ಹಬ್ಬದ ದಿನ ಮಕ್ಕಳ ಮುದ್ದಾದ ಫೋಟೋಗಳನ್ನು ಹಂಚಿಕೊಂಡ ನಟಿ ಅಮೂಲ್ಯ ಅವರು

ಸ್ಯಾಂಡಲ್ ವುಡ್ ರೌಡಿ ಬೇಬಿ ಅಂತಾನೇ ಕರೆಸಿಕೊಳ್ಳುತ್ತಿದ್ದ ನಟಿ ಅಮೂಲ್ಯ ಅವರು ದೀಪಾವಳಿ ಹಬ್ಬವನ್ನ ಅತ್ಯಂತ ಸಂಭ್ರಮ ಸಡಗರದಿಂದ ಆಚರಿಸಿದ್ದಾರೆ. ಹಬ್ಬದ ವಿಶೇಷ ಸಂಭ್ರಮದಲ್ಲಿ ನಟಿ ಅಮೂಲ್ಯ ಅವರು ಇದೇ ಮೊದಲ ಬಾರಿಗೆ ತಮ್ಮ ಮುದ್ದು ಅವಳಿ ಮಕ್ಕಳ ಫೋಟೋವನ್ನ ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದಾರೆ. ನಟಿ ಅಮೂಲ್ಯ ಅವರು ಚಿತ್ರರಂಗಕ್ಕೆ ಬಾಲನಟಿಯಾಗಿ ಪಾದಾರ್ಪಣೆ ಮಾಡಿ ದರ್ಶನ್, ಸುದೀಪ್ ಅವರಂತಹ ಸ್ಟಾರ್ ನಟರ ಸಿನಿಮಾಗಳಲ್ಲಿ ನಟಿಸಿ ತದ ನಂತರ ಗಣೇಶ್ ಅವರ ಜೊತೆ ಚೆಲುವಿನ ಚಿತ್ತಾರ ಅನ್ನೋ ಲವ್ ಸ್ಕೋರಿ ಸಿನಿಮಾದಲ್ಲಿ ನಾಯಕಿಯಾಗಿ ನಟಿಸಿ ನಾಡಿನಾದ್ಯಂತ ಅಪಾರ ಜನಪ್ರಿಯತೆ ಗಳಿಸಿ ನಾಡಿನ ಮನೆ ಮಗಳಂತೆ ಹೆಸರು ಮಾಡಿದವರು.

ಗಣೇಶ್, ಯಶ್, ಪ್ರೇಮ್ ಸೇರಿದಂತೆ ಒಂದಷ್ಟು ನಟರ ಜೊತೆ ಸಿನಿಮಾಗಳಲ್ಲಿ ನಟಿಸಿ ಕನ್ನಡದ ಬೇಡಿಕೆಯ ನಟಿಯಾಗಿ ಮಿಂಚಿದ್ದ ಅಮೂಲ್ಯ ಜಗದೀಶ್ ಅವರನ್ನ ಮದುವೆಯಾಗಿ ಇದೀಗ ಇಬ್ಬರು ಮುದ್ದಾದ ಅವಳಿ ಗಂಡು ಮಕ್ಕಳೊಟ್ಟಿಗೆ ಸುಖ ಸಂಸಾರ ನಡೆಸುತ್ತಿದ್ದಾರೆ. ಮದುವೆ ಆದ ನಂತರದಲ್ಲಿ ಸಿನಿಮಾಗಳಿಂದ ಅಂತರ ಕಾಯ್ದುಕೊಂಡ ಅಮೂಲ್ಯ ಇದೀಗ ಮಕ್ಕಳಾದ ಮೇಲಂತೂ ಯಾವುದೇ ಸಿನಿಮಾಗಳನ್ನ ಸಹ ಒಪ್ಪಿಕೊಂಡಿಲ್ಲ. ಆದರೆ ಸೋಶಿಯಲ್ ಮೀಡಿಯಾದಲ್ಲಿ ಸಖತ್ ಆಕ್ಟೀವ್ ಆಗಿರುವ ಅಮೂಲ್ಯ ಅವರು ತಮ್ಮ ದೈನಂದಿನ ಬದುಕಿನ ಸಂತಸದ ಕ್ಷಣಗಳನ್ನ, ತಮ್ಮ ಮುದ್ದಾದ ಫೋಟೋಗಳನ್ನ ಶೇರ್ ಮಾಡಿಕೊಳ್ತಾನೆ ಇರ್ತಾರೆ. ಈ ಹಿಂದೆ ಅವರು ತಾಯಿಯ ಜವಾಬ್ದಾರಿಯ ಬಗ್ಗೆ ಮಾತೃತ್ವ ಅನ್ನೋದು ಅದು ಒಂದು ರೀತಿ ಪವಾಡ.

ಲೆಕ್ಕವಿಲ್ಲದಷ್ಟು ನಿದ್ದೆಯಿಲ್ಲದ ರಾತ್ರಿಗಳು, ಗಂಟೆಗಟ್ಟಲೆ ಒಟ್ಟಿಗೆ ಮಕ್ಕಳು ಅಳೋದು, ಮಕ್ಕಳಿಗೆ ಊಟ ತಿನ್ನಿಸೋದು, ಹುಚ್ಚುತನ, ಹಸಿವು ಮಕ್ಕಳಿಂದ ಕೆಲವೊಮ್ಮೆ ಆಗೋ ಕಿರಿಕಿರಿ ಇಂತಹ ಅನೇಕ ಸಂಗತಿ ಸನ್ನಿವೇಶಗಳನ್ನ ನಿಮ್ಮೊಂದಿಗೆ ಹಂಚಿಕೊಳ್ಳಬೇಕು ಎಂದು ಬರೆದುಕೊಂಡಿದ್ದರು. ಅದೇ ರೀತಿ ಇದೀಗ ದೀಪಾವಳಿ ಹಬ್ಬದ ವಿಶೇಷವಾಗಿ ತಮ್ಮ ಇಬ್ಬರು ಅವಳಿ ಗಂಡು ಮಕ್ಕಳ ಫೋಟೋವನ್ನ ಶೇರ್ ಮಾಡಿ ಮುದ್ದು ಕಣ್ಮಣಿಗಳ ಮೊದಲ ಬೆಳಕಿನ ಹಬ್ಬ ಎಂದು ಬರೆದುಕೊಂಡಿದ್ದಾರೆ. ಅಮೂಲ್ಯ ಅವರು ತಮ್ಮ ಇಬ್ಬರು ಮುದ್ದು ಮಕ್ಕಳಿಗೆ ಒಂದೇ ರೀತಿಯಾಗಿ ಇಬ್ಬರಿಗೂ ಬಿಳಿ ಬಣ್ಣದ ಬಟ್ಟೆ ಹಾಕಿ ಜೊತೆಯಾಗಿ ಕೂರಿಸಿ ಫೋಟೋ ತೆಗೆದಿದ್ದಾರೆ. ಅಮೂಲ್ಯ ಅವರ ಈ ಮುದ್ದಾದ ‌ಮಕ್ಕಳ ಫೋಟೋ ನೋಡಿ ಅಭಿಮಾನಿಗಳು ಮಕ್ಕಳು ತುಂಬಾ ಮುದ್ದಾಗಿವೆ ಎಂದು ಕಮೆಂಟ್ ಮಾಡಿ ಶುಭಾಶಯ ತಿಳಿಸಿ ತಮ್ಮ ನೆಚ್ಚಿನ ನಟಿಗೆ ಶುಭ ಹಾರೈಸಿದ್ದಾರೆ.

Leave a Reply

%d bloggers like this: