ಹಾವು ಕಚ್ಚಿದಾಗ ಯಾವುದೇ ಕಾರಣಕ್ಕೂ ಈ ರೀತಿಯ ಕೆಲಸವನ್ನು ಮಾತ್ರ ಮಾಡಲೇಬೇಡಿ… ಪ್ರತಿಯೊಬ್ಬರೂ ತಿಳಿಯಲೇಬೇಕಾದ ಮಾಹಿತಿ.. ಹೊಸ ಉಪಾಯ

ಅನಿರಿಕ್ಷೀತವಾಗಿ ಹಾವು ಕಚ್ಚಿದಾಗ ಯಾವುದೇ ಕಾರಣಕ್ಕೂ ಈ ರೀತಿಯ ಕೆಲಸವನ್ನು ಮಾತ್ರ ಮಾಡಲೇಬೇಡಿ. ಸಾಮಾನ್ಯವಾಗಿ ಹಾವು ಅಂದಾಕ್ಷಣ ಎಂತವರಿಗಾದರು ಕೂಡ ಒಂದು ಕ್ಷಣ ಮೈ ಜುಮ್ಮೆನ್ನುಸುತ್ತಿದೆ. ಈ ಹಾವು ಸಾಮಾನ್ಯವಾಗಿ ಜನನಿಬಿಡ ಪ್ರದೇಶಗಳಲ್ಲಿ ಕಾಣಿಸಿಕೊಳ್ಳುವುದಿಲ್ಲ ಎಂಬುದು ಗೊತ್ತೇ ಇದೆ. ಹೆಚ್ಚಾಗಿ ಗ್ರಾಮೀಣ ಭಾಗದಲ್ಲಿ ಹೊಲ,ಗದ್ದೆ ತೋಟ ಗಳಲ್ಲಿ ಕಾಣಿಸಿಕೊಳ್ಳುವ ಹಾವು ಉದ್ದೇಶಪೂರ್ವಕವಾಗಿ ಮನುಷ್ಯರ ಮೇಲೆ ದಾಳಿ ನಡೆಸುವುದಿಲ್ಲ. ಮನುಷ್ಯರಿಂದ ತನ್ನ ಪ್ರಾಣಕ್ಕೆ ಆಪತ್ತು ಎದುರಾದಾಗುತ್ತದೆ ಎಂಬ ಸೂಚನೆ ಸಿಗುತ್ತಿದ್ದಂತೆ ಅದು ತನ್ನ ರಕ್ಷಣೆಗೆ ಕಚ್ಚಲು ಮುಂದಾಗುತ್ತದೆ. ಸಹಜವಾಗಿ ಗ್ರಾಮೀಣ ಭಾಗದಲ್ಲಿ ಹಾವು ಕಚ್ಚಿದಾಕ್ಷಣ ಸತ್ತು ಹೋಗುತ್ತಾರೆ ಎಂಬ ಭಯದಿಂದಾಗಿ ಕೆಲವು ವೈಜ್ಞಾನಿಕ ಕೆಲಸಗಳನ್ನ ಮಾಡುತ್ತಾರೆ. ಉರಗ ತಜ್ಞರ ಪ್ರಕಾರ ಹಾವು ಕಚ್ಚಿದಾಕ್ಷಣ ಮನುಷ್ಯ ಸಾಯುವುದಿಲ್ಲ. ಹಾವುಗಳೆಲ್ಲಾ ವಿಷದ ಹಾವುಗಳು ಅಲ್ಲವೇ ಅಲ್ಲ. ಹಾವುಗಳಲ್ಲಿಯೂ ಕೂಡ ವಿಷಪೂರಿತ ವಿವಿಧ ರೀತಿಯ ಹಾವುಗಳಿವೆ.

ಹಾವುಗಳಲ್ಲಿ ನಾಗರದಹಾವು, ಕೊಳಕು ಮಂಡಲದ ಹಾವು, ಹಸಿರು ಹಾವು, ಕೆರೆ ಹಾವು, ಕರಿ ನಾಗರ, ಕಾಳಿಂಗ ಸರ್ಪ ಹೀಗೆ ಅನೇಕ ಪ್ರಭೇಧ ಜಾತಿಯ ಹಾವುಗಳಿವೆ. ಕರಿನಾಗರ, ಕಾಳಿಂಗ ಸರ್ಪದಂತಹ ನಾಗರ ಹಾವುಗಳಲ್ಲಿ ವಿಷ ಹೆಚ್ಚಾಗಿರುತ್ತದೆ. ಈ ಹಾವುಗಳು ಒಮ್ಮೆ ವಿಷ ಹೊರ ಹಾಕಿದರೆ ಮತ್ತು ಅದರಲ್ಲಿ ವಿಷ ಪುನರುತ್ಪತ್ತಿಯಾಗಲು ಕನಿಷ್ಟ ಆರು ಗಂಟೆಗಳ ಕಾಲ ಸಮಯ ಬೇಕಾಗುತ್ತದೆ. ಕೆಲವರಿಗೆ ಹಾವು ಕಚ್ಚಿದಾಕ್ಷಣ ಸಾಯುತ್ತಾರೆ ಎಂಬ ತಪ್ಪು ತಿಳುವಳಿಕೆ ಇದೆ. ಆದರೆ ಅಸಲಿಗೆ ಹಾವು ಕಚ್ಚಿದ ತಕ್ಷಣ ಕಚ್ಚಿದ ಭಾಗವನ್ನು ಸ್ವಚ್ಚವಾಗಿಸಿ ಅದರ ಹಿಂಭಾಗ ಮತ್ತು ಮುಂಭಾಗ ಅರ್ಧ ಅಡಿಯಷ್ಟು ಅಂತರದಲ್ಲಿ ಶುದ್ದವಾದ ಬಟ್ಟೆಯಿಂದ ಕಟ್ಟಬೇಕು.

ತದ ನಂತರ ಬಳಿಕ ಆದಷ್ಟು ಬಹು ಬೇಗ ವೈದ್ಯರನ್ನ ಸಂಪರ್ಕಿಸಬೇಕು. ಆದರೆ ಕೆಲವರು ಹಾವು ಕಚ್ಚಿದೊಡನೆ ಯಾವ ಹಾವು. ಕಚ್ಚಿದ ಹಾವು ವಿಷಪೂರಿತವಾದುದ್ದೆ ಇಲ್ಲವೇ ಎಂಬುದರ ಪೂರ್ವಪರ ಅರಿವಿಲ್ಲದ ದಾರದಲ್ಲಿ ಕಟ್ಟುತ್ತಾರೆ. ಇದರಿಂದ ರಕ್ತ ಸಂಚಾರಕ್ಕೆ ತೊಂದರೆಯಾಗಿ ಕಾಲು ಗ್ಯಾಂಗ್ರಿನ್ ಅಂತಹ ರೋಗಕ್ಕೆ ತುತ್ತಾಗಿ ಗಂಭೀರ ಸಮಸ್ಯೆಗೆ ಕಾರಣವಾಗುತ್ತದೆ. ಆದ್ದರಿಂದ ಯಾವುದೇ ಕಾರಣಕ್ಕೂ ಹಾವು ಕಚ್ಚಿದ ತಕ್ಷಣ ಯಾವುದೇ ಕಾರಣಕ್ಕೂ ಗಾಬರಿಯಾಗದೆ ಪ್ರಾಥಮಿಕವಾಗಿ ಹಾವು ಕಚ್ಚಿದ ಭಾಗವನ್ನ ಸ್ವಚ್ಚಗೊಳಿಸಿ ಶುಭ್ರವಾದ ಬಟ್ಟೆಯಿಂದ ಕಟ್ಟಿ. ಒಂದು ವೇಳೆ ಹಾವು ಕಚ್ಚಿ ಅಹಿತಕರ ಘಟನೆಗಳು ಸಂಭವಿಸಿದಾಗ ನಿಮಗೆ ಆಸ್ಪತ್ರೆಗಳು ದೂರವಿದ್ದ ಸಂಧರ್ಭದಲ್ಲಿ ಆದಷ್ಟು ಉರಗ ತಜ್ಞರ ಸಂಪರ್ಕ ಮಾಡಿ ಅವರ ಸಲಹೆ ಸೂಚನೆಗಳನ್ನ ಪಾಲಿಸಿದರೆ ಉತ್ತಮ ಎಂದು ವೈದ್ಯರು ಕೂಡ ತಿಳಿಸುತ್ತಾರೆ.

Leave a Reply

%d bloggers like this: