ಗುಡ್ ನ್ಯೂಸ್ ಕೊಟ್ಟ ಐಶ್ವರ್ಯ, ಅಮರ್ಥ್ಯ ದಂಪತಿಗಳು, ವಿಷಯ ಕೇಳಿ ಸಂಭ್ರಮದಲ್ಲಿ ಡಿ ಕೆ ಶಿವಕುಮಾರ್

ಕರ್ನಾಟಕ ರಾಜ್ಯ ರಾಜಕಾರಣಕ್ಕೆ ಮತ್ತೊಂದು ರಾಜಕೀಯ ಕುಟುಂಬದ ಕುಡಿ ಎಂಟ್ರಿ ಕೊಡುವ ಸುದ್ದಿಯೊಂದು ಹೊರ ಬರುತ್ತಿದೆ. ಹೌದು ಈಗಾಗಲೇ ರಾಜಕೀಯ ಹಿನ್ನೆಲೆಯಿರುವ ಕುಟುಂಬದ ಸದಸ್ಯರು ರಾಜ್ಯ ರಾಜಕಾರಣದಲ್ಲಿ ಸಕ್ರೀಯರಾಗಿ ತೊಡಗಿಸಿಕೊಂಡಿದ್ದಾರೆ. ಇದೀಗ ಅವರ ಸಾಲಿಗೆ ಕನಕ ಪುರದ ಬಂಡೆ, ಕರ್ನಾಟಕ ರಾಜ್ಯ ರಾಜಕಾರಣದ ಟ್ರಬಲ್ ಶೂಟರ್ ಎಂದೇ ಹೆಸರಾಗಿರುವ ಡಿ.ಕೆ.ಶಿವಕುಮಾರ್ ಅವರ ಅಳಿಯ ಅಮಾರ್ಥ್ಯ ರಾಜಕೀಯಕ್ಕೆ ಬರುತ್ತಾರೆ ಎಂಬ ಸುದ್ದಿಯೊಂದು ಭಾರಿ ಜೋರಾಗಿ ಕೇಳಿ ಬರುತ್ತಿದೆ. ಕ್ಲಾಸ್ ರಾಜಕಾರಣಿ ಮಾಜಿ ಮುಖ್ಯಮಂತ್ರಿ ಎಸ್. ಎಂ.ಕೃಷ್ಣ ಅವರ ಮಗಳ ಮಗನಾದ ಅಮಾರ್ಥ್ಯ ಹೆಗ್ಡೆ ಅವರು ವಿದೇಶದಲ್ಲಿ ವಿಧ್ಯಾಭ್ಯಾಸ ಮುಗಿಸಿದ್ದಾರೆ. ಇದೀಗ ತಮ್ಮ ತಾತ ಮತ್ತು ಮಾವ ಅವರಂತೆ ರಾಜಕೀಯ ಕ್ಷೇತ್ರದಲ್ಲಿ ತೊಡಗಿಸಿಕೊಳ್ಳುವುದಕ್ಕೆ ಮನಸ್ಸು ಮಾಡಿದ್ದಾರೆ ಎಂದು ತಿಳಿದು ಬಂದಿದೆ.

ಗಾರ್ಡನ್ ಸಿಟಿ ಬೆಂಗಳೂರಿಗೆ ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಅವರ ಕೊಡುಗೆ ಅಪಾರ. ಎಸ್.ಎಂ.ಕೃಷ್ಣ ಅವರ ಆಡಳಿತಾವಧಿಯಲ್ಲಿ ರಾಜಧಾನಿ ಬೆಂಗಳೂರಿಗೆ ಅನೇಕ ಬಹು ರಾಷ್ಟ್ರೀಯ ಕಂಪನಿಗಳು ಬಂದಿವೆ. ಅಂದರೆ ಅದಕ್ಕೆ ಎಸ್.ಎಂ.ಕೃಷ್ಣ ಅವರು ಮುಖ್ಯಮಂತ್ರಿ ಆಗಿದ್ದಾಗ ತೆಗೆದುಕೊಂಡ ನಿರ್ಧಾರಗಳು ಮತ್ತು ವಿದೇಶಗಳಲ್ಲಿ ಹೊಂದಿದ್ದ ಉತ್ತಮ ಸಂಪರ್ಕ ಪ್ರಮುಖ ಕಾರಣವಾಯಿತು ಎಂದರೆ ಅತಿಶಯೋಕ್ತಿ ಆಗಲಾರದು. ಕೆಲವು ವರ್ಷಗಳ ಹಿಂದೆಯಷ್ಟೇ ಕೆಫೆ ಕಾಫಿ ಡೇ ಮಾಲೀಕರಾದ ಸಿದ್ದಾರ್ಥ್ ರವರು ಆತ್ಮಹತ್ಯೆಗೆ ಒಳಗಾದರು. ಇದು ಇವರ ಕುಟುಂಬಕ್ಕೆ ದೊಡ್ಡ ಆಘಾತವಾಯಿತು. ಬಳಿಕ ರಾಜ್ಯದ ಪ್ರಭಾವಿ ರಾಜಕೀಯ ನಾಯಕರಾದ ಡಿ.ಕೆ.ಶಿವಕುಮಾರ್ ಅವರ ಪುತ್ರಿ ಐಶ್ವರ್ಯ ಅವರನ್ನು ಅಮಾರ್ಥ್ಯ ಹೆಗ್ಡೆ ತಮ್ಮ ಬಾಳ ಸಂಗಾತಿಯಾಗಿ ಸ್ವೀಕರಿಸುತ್ತಾರೆ.

ಅಮಾರ್ಥ್ಯ ಹೆಗ್ಡೆ ಅವರು ತಮ್ಮ ತಂದೆಯ ಉದ್ಯಮವನ್ನು ನೋಡಿಕೊಳ್ಳುತ್ತಿದ್ದರು. ಇದೀಗ ಡಿ.ಕೆ.ಶಿವಕುಮಾರ್ ಅವರ ಮನೆ ಅಳಿಯ ಆಗಿರುವ ಅಮಾರ್ಥ್ಯ ಹೆಗ್ಡೆ ಅವರು ತಮ್ಮ ಮಾವ ಮತ್ತು ತಾತ ಎಸ್.ಎಂ ಕೃಷ್ಣ ಅವರ ಮಾರ್ಗದರ್ಶನದ ಮೂಲಕ ರಾಜಕೀಯ ರಂಗಕ್ಕೆ ಪ್ರವೇಶ ಮಾಡುವ ಯೋಜನೆ ಮಾಡಿಕೊಂಡಿದ್ದಾರಂತೆ. ಅದೂ ಕೂಡ ಕಾಂಗ್ರೆಸ್ ಪಕ್ಷದಿಂದ ಎಂಬುದು ಕುತೂಹಲ ಮೂಡಿಸಿದೆ. ಬಲ್ಲ ಮೂಲಗಳ ಪ್ರಕಾರ ರಾಜ್ಯದ ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಚಿಕ್ಕಮಗಳೂರು ಕ್ಷೇತ್ರದಿಂದ ಅಮಾರ್ಥ್ಯ ಹೆಗ್ಡೆ ಅವರಿಗೆ ಚಿಕ್ಕ ಮಗಳೂರು ಕ್ಷೇತ್ರದಿಂದ ಸ್ಪರ್ಧಿಸಲಿದ್ದಾರೆ ಎಂದು ತಿಳಿದು ಬಂದಿದೆ.