ಗರ್ಭಿಣಿ ಆದ‌ ನಂತರ ಮೊದಲ ಬಾರಿಗೆ ಸಾರ್ವಜನಿಕವಾಗಿ ಕಾಣಿಸಿಕೊಂಡ ನಟಿ ಆಲಿಯಾ ಭಟ್ ಅವರು

ಬಾಲಿವುಡ್ ಸುಪ್ರಸಿದ್ದ ಬೇಡಿಕೆಯ ನಟಿ ಇದೀಗ ಬೇಬಿಬಂಪ್ ಪೋಟೋ ಶೂಟ್ ಮಾಡಿಸಿಕೊಂಡು ಇದೀಗ ಬಟೌನ್ ನಲ್ಲಿ ಭಾರಿ ಸುದ್ದಿಯಾಗಿದ್ದಾರೆ. ಹೌದು ಇತ್ತೀಚೆಗೆ ಈ ಬೇಬಿ ಬಂಪ್ ಫೋಟೋಶೂಟ್ ಅನ್ನೋದು ಒಂದು ರೀತಿಯಾಗಿ ಟ್ರೆಂಡ್ ಆಗಿ ಬಿಟ್ಟಿದೆ. ಮೊದಲೆಲ್ಲಾ ಗರ್ಭಿಣೆ ಆದರೆ ಅವರನ್ನ ಮನೆಯಿಂದ ಹೊರಗಡೆ ಬಿಡುತ್ತಿರಲಿಲ್ಲ. ಅದು ಕಾಳಜಿ ಮತ್ತು ದೃಷ್ಠಿ ಬೀಳುತ್ತದೆ ಎಂಬ ಉದ್ದೇಶದಿಂದ ಅಂತ ಹೇಳಲಾಗುತ್ತದೆ. ಆದರೆ ಇದೀಗ ಕೆಲವು ಸಿನಿಮಾ ತಾರೆಯರು ವಿದೇಶಿ ಸಂಸ್ಕೃತಿಯನ್ನ ಅಳವಡಿಸಿಕೊಂಡು ಗರ್ಭಿಣಿ ಆದೊಡನೆ ಈ ಬೇಬಿ ಬಂಪ್ ಅನ್ನೋ ಫೋಟೋಶೂಟ್ ಮಾಡಿಸಿ ತಮ್ಮ ಸೋಶಿಯಲ್ ಮೀಡಿಯಾಗಳಲ್ಲಿ ಆ ಫೋಟೋಗಳನ್ನ ಹಂಚಿಕೊಳ್ಳುತ್ತಿದ್ದಾರೆ. ನಟಿ ಆಲಿಯಾ ಭಟ್ ಕೂಡ ಇದೀಗ ಗರ್ಭಿಣಿಯಾಗಿದ್ದು, ತನ್ನ ಪ್ರೀತಿಯ ಪತಿ ನಟ ರಣ್ ಬೀರ್ ಕಪೂರ್ ಅವರೊಟ್ಟಿಗೆ ನಿಂತು ಬೇಬಿ ಬಂಪ್ ಫೋಟೋಗೆ ಪೋಸ್ ನೀಡಿದ್ದಾರೆ. ನಟಿ ಆಲಿಯಾ ಭಟ್ ಮತ್ತು ನಟ ರಣ್ ಬೀರ್ ಕಪೂರ್ ಇಬ್ಬರು ಪ್ರೀತಿಸಿ ಇತ್ತೀಚೆಗೆ ಕೆಲವು ತಿಂಗಳಗಳಿಂದೆಯಷ್ಟೇ ದಾಂಪತ್ಯ ಜೀವನಕ್ಕೆ ಹೆಜ್ಜೆ ಇಟ್ಟಿದ್ದರು.

ಇದಾದ ಕೆಲವೇ ತಿಂಗಳಲ್ಲಿ ಆಲಿಯಾ ಭಟ್ ಗರ್ಭಿಣಿ ಆಗಿದ್ದು ಇದೀಗ ತಮ್ಮ ಪತಿ ಜೊತೆ ಕಾಲ ಕಳೆಯುತ್ತಿದ್ದಾರೆ. ಇತ್ತೀಚೆಗೆ ಆಲಿಯಾ ಭಟ್ ಅವರು ತಾನು ಗರ್ಭಿಣಿ ಆಗಿದ್ದರು ಕೂಡ ಶೂಟಿಂಗ್ ನಲ್ಲಿ ಭಾಗವಹಿಸುವ ಮೂಲಕ ಎಲ್ಲರಿಗೆ ಅಚ್ಚರಿ ಮೂಡಿಸಿದ್ದರು. ಬಹು ನಿರೀಕ್ಷೆಯ ಬ್ರಹ್ಮಾಸ್ತ್ರ ಸಿನಿಮಾದಲ್ಲಿನ ಶೂಟಿಂಗ್ ನಲ್ಲಿ ತೊಡಗಿಕೊಂಡಿದ್ದ ಆಲಿಯಾ ಭಟ್ ಅವರ ಒಂದಷ್ಟು ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದವು. ಆಲಿಯಾ ಭಟ್ ಅವರು ರಾಜಮೌಳಿ ಅವರ ಆರ್‌.ಆರ್.ಆರ್ ಸಿನಿಮಾದಲ್ಲಿ ನಟಿಸಿದ ನಂತರ ಸದ್ಯಕ್ಕೆ ಬಾಲಿವುಡ್ ನಲ್ಲಿ ಸಖತ್ ಬಿಝಿಯಾಗಿದ್ದಾರೆ. ಗರ್ಭಿಣಿ ಆಗಿದ್ದರು ಕೂಡ ಸಾಲು ಸಾಲು ಸಿನಿಮಾಗಳನ್ನ ಹೊಂದಿರುವ ನಟಿ ಆಲಿಯಾ ಭಟ್ ಅವರು ಯಾವ ರೀತಿ ಈ ಎಲ್ಲಾ ಚಿತ್ರಗಳನ್ನ ನಿಭಾಯಿಸಲಿದ್ದಾರೆ ಎಂದು ಬಿಟೌನ್ ನಲ್ಲಿ ಚರ್ಚೆ ಆಗುತ್ತಿದೆ. ಇದೆಲ್ಲದರ ನಡುವೆ ಆಲಿಯಾ ಭಟ್ ಅವರು ಕೂಲ್ ಆಗಿ ಶಾರ್ಟ್ ಡ್ರೆಸ್ ಧರಿಸಿ ತಮ್ಮ ಪತಿ ರಣ್ ಬೀರ್ ಕಪೂರ್ ಜೊತೆ ನಿಂತು ಬೇಬಿ ಬಂಪ್ ಫೋಟೋ ಶೂಟ್ ಮಾಡಿಸಿಕೊಳ್ಳುವ ಮೂಲಕ ಸುದ್ದಿಯಾಗಿದ್ದಾರೆ. ಇವರ ನಟನೆಯ ಮುಂಬರುವ ಬ್ರಹ್ಮಾಸ್ತ್ರ ಸಿನಿಮಾ ಭಾರಿ ಕುತೂಹಲ ಮೂಡಿಸಿದೆ.

Leave a Reply

%d bloggers like this: