವರನ್ನ ಮದುವೆಯಾದ ನಂತರ ನಟಿ ಜೆನಿಲಿಯಾ ಅವರು ಸಿನಿಮಾರಂಗದಿಂದ ಅಂತರ ಕಾಯ್ದುಕೊಂಡಿದ್ದಾರೆ. ಇಬ್ಬರು ಮಕ್ಕಳ ಸುಂದರ ಸಂಸಾರವನ್ನ ಕಟ್ಕೊಂಡಿರೋ ಜೆನಿಲಿಯಾ ಅವರು ಮಕ್ಕಳ ವಿಧ್ಯಾಭ್ಯಾಸದ ಕಡೆಗೆ ಮತ್ತು ಕುಟುಂಬದ ಜೊತೆಗೆ ತೊಡಗಿಕೊಂಡಿದ್ದಾರೆ. ಇನ್ನು ನಟ ರಿತೇಶ್ ಮುಖ್ ಎಂದಿನಂತೆ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ದಂಪತಿಗಳಿಬ್ಬರು ಆಗಾಗ ರೀಲ್ಸ್ ಮಾಡುವ ಮೂಲಕ ಭಾರಿ ವೈರಲ್ ಆಗ್ತಾನೇ ಇರ್ತಾರೆ. ಈ ಕ್ಯೂಟ್ ಕಪಲ್ ಗಳ ವೀಡಿಯೋಗಳಿಗೆ ಅಪಾರ ಮೆಚ್ಚುಗೆ ಕೂಡ ವ್ಯಕ್ತವಾಗುತ್ತವೆ.

ಬಾಲಿವುಡ್ ನ ಬಹುತೇಕ ಸ್ಟಾರ್ ನಟ ನಟಿಯರೊಟ್ಟಿಗೆ ಉತ್ತಮ ಸ್ನೇಹ ಸಂಬಂಧ ಹೊಂದಿರೋ ರಿತೇಶ್ ದೇಶ್ ಮುಖ್ ಮತ್ತು ಜೆನಿಲಿಯಾ ಆಗಾಗ ತಮ್ಮ ಆಪ್ತರ ಮನೆಗೆ ಭೇಟಿ ನೀಡುತ್ತಲೆ ಇರ್ತಾರೆ. ಅದರಂತೆ ನಿನ್ನೆ ಗೌರಿ ಗಣೇಶ ಹಬ್ಬದ ದಿನದ ಅಂಗವಾಗಿ ತಮ್ಮ ಆಪ್ತ ಗೆಳೆಯರಲ್ಲಿ ಒಬ್ಬರಾದ ನಟಿ ಶಿಲ್ಪಾ ಶೆಟ್ಟಿ ಅವರ ಮನೆಗೆ ದಂಪತಿಗಳಿಬ್ಬರು ಭೇಟಿ ನೀಡಿದ್ದಾರೆ. ಹೌದು ನಟ ರಿತೇಶ್ ದೇಶಮುಖ್ ಅವರು ತಮ್ಮ ಪ್ರೀತಿಯ ಮಡದಿ ಜೆನಿಲಿಯಾ ಮತ್ತು ತಮ್ಮಿಬ್ಬರ ಮುದ್ದು ಮಕ್ಕಳು ಬಿಳಿ ಬಣ್ಣದ ವಸ್ತ್ರ ಧರಿಸಿ ನಟಿ ಶಿಲ್ಪಾ ಶೆಟ್ಟಿ ಅವರ ಮನೆಗೆ ಗಣೇಶೋತ್ಸವ ಹಬ್ಬದ ಆಚರಣೆಗೆ ಹೋಗಿದ್ದಾರೆ. ಅದೂ ಕೂಡ ಬರೋಬ್ಬರಿ 1.4 ಕೋಟಿ ಮೌಲ್ಯದ ಬಿಎಂಡಬ್ಲ್ಯೂ ಕಾರಿನಲ್ಲಿ ಈ ತಾರಾ ದಂಪತಿಗಳು ಎಂಟ್ರಿ ಕೊಟ್ಟಿದ್ದು ಕ್ಯಾಮೆರಾಗಳ ಕಣ್ಣು ಕುಕ್ಕುವಂತೆ ಮಾಡಿದೆ. ಇದೇ ಸಂಧರ್ಭದಲ್ಲಿ ಫುಲ್ ಗ್ರ್ಯಾಂಡ್ ಆಗಿ ಅಟ್ರಾಕ್ಟೀವ್ ಆಗಿ ಶಿಲ್ಪಾ ಶೆಟ್ಟಿ ಅವರ ಮನೆಗೆ ಆಗಮಿಸಿದ ರಿತೇಶ್ ದೇಶ್ ಮುಖ್ ಮತ್ತು ಜೆನಿಲಿಯಾ ಅವರು ಫೋಟೋಗೆ ಪೋಸ್ ಕೊಟ್ಟಿದ್ದಾರೆ. ಈ ಫೋಟೋಗಳು ಇದೀಗ ಸೋಶಿಯಲ್ ಮೀಡಿಯಾಗಳಲ್ಲಿ ಸಖತ್ ವೈರಲ್ ಆಗಿವೆ.

Leave a Reply

%d bloggers like this: