ಗೆಳೆಯನ ಜೊತೆಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಕನ್ನಡ ಕಿರುತೆರೆ ನಟಿ

ಕನ್ನಡ ಕಿರುತೆರೆಯ ಖ್ಯಾತ ನಟಿ ವೈವಾಹಿಕ ಜೀವನಕ್ಕೆ ಪ್ರವೇಶ ಹೆಜ್ಜೆ ಇಟ್ಟಿದ್ದಾರೆ. ಇತ್ತೀಚೆಗೆ ಎಲ್ಲೆಡೆ ಮದುವೆ ಸುಗ್ಗಿ ಸಂಭ್ರಮ ಜೋರಾಗಿ ನಡೆಯುತ್ತಿದೆ. ಅದರಂತೆ ಸಿನಿಮಾ, ಕಿರುತೆರೆ ಕ್ಷೇತ್ರದ ಒಂದಷ್ಟು ಯುವ ನಟನಟಿಯರು ಕೂಡ ಇದೀಗ ದಾಂಪತ್ಯ ಜೀವನಕ್ಕೆ ಹೆಜ್ಜೆ ಇಡುತ್ತಿದ್ದಾರೆ. ಹಾಗೆಯೇ ಇದೀಗ ಕನ್ನಡದ ಪ್ರಸಿದ್ದ ವಾಹಿನಿ ಆಗಿರುವ ಜೀ಼ ಕನ್ನಡ ವಾಹಿನಿಯಲ್ಲಿ ಪ್ರಸಾರ ಆಗುತ್ತಿರುವ ಜನಪ್ರಿಯ ಕಮಲಿ ಧಾರಾವಾಹಿಯಲ್ಲಿ ಅನಿಕಾ ಎಂಬ ಖಳ ನಾಯಕಿ ಪಾತ್ರದ ಮೂಲಕ ನಾಡಿನ ಮನೆ ಮನೆಗಳಲ್ಲಿ ಹೆಸರುವಾಸಿಯಾಗಿರುವ ನಟಿ ರಚನಾ ಸ್ಮಿತ್ ಕೂಡ ಸಪ್ತಪದಿ ತುಳಿದಿದ್ದಾರೆ. ನಟಿ ರಚನಾ ಸ್ಮಿತ್ ಅವರು ಕಿರುತೆರೆಗೆ ಎಂಟ್ರಿ ಆಗೋದಕ್ಕಿಂತ ಮೊದಲು ರೂಪದರ್ಶಿಯಾಗಿ ತೊಡಗಿಸಿಕೊಂಡಿದ್ದರು.

ಅದೂ ಸಹ ರಚನಾ ಸ್ಮಿತ್ ಅವರು ಮಾಡ್ಲೆಂಗ್ ಕ್ಷೇತ್ರಕ್ಕೆ ಎಂಟ್ರಿ ಆಗಿದ್ದೇ ಅವರ ಹದಿನೇಳನೇ ವಯಸ್ಸಿನಲ್ಲಿ. ಆಗ್ಲೇ ರಚನಾ ಸ್ಮಿತ್ ಹಿಂದಿಯ ಖಾಸಗಿ ಸಂಸ್ಥೆ ಆಯೋಜನೆ ಮಾಡಿದ ಸ್ಪರ್ದೆಯೊಂದಕ್ಕೆ ಬೆಂಗಳೂರಿನಿಂದ ಆಯ್ಕೆ ಆಗಿದ್ರು. ಮಾಡ್ಲೆಂಗ್ ನಲ್ಲಿ ಗುರುತಿಸಿಕೊಂಡಿದ್ದ ರಚನಾ ಅವರಿಗೆ ಸಿನಿಮಾ ನಂಟು ಕೂಡ ಬೆಳೆದು ಕಿಚ್ಚ ಸುದೀಪ್ ಅವರ ವರದನಾಯಕ ಸಿನಿಮಾದಲ್ಲಿ ಒಂದು ಮುಖ್ಯ ಪಾತ್ರದ ಮೂಲಕ ಬೆಳ್ಳಿತೆರೆಯಲ್ಲಿ ಮಿಂಚಿದರು. ಅದರ ಜೊತೆಗೆ ಕೊಡೆ ಮುರುಗ, ವಿಕ್ಟರಿ, ಗೆಸ್ಟ್ ಹೌಸ್ ಅಂತಹ ಒಂದಷ್ಟು ಸಿನಿಮಾಗಳಲ್ಲಿ ನಟಿಸಿದ್ದಾರೆ. ಅದರ ಜೊತೆಗೆ ತೆಲುಗು ಸಿನಿಮಾದಲ್ಲಿಯೂ ನಟಿ ರಚನಾ ನಟಿಸಿದ್ದಾರೆ.

ಹೀಗೆ ಜೀಕನ್ನಡ ವಾಹಿನಿಯಲ್ಲಿ ಫೇಮಸ್ ಆಗಿದ್ದ ಲೈಫೂ ಸೂಪರ್ ಗುರು ಎಂಬ ರಿಯಾಲಿಟಿ ಶೋನಲ್ಲಿ ಕಾಣಿಸಿಕೊಂಡ ರಚನಾ ತದ ನಂತರ ಇದೇ ವಾಹಿನಿಯಲ್ಲಿ ಆರಂಭವಾದ ಕಮಲಿ ಧಾರಾವಾಹಿಯಲ್ಲಿ ನೆಗೆಟೀವ್ ಶೇಡ್ ನಲ್ಲಿ ನಟಿಸುವ ಅವಕಾಶ ಗಿಟ್ಟಿಸಿಕೊಳ್ತಾರೆ. ಇನ್ನು ಕಮಲಿ ಧಾರಾವಾಹಿಯಲ್ಲಿ ಶಂಭು ಪಾತ್ರ ಮಾಡ್ತಿದ್ದ ನಟ ಸುಹಾಸ್ ಅವರೊಟ್ಟಿಗೆ ಮೂರು ವರ್ಷಗಳಿಂದ ಪ್ರೇಮಬಂಧನದಲ್ಲಿದ್ದ ಇವರು ಇದೀಗ ತಮ್ಮ ಕುಟುಂಬ ಮತ್ತು ಆಪ್ತ ಸ್ನೇಹಿತರ ಸಮ್ಮುಖದಲ್ಲಿ ದಾಂಪತ್ಯ ಜೀವನಕ್ಕೆ ಹೆಜ್ಜೆ ಇಟ್ಟಿದ್ದಾರೆ. ಇನ್ನು ನಟಿ ರಚನಾ ಸ್ಮಿತ್ ಅವರು ಕೆಲವು ತಿಂಗಳುಗಳ ಹಿಂದೆ ಸುಹಾಸ್ ತನಗೆ ಪ್ರೇಮ ನಿವೇದನೆ ಮಾಡಿದ ವೀಡಿಯೋವೊಂದನ್ನ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಇನ್ನು ನಟಿ ರಚನಾ ಸ್ಮಿತ್ ಮತ್ತು ಸುಹಾಸ್ ನವ ದಂಪತಿಗಳಿಗೆ ಅವರ ಅಭಿಮಾನಿಗಳು ಹಿತೈಷಿ ಸ್ನೇಹಿತವರ್ಗದವರು ಶುಭ ಹಾರೈಸಿದ್ದಾರೆ.

Leave a Reply

%d bloggers like this: