ಗಿಚ್ಚಿ ಗಿಲಿಗಿಲಿ ಶೋ ಗೆದ್ದ ಶಿವಕುಮಾರ್, ಶಿವಕುಮಾರ್ ಅವರಿಗೆ ಸಿಕ್ಕ ಬಹುಮಾನದ ಮೊತ್ತ ಎಷ್ಟು

ಗಿಚ್ಚಿ ಗಿಲಿ ಗಿಲಿ ರಿಯಾಲಿಟಿ ಶೋಗೆ ಇದೀಗ ತೆರೆ ಬಿದ್ದಿದೆ. ಕನ್ನಡ ಕಿರುತೆರೆ ವೀಕ್ಷಕರಿಗೆ ಮೋಡಿ ಮಾಡಿದ್ದ ಮಾಸ್ಟರ್ ಆನಂದ್ ಅವರ ಪುತ್ರಿ ವಂಶಿಕಾ ಈ ಶೋ ನಲ್ಲಿಯೂ ಕೂಡ ವಿನ್ನರ್ ಆಗಿ ಮೋಡಿ ಮಾಡಿದ್ದಾರೆ. ಕಲರ್ಸ್ ಕನ್ನಡ ವಾಹಿನಿಯಲ್ಲಿ ಕೇವಲ ಧಾರಾವಾಹಿಗಳು ಮಾತ್ರ ಅಲ್ಲದೆ ವಾರಾಂತ್ಯದ ದಿನಗಳಲ್ಲಿ ಮಸ್ತ್ ಮನರಂಜನೆ ನೀಡಲಿಕ್ಕೆ ಅಂತಾನೇ ಒಂದಷ್ಟು ಕಾಮಿಡಿ, ಡ್ಯಾನ್ಸ್ ಅಂತಹ ರಿಯಾಲಿಟಿ ಶೋಗಳು ಪ್ರಸಾರವಾಗುತ್ತಿದ್ದಾವೆ. ಅದರಲ್ಲಿ ಹಾಸ್ಯ ಕಾರ್ಯಕ್ರಮ ಗಿಚ್ಚಿ ಗಿಲಿ ಗಿಲಿ ಕೂಡ ಒಂದಾಗಿತ್ತು. ಈ ಗಿಚ್ಚಿ ಗಿಲಿ ಗಿಲಿ ಕಾಮಿಡಿ ಕಾರ್ಯಕ್ರಮವನ್ನ ನಿರಂಜನ್ ದೇಶಪಾಂಡೆ ನಿರೂಪಣೆ ಮಾಡುತ್ತಿದ್ದರು. ಅದರ ಜೊತೆಗೆ ತೀರ್ಪುಗಾರರಾಗಿ ಖ್ಯಾತ ಹಾಸ್ಯ ನಟ, ನಿರ್ದೇಶಕ ಸಾಧುಕೋಕಿಲ, ನಟಿ ಶೃತಿ ಭಾಗವಹಿಸುತ್ತಿದ್ರು.

ಈ ಗಿಚ್ಚಿ ಗಿಲಿ ಕಾರ್ಯಕ್ರಮದಲ್ಲಿ ಜಗ್ಗಪ್ಪ, ಸುಷ್ಮಿತಾ, ಚಂದ್ರಪ್ರಭಾ, ಮಾನಸ, ಎನ್.ಸಿ.ಅಯ್ಯಪ್ಪ, ಜೋಗಿ ಸುನೀತಾ, ನಿವೇದಿತಾ ಗೌಡ, ಶಿವು ಮತ್ತು ಮಾಸ್ಟರ್ ಆನಂದ್ ಪುತ್ರಿ ವಂಶಿಕಾ ಕೂಡ ಭಾಗವಹಿಸುತ್ತಿದ್ರು. ಇದೀಗ ಈ ಶೋ ಯಶಸ್ವಿಯಾಗಿ ಮುಕ್ತಾಯ ಗೊಂಡಿದೆ. ಈ ಶೋನಲ್ಲಿ ಹೊಸ ರೀತಿಯಾಗಿ ಎರಡು ಬಗೆಯಲ್ಲಿ ಜಯಶೀಲರನ್ನ ಘೋಷಣೆ ಮಾಡಲಾಗಿದೆ. ನಟನೆ ಮತ್ತು ನಟನೇತರ ವಿಭಾಗವಾಗಿ ಮಾಡಿ ನಟನೆ ವಿಭಾಗದಲ್ಲಿ ಶಿವು ವಿನ್ನರ್, ನಟನೇತರ ವಿಭಾಗದಿಂದ ವಂಶಿಕ್ ವಿನ್ನರ್ ಆಗಿದ್ದಾರೆ. ಅದೇ ರೀತಿಯಾಗಿ ನಟನ ವಿಭಾಗದಲ್ಲಿ ರನ್ನರ್ ಅಪ್ ಆಗಿ ಗೊಬ್ಬರ ಗಾಲಾ ಗುರುತಿಸಿಕೊಂಡ್ರೆ, ನಿವೇದಿತಾ ಗೌಡ ನಟನೇತರ ವಿಭಾಗದಲ್ಲಿ ರನ್ನರ್ ಅಪ್ ಆಗಿದ್ದಾರೆ.

ವಂಶಿಕಾ ಇತ್ತೀಚೆಗೆ ನನ್ನಮ್ಮ ಸೂಪರ್ ಸ್ಟಾರ್ ರಿಯಾಲಿಟಿ ಶೋ ನಲ್ಲಿಯೂ ಕೂಡ ತನ್ನ ತಾಯಿ ಜೊತೆ ವಿನ್ನರ್ ಆಗಿದ್ರು. ಈಗ ಗಿಚ್ಚಿ ಗಿಲಿ ಗಿಲಿ ರಿಯಾಲಿಟಿ ಶೋನಲ್ಲಿಯೂ ಕೂಡ ವಿನ್ನರ್ ಆಗಿದ್ದಾರೆ. ಹಾಗಾಗಿ ಅವರ ಪೋಷಕರಿಗೆ ಸಖತ್ ಖುಷಿ ಆಗಿದೆ. ಇನ್ನು ವಂಶಿಕಾ ಅವರಿಗೆ ಈಗಾಗಲೇ ಸಿನಿಮಾ, ಧಾರಾವಾಹಿ ಮತ್ತು ವೆಬ್ ಸೀರಿಸ್ ಗಳಲ್ಲಿಯೂ ಕೂಡ ಅಪಾರ ಅವಕಾಶಗಳು ಹರಿದು ಬರುತ್ತಿದ್ದು, ಸದ್ಯಕ್ಕೆ ನಟ ವಸಿಷ್ಠ ಸಿಂಹ ಅವರ ನಟನೆಯ ಲವ್ ಲೀ ಸಿನಿಮಾದಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರಂತೆ. ಶಾಲೆಯ ಜೊತೆ ಜೊತೆಗೆ ತಂದೆಯಂತೆ ವಂಶಿಕಾ ಈಗ ಬಣ್ಣದ ಲೋಕದಲ್ಲಿ ಮಿಂಚುತ್ತಿದ್ದಾರೆ. ಗಿಚ್ಚಿ ಗಿಲಿಗಿಲಿ ಗೆದ್ದ ಶಿವಕುಮಾರ್ ಅವರಿಗೆ ಐದು ಲಕ್ಷ ನಗದು ಹಣ ಬಹುಮಾನವಾಗಿ ಸಿಕ್ಕಿದೆ.