ಗುಡ್ ನ್ಯೂಸ್! ವಿಚ್ಚೇದನ ನಂತರ ಮತ್ತೆ ಒಂದೇ ವೇದಿಕೆ ಮೇಲೆ ಸಮಂತಾ, ನಾಗಚೈತನ್ಯ!

ಇತ್ತೀಚೆಗೆ ತಾನೇ ಬಿಡುಗಡೆಯಾಗಿ ದಾಖಲೆ ಮಾಡಿದ ಟಾಲಿವುಡ್ ಸ್ಟೈಲೀಶ್ ಸ್ಟಾರ್ ಅಲ್ಲು ಅರ್ಜುನ್ ಅಭಿನಯದ ಪುಷ್ಪ ಸಿನಿಮಾ ಇಂದಿಗೂ ಕೂಡ ಭಾರಿ ಸದ್ದು ಮಾಡುತ್ತಿರುವುದು ಅಂದರೆ ಅದು ಸ್ಪೆಷಲ್ ಸಾಂಗ್ ಹಾಡೊಂದರಲ್ಲಿ ನಟಿ ಸಮಂತಾ ಹೆಜ್ಜೆ ಹಾಕಿರುವ ಹ್ಞೂಂ ಅಂತಿಯಾ ಮಾವ ಹಾಡು. ಈ ಸಾಂಗ್ ಸೋಶಿಯಲ್ ಮೀಡಿಯಾದಲ್ಲಿ ಭಾರಿ ಹವಾ ಕ್ರಿಯೆಟ್ ಮಾಡಿದೆ. ಈ ಮೂಲಕ ನಟಿ ಸಮಂತಾ ಅವರಿಗೆ ಮತ್ತಷ್ಟು ಬೇಡಿಕೆ ಉಂಟಾಗಿದೆ. ಇದೀಗ ಹೊಸ ಸುದ್ದಿ ಏನಪ್ಪಾ ಅಂದರೆ ನಟಿ ಸಮಂತಾ ಅವರು ನಾಗ ಚೈತನ್ಯ ಅವರಿಂದ ವಿಚ್ಚೇದನ ಪಡೆದಿರುವುದು ಗೊತ್ತೇ ಇದೆ. ಎಮಾಯಿ ಚೇಶಾವೆ ಎಂಬ ಸಿನಿಮಾದ ಮೂಲಕ ತೆಲುಗು ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ ಸಮಂತಾ ಇಂದು ಸೌತ್ ಸಿನಿ ದುನಿಯಾದ ಆಪಲ್ ಬ್ಯೂಟಿ ಎಂದೇ ಖ್ಯಾತ ನಟಿ ಮಿಂಚುತ್ತಿದ್ದಾರೆ. ದಕ್ಷಿಣ ಭಾರತದ ಸ್ಟಾರ್ ನಟರಾದಂತಹ ಕಾಲಿವುಡ್ ಇಳಯ ದಳಪತಿ ವಿಜಯ್, ಧನುಷ್ ತೆಲುಗಿನಲ್ಲಿ ಪ್ರಿನ್ಸ್ ಮಹೇಶ್ ಬಾಬು, ಅಲ್ಲು ಅರ್ಜುನ್ ಸೇರಿದಂತೆ ಬಹುತೇಕ ದಿಗ್ಗಜ ನಟರೊಂದಿಗೆ ನಟಿಸಿ ಜನಪ್ರಿಯ ಆಗಿದ್ದಾರೆ.

ನಟಿ ಸಮಂತಾ ಅವರು ಕೇವಲ ಬೋಲ್ಡ್ ಪಾತ್ರಗಳಲ್ಲಿ ಮಾತ್ರ ಕಾಣಿಸಿಕೊಳ್ಳದೆ ಒಂದಷ್ಟು ಪ್ರಯೋಗಾತ್ಮಕ ಸಿನಿಮಾಗಳಲ್ಲಿ ಯೂ ಕೂಡ ಅಭಿನಯಿಸಿ ಅಪಾರ ಮೆಚ್ಚುಗೆ ಪಡೆದಿದ್ದಾರೆ. ಸಮಂತಾ ಅವರು ಹೀಗೆ ಸಿನಿ ವೃತ್ತಿ ಜೀವನದಲ್ಲಿ ಯಶಸ್ಸಿನ ಉತ್ತುಂಗದಲ್ಲಿ ಇರಬೇಕಾದಾಗಲೇ ಟಾಲಿವುಡ್ ಸ್ಟಾರ್ ನಟ ನಾಗಚೈತನ್ಯ ಅವರನ್ನ ಪ್ರೀತಿಸಿ 2017 ರಲ್ಲಿ ಮದುವೆ ಆಗುತ್ತಾರೆ. ಆದರೆ ಕೆಲವು ಮನಸ್ತಾಪ ಭಿನ್ನಾಭಿಪ್ರಾಯಗಳಿಂದ ಇವರಿಬ್ಬರ ಪ್ರೇಮ ವಿವಾಹ ಕೇವಲ ನಾಲ್ಕೆ ವರ್ಷಕ್ಕೆ ಅಂತ್ಯವಾಗುತ್ತದೆ. ನಾಗ ಚೈತನ್ಯ ಅವರಿಂದ ಡಿವೋರ್ಸ್ ಪಡೆದ ನಟಿ ಸಮಂತಾ ನಾವಿಬ್ಬರು ಸ್ನೇಹಿತರಾಗಿ ಮುಂದುವರಿಯುತ್ತೇವೆ ಎಂದು ಹೇಳುತ್ತಾರೆ. ಹೀಗೆ ಇಬ್ಬರು ಕೂಡ ಮತ್ತೆ ತಮ್ಮ ತಮ್ಮ ಸಿನಿಮಾಗಳಲ್ಲಿ ತೊಡಗಿಕೊಳ್ಳುತ್ತಾರೆ. ತೆಲುಗಿನ ಖ್ಯಾತ ನಿರ್ದೇಶಕರಾದ ಗುಣಶೇಖರ್ ಅವರ ನಿರ್ದೆಶನದಲ್ಲಿ ಮೂಡಿಬರುತ್ತಿರುವ ಶಾಕುತಲಂ ಸಿನಿಮಾದಲ್ಲಿ ನಟಿ ಸಮಂತಾ ಅಭಿನಯಿಸುತ್ತಿದ್ದಾರೆ.

ಇದರ ಜೊತೆಗೆ ಯಶೋಧ ಎಂಬ ಚಿತ್ರದಲ್ಲಿ ಕೂಡ ನಟಿಸುತ್ತಿದ್ದಾರೆ. ಈ ಯಶೋಧ ಸಿನಿಮಾ ಶೂಟಿಂಗ್ ಇತ್ತೀಚೆಗೆ ಹೈದರಾಬಾದ್ ರಾಮನಾಯ್ಡು ಸ್ಟೂಡಿಯೋದಲ್ಲಿ ಭರ್ಜರಿಯಾಗಿ ನಡೆಯುತ್ತಿದೆ. ಇದೇ ರಾಮನಾಯ್ಡು ಸ್ಟೂಡಿಯೋದಲ್ಲಿ ಬಂಗಾರು ರಾಜು ಎಂಬ ಚಿತ್ರದ ಶೂಟಿಂಗ್ ಕೂಡ ನಡೆಯುತ್ತಿದೆ. ಈ ಚಿತ್ರದಲ್ಲಿ ನಟ ನಾಗ ಚೈತನ್ಯ ನಟಿಸುತ್ತಿದ್ದಾರೆ. ಮಾಜಿ ದಂಪತಿಗಳಿಬ್ಬರು ಒಂದೇ ಸ್ಟೂಡಿಯೋದಲ್ಲಿದ್ದ ಕಾರಣ ಪರಸ್ಪರ ಒಬ್ಬರೊಬ್ಬರು ಭೇಟಿ ಆಗಿ ಮಾತನಾಡಿ ಹೋಟೇಲೊಂದಕ್ಕೆ ಊಟಕ್ಕೂ ಕೂಡ ಹೋಗಿದ್ದಾರಂತೆ. ವಿಚ್ಚೇದನ ಆದ ನಂತರ ಇದೇ ಮೊದಲ ಬಾರಿಗೆ ಇವರಿಬ್ಬರು ಜೊತೆಯಾಗಿ ಕಾಣಿಸಿಕೊಂಡಿದ್ದಾರಂತೆ. ಇನ್ನೊಂದಷ್ಟು ಮಂದಿ ಈ ಸುದ್ದಿ ಸುಳ್ಳು ಇಬ್ಬರು ಪರಸ್ಪರ ಒಬ್ಬರೊಬ್ಬರನ್ನ ಭೇಟಿ ಮಾಡಿಲ್ಲ. ಪ್ರತ್ಯೇಕವಾಗಿ ತಮ್ಮ ತಮ್ಮ ಕಾರಿನಲ್ಲಿ ಹೋಗಿದ್ದಾರೆ ಎಂದು ಹೇಳಿದ್ದಾರೆ. ಒಟ್ಟಿನಲ್ಲಿ ವಿಚ್ಚೇದನ ಆದ ನಂತರ ಇದೇ ಮೊದಲ ಬಾರಿಗೆ ನಟಿ ಸಮಂತಾ ನಾಗಚೈತನ್ಯ ಅವರೊಟ್ಟಿಗೆ ಕಾಣಿಸಿಕೊಂಡಿರುವುದು ಅವರ ಅಭಿಮಾನಿಗಳಿಗೆ ಸಂತಸದ ವಿಚಾರವಾಗಿದೆ.