ಗೆಲುವಿನ ಟ್ರ್ಯಾಕ್ ಗೆ ಮರಳಿದ ಗೋಲ್ಡನ್ ಸ್ಟಾರ್ ಗಣೇಶ್ ಅವರು, ಗಾಳಿಪಟ2 ಮೊದಲ ದಿನ ಗಳಿಸಿದ್ದೆಷ್ಟು ಗೊತ್ತೇ

ಸ್ಯಾಂಡಲ್ ವುಡ್ ನಲ್ಲಿ ಸಾಲು ಸಾಲು ಸೂಪರ್ ಹಿಟ್ 100 ಡೇಸ್ ಸಿನಿಮಾಗಳನ್ನ ನೀಡಿ ನಿರ್ಮಾಪಕರ ಪಾಲಿನ ಚಿನ್ನದ ಗಣಿಯಾಗಿ ಮಿಂಚಿದ ಗಣೇಶ್ ಅವರು ಇದೀಗ ಗಾಳಿಪಟ2 ಸಿನಿಮಾದ ಮೂಲಕ ಮತ್ತೇ ತಮ್ಮ ಸುವರ್ಣಯುಗದತ್ತ ಮುಖ ಮಾಡಿದ್ದಾರೆ ಎನ್ನಬಹುದು. ಕನ್ನಡದಲ್ಲಿ ಕೋಟಿ ಸಂಭಾವನೆ ಪಡೆದ ಮೊದಲ ನಟ ಎಂಬ ಕೀರ್ತಿಗೆ ಪಾತ್ರವಾಗಿರುವ ಗಣೇಶ್ ದಶಕಗಳಿಂದೀಚೆಗೆ ನಿರೀಕ್ಷೆಯಂತೆ ಹೇಳಿಕೊಳ್ಳುವಂತಹ ಯಶಸ್ಸನ್ನ ಪಡೆದುಕೊಂಡಿರಲಿಲ್ಲ. ಇತ್ತೀಚಿಗೆನ ವರ್ಷಗಳಲ್ಲಿ ಬಿಡುಗಡೆಯಾಗಿದ್ದ ಮುಗುಳುನಗೆ, ಚಮಕ್, ಸಖಚ್ ಅಂತಹ ಸಿನಿಮಾಗಳು ಒಂದೊಳ್ಳೆ ರೆಸ್ಪಾನ್ಸ್ ಪಡೆದುಕೊಂಡರು ಕೂಡ ಗಣೇಶ್ ಅವರಿಗೆ ಬ್ರೇಕ್ ನೀಡಿರಲಿಲ್ಲ ಎಂದು ಹೇಳಬಹುದು. ಆದರೆ ಮೊನ್ನೇ ತಾನೇ ರಿಲೀಸ್ ಆದ ಗಾಳಿಪಟ2 ಸಿನಿಮಾ ಮೊದಲನೇ ದಿನವೇ ಬಾಕ್ಸ್ ಆಫೀಸ್ ನಲ್ಲಿ ಧೂಳೆಬ್ಬಿಸಿದೆ ಎಂದು ಹೇಳಬಹುದು. ಕನ್ನಡ ಚಿತ್ರರಂಗದ ವಿಕಟಕವಿ ಅಂತಾನೇ ಕರೆಸಿಕೊಳ್ಳುವ ನಿರ್ದೇಶಕ ಯೋಗರಾಜ್ ಭಟ್ ಮತ್ತು ಗಣೇಶ್ ಅವರ ಕಾಂಬಿನೇಶನ್ ಮುಗುಳುನಗೆ ಸಿನಿಮಾದ ನಂತರ ಮತ್ತೆ ವರ್ಕೌಟ್ ಆಗಿದ್ದು, ಸಿನಿ ಪ್ರೇಕ್ಷಕರು ಫಿಧಾ ಆಗಿದ್ದಾರೆ.

ದಶಕಗಳಿಂದೆ ಬಿಡುಗಡೆಯಾಗಿದ್ದ ಗಾಳಿಪಟ ಸಿನಿಮಾ ಚಂದನವನದಲ್ಲಿ ಸನ್ಶೇನಲ್ ಕ್ರಿಯೇಟ್ ಮಾಡಿತ್ತು. ಇದೀಗ ಗಾಳಿಪಟ2 ಸಿನಿಮಾ ಇಂದಿನ ತಲೆಮಾರಿನ ಯುವಕರಿಗೆ ಇಷ್ಟವಾಗುವಂತಹ ಕಥಾಹಂದರ ಹೊಂದಿಸಿಕೊಂಡು ಮೂವರು ಗೆಳೆಯರ ವಿಭಿನ್ನ ವ್ಯಕ್ತಿತ್ವಗಳು, ಅವರಲ್ಲಿ ಮೂಡುವ ಪ್ರೀತಿ ಪ್ರೇಮ ಅನುರಾಗ ಕೊನೆಗೆ ವಿರಹ ವೇದನೆ, ತ್ಯಾಗ, ನೋವು, ಕಣ್ಣೀರು ಜೊತೆಗೆ ಹಾಸ್ಯದ ಮಿಶ್ರಣ ಇರುವ ಗಾಳಿಪಟ2 ಸಿನಿಮಾ ಅಚ್ಚುಕಟ್ಟಾಗಿ ಮೂಡಿಬಂದಿದ್ದು ಕುಟುಂಬ ಸಮೇತ ಕೂತು ಸವಿಯಬಹುದಾದ ಅಪ್ಪಟ ಕ್ಲಾಸ್ ಸಿನಿಮಾ ಎನಿಸಿಕೊಂಡಿದೆ. ಗಾಳಿಪಟ2 ಸಿನಿಮಾ ಕರ್ನಾಟಕದಲ್ಲಿ ಏಳು ನೂರು ಶೋ ಮತ್ತು ಹೊರ ರಾಜ್ಯಗಳಲ್ಲಿ ಇನ್ನೂರು ಶೋ ಅದಲ್ಲದೆ ಹೊರ ದೇಶಗಳಲ್ಲಿ ಇನ್ನೂರೈವತ್ತು ಶೋಗಳು ಆಗಿದ್ದು, ಭರ್ಜರಿ ಕಲೆಕ್ಷನ್ ಮಾಡಿದೆ. ಅಮೀರ್ ಖಾನ್ ಅವರ ಲಾಲ್ ಸಿಂಗ್ ಚಡ್ಡಾ, ಅಕ್ಷಯ್ ಕುಮಾರ್ ಅವರ ರಕ್ಷಾಬಂಧನ್ ಮತ್ತು ತಮಿಳು, ತೆಲುಗು, ಮಲೆಯಾಳಂ ಸಿನಿಮಾಗಳ ನಡುವೆ ಗಾಳಿಪಟ2 ಸಿನಿಮಾ ಸಖತ್ ಆಗಿಯೇ ಓಪನಿಂಗ್ ತೆಗೆದುಕೊಂಡಿದೆ.

ಮಾಸ್ ಸಿನಿಮಾಗಳಿಗೆ ಸಿಗುವಂತಹ ಓಪನಿಂಗ್ ಪಡೆದುಕೊಂಡಿರುವ ಗಾಳಿಪಟ2 ಸಿನಿಮಾ ಈಗಾಗಲೇ ಐವತ್ತು ಕೋಟಿ ಕಲೆಕ್ಷನ್ ಮಾಡಿ ದಾಖಲೆ ಮಾಡುತ್ತಿದೆ ಎಂದು ಬಾಕ್ಸ್ ಆಫೀಸ್ ಪಂಡಿತರು ಹೇಳಿದ್ದಾರೆ. ಬಿಡುಗಡೆ ಆದಾಗಿನಿಂದ ಇಂದಿನವರೆಗೆ ಗಾಳಿಪಟ2 ಸಿನಿಮಾ ಎಲ್ಲಾ ಕಡೆ ಹೌಸ್ ಫುಲ್ ಪ್ರದರ್ಶನ ಕಾಣುತ್ತಿದ್ದು, ದಿನ ಕಳೆದಂತೆ ಚಿತ್ರ ನೋಡಲು ಪ್ರೇಕ್ಷಕರ ಸಂಖ್ಯೆ ಹೆಚ್ಚಾಗುತ್ತಲೇ ಇದೆ. ವಾರದಲ್ಲಿಯೇ ಐವತ್ತು ಕೋಟಿ ಕ್ಲಬ್ ಸೇರಿರುವ ಗಾಳಿಪಟ2 ಸಿನಿಮಾ ಭಾನುವಾರ ಒಂದೇ ದಿನ 6 ಕೋಟಿಗೂ ಅಧಿಕ ಕಲೆಕ್ಷನ್ ಮಾಡಲಿದೆ ಎಂದು ಲೆಕ್ಕಾಚಾರ ಇದೆ. ಗಣೇಶ್ ಅವರ ಸಿನಿ ವೃತ್ತಿ ಬದುಕಿನಲ್ಲಿ ಉತ್ತಮ ಓಪನಿಂಗ್ ಪಡೆದುಕೊಂಡಿರುವ ಸಿನಿಮಾ ಎಂಬ ಹೆಸರಿಗೆ ಗಾಳಿಪಟ2 ಸಿನಿಮಾ ಸೇರ್ಪಡೆಗೊಂಡಿದೆ. ದಿಗಂತ್, ಪವನ್, ಅನಂತ್ ನಾಗ್, ಶರ್ಮಿಳಾ ಮಾಂಡ್ರೆ ಅವರ ಪಾತ್ರಗಳು ಸಿನಿ ಪ್ರೇಕ್ಷಕರಿಗೆ ಕಾಡುವಂತಿದ್ದು, ಭಾವಾನಾತ್ಮಕವಾಗಿ ಸಿನಿ ಪ್ರಿಯರನ್ನ ಗಾಳಿಪಟ2 ಸಿನಿಮಾ ಸೆಳೆದು ಯಶಸ್ವಿಯಾಗಿದೆ.