ಗೂಗ್ಲಿ ಬೆಡಗಿ ‘ಕೃತಿ ಖರಬಂಧ’ ಮದುವೆ ಆಗುತ್ತಿರುವ ಹುಡುಗ ಇವರೇ.. ನೋಡಿ ಒಮ್ಮೆ

ಸ್ಯಾಂಡಲ್ ವುಡ್ ಗೂಗ್ಲಿ ಬೆಡಗಿ ಸಪ್ತಪದಿ ತುಳಿಯಲು ಸಜ್ಜಾಗಿದ್ದಾರೆ. ಹೌದು ರೂಪದರ್ಶಿಯಾಗಿ ವೃತ್ತಿ ಜೀವನ ಆರಂಭಿಸಿದ ಕೃತಿ ಖರಬಂದ ಕನ್ನಡದ ಖ್ಯಾತ ನಿರ್ದೇಶಕ ಮಹೇಶ್ ಬಾಬು ಅವರ ನಿರ್ದೆಶನದಲ್ಲಿ ಮೂಡಿಬಂದ ಚಿರು ಚಿತ್ರದಲ್ಲಿ ನಾಯಕಿ ನಟಿಯಾಗಿ ಚಂದನವನಕ್ಕೆ ಪಾದಾರ್ಪಣೆ ಮಾಡುತ್ತಾರೆ. ಚಿರು ಚಿತ್ರದಲ್ಲಿ ಚಿರಂಜೀವಿ ಸರ್ಜಾ ಅವರಿಗೆ ಜೋಡಿಯಾಗಿ ನಟಿಸಿದ ಮೊದಲ ಚಿತ್ರದಲ್ಲೇ ತನ್ನ ಕಣ್ಣೋಟದ ಭಾವನಾತ್ಮಕ ಮುದ್ದಾದ ನಟನೆಯಿಂದ ಕನ್ನಡ ಸಿನಿ ಪ್ರೇಕ್ಷಕರ ಮನ ಗೆದ್ದರು. ಚಿರು ಸಿನಿಮಾದ ಬಳಿಕ ನಟಿ ಕೃತಿ ಖರಬಂದ ಅವರನ್ನ ಕನ್ನಡಕ್ಕೆ ಮತ್ತೊಬ್ಬ ಭರವಸೆ ನಟಿಯಾಗಿ ಸಿಕ್ಕರು ಎಂದು ಗಾಂಧಿ ನಗರ ಮಾತಾನಾಡಿಕೊಂಡಿತು‌. ಈ ಚಿರು ಚಿತ್ರದ ಯಶಸ್ಸಿನ ಬಳಿಕ ನಟ ಕೃತಿ ಕರಬಂದ ಅವರಿಗೆ ರಾಕಿಂಗ್ ಸ್ಟಾರ್ ಯಶ್ ಅವರ ಗೂಗ್ಲಿ ಚಿತ್ರದಲ್ಲಿ ನಟಿಸಲು ಅವಕಾಶ ಸಿಗುತ್ತದೆ. ಪವನ್ ಒಡೆಯರ್ ನಿರ್ದೇಶನದ ಗೂಗ್ಲಿ ಸಿನಿಮಾ ಸೂಪರ್ ಡೂಪರ್ ಹಿಟ್ ಆಗುತ್ತದೆ.

ಈ ಗೂಗ್ಲಿ ಚಿತ್ರದ ಮೂಲಕ ನಟಿ ಕೃತಿ ಖರಬಂದ ಅವರಿಗೆ ಅಪಾರ ಬೇಡಿಕೆ ಕೂಡ ಉಂಟಾಗಿ ಸ್ಯಾಂಡಲ್ ವುಡ್ ಜನಪ್ರಿಯ ನಟಿಯಾಗಿ ಮಿಂಚುತ್ತಾರೆ. ಇದಾದ ಬಳಿಕ ನಟ ಸುಮಂತ್ ಶೈಲೆಂದ್ರ ಅವರ ತಿರುಪತಿ ಎಕ್ಸ್ ಪ್ರೆಸ್ ಸಿನಿಮಾ ಕೂಡ ಕೃತಿ ಅವರಿಗೆ ಬ್ರೇಕ್ ನೀಡುತ್ತದೆ. ಹೀಗೆ ಒಂದಷ್ಟು ಸಿನಿಮಾಗಳ ನಂತರ ನಟಿ ಕೃತಿ ಖರಬಂದ ಅವರಿಗೆ ಉತ್ತಮ ಜನಪ್ರಿಯತೆ ತಂದು ಕೊಟ್ಟ ಸಿನಿಮಾ ಅಂದರೆ ಅದು ಪ್ರೇಮ್ ಅಭಿನಯದ ಪ್ರೇಮ್ ಅಡ್ಡ ಚಿತ್ರ‌. ಈ ಚಿತ್ರಕ್ಕೆ ಇವರ ಮೊದಲ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದ ಮಹೇಶ್ ಬಾಬು ಅವರೇ ನಿರ್ದೇಶನ ಮಾಡಿರುತ್ತಾರೆ. ಇನ್ನು ನಟಿ ಕೃತಿ ಖರಬಂದ ಅವರು ಕೇವಲ ಕನ್ನಡ ಮಾತ್ರ ಅಲ್ಲದೆ ತೆಲುಗು ಮತ್ತು ಹಿಂದಿ ಭಾಷೆಯ ಸಿನಿಮಾಗಳಲ್ಲಿಯೂ ಕೂಡ ನಟಿಸಿ ಸೈ ಎನಿಸಿಕೊಂಡಿದ್ದಾರೆ.

ಹೌದು ನಟಿ ಕೃತಿ ಕರಬಂದ ಅವರಿಗೆ ಸೈಮಾ ಅವಾರ್ಡ್ ಮತ್ತು ಫಿಲ್ಮ್ ಫೇರ್ ಅವಾರ್ಡ್ ಕೂಡ ಲಭಿಸಿವೆ. ಇದೀಗ ಕೃತಿ ಖರಬಂದ ಅವರು ದಾಂಪತ್ಯ ಜೀವನಕ್ಕೆ ಹೆಜ್ಜೆ ಇಡುವ ಮೂಲಕ ಭಾರಿ ಸುದ್ದಿ ಆಗಿದ್ದಾರೆ. ಹೌದು ನಟಿ ಕೃತಿ ಖರಬಂದ ಬಾಲಿವುಡ್ ನಟ ಪುಲ್ಕಿತ್ ಸಾಮ್ರಾಟ್ ಅವರೊಟ್ಟಿಗೆ ಒಂದಷ್ಟು ವರ್ಷಗಳಿಂದ ಉತ್ತಮ ಒಡನಾಟ ಹೊಂದಿದ್ದು,ಆಗಾಗ ಕೆಲವು ಕಾರ್ಯಕ್ರಮಗಳಲ್ಲಿ ಒಟ್ಟಿಗೆ ಕಾಣಿಸಿಕೊಂಡಿದ್ದರು. ಇವರಿಬ್ಬರು ರಿಲೇಶಿನ್ ಶಿಪ್ ನಲ್ಲಿದ್ದಾರೆ ಎಂಬ ಸುದ್ದಿ ಬಿ ಟೌನ್ ನಲ್ಲಿ ಸದ್ದು ಮಾಡುತ್ತಿತ್ತು‌. ಇದೀಗ ಇವರಿಬ್ಬರ ಸಂಬಂಧಕ್ಕೆ ಸ್ಪಷ್ಟತೆ ಸಿಕ್ಕಿದ್ದು ಇಬ್ಬರು ಕೂಡ ಮದುವೆ ಆಗಲಿದ್ದಾರೆ ಎಂದು ತಿಳಿದು ಬಂದಿದೆ.

Leave a Reply

%d bloggers like this: