ಗೀತಾ ವಿಜಿ ನಿಜ ಜೀವನದಲ್ಲಿ ಮದುವೆ

ಗೀತಾ ಧಾರಾವಾಹಿಯ ಮೂಲಕ ಪ್ರಸಿದ್ಧರಾದ ಗೀತಾ ಪಾತ್ರದ ನಟಿ ಹಾಗೂ ವಿಜಿ ಪಾತ್ರದ ನಟ ಯಾರಿಗೆ ಗೊತ್ತಿಲ್ಲ ಹೇಳಿ.ಕರೋನಾ ಇಂದ ಹಲವಾರು ನೊಂದಿದ್ದಾರೆ.ಧಾರಾವಾಹಿ ಚಿತ್ರೀಕರಣ ಕೂಡ ಸ್ತಗಿತಗೊಂಡಿತ್ತು.ಇದನ್ನೇ ನಂಬಿದ್ದ ಕಿರುತೆರೆಯ ಕಲಾವಿದರಿಗೂ ಕೂಡ ನಷ್ಟವಾಗಿತ್ತು.ಅನೇಕ ಧಾರಾವಾಹಿಗಳು ಶಾಶ್ವತವಾಗಿ ನಿಂತುಹೋದ್ವಂತೆ.ಈ ಸಮಯದಲ್ಲೂ ಗೀತಾ ಧಾರಾವಾಹಿ ಯಶಸ್ಸು ಕಂಡಿದೆ.ಶೂಟಿಂಗ್ ಆರಂಭಿಸಲು ಸರ್ಕಾರ ಅನುಮತಿ ನೀಡಿದಂದಿನಿಂದ ಕೆಲವು ಧಾರಾವಾಹಿಗಳು ಮಾತ್ರ ಹೊಸ ಸಂಚಿಕೆಗಳನ್ನು ಚಿತ್ರೀಕರಣ ಮಾಡಿ ಪ್ರಸಾರ ಮಾಡಿವೆ.ಗೀತಾ ಧಾರಾವಾಹಿ ಪ್ರಾರಂಭವಾದ ಕೆಲವೇ ದಿನಗಳಲ್ಲೇ ಲಾಕ್ ಡೌನ್ ಆಗಿ ಚಿತ್ರೀಕರಣ ಸ್ತಗಿತಗೊಂಡು ಮತ್ತೆ ಹಳೆಯ ಸಂಚಿಕೆಗಳನ್ನೇ ಮರುಪ್ರಸಾರ ಮಾಡ್ತಿದ್ರು.

ನಂತರ ಹೊಸ ಸಂಚಿಕೆಗಳನ್ನು ಪ್ರಸಾರ ಮಾಡಲು ಶುರು ಮಾಡಿದ ಗೀತಾ ಧಾರಾವಾಗಿ ಈಗ ನೂರು ಸಂಚಿಕೆಗಳನ್ನು ಪೂರೈಸಿದೆ. ಈ ಧಾರಾವಾಹಿಯಲ್ಲಿ ಗೀತಾ ಮತ್ತು ವಿಜಯ್ ಅದ್ಭುತವಾಗಿ ನಟಿಸಿ ಮನೆಮಾತಾಗಿದ್ದಾರೆ.ನಿಜ ಜೀವನದಲ್ಲಿ ಕೂಡ ಇವರ ಜೋಡಿ ಸುಂದರವಾಗಿದೆ.ಇವರನ್ನು ಜನ ಗೀತಾ,ವಿಜಯ್ ಎಂದೇ ಗುರುತಿಸುತ್ತಾರಂತೆ.ವಿಜಯ್ ಅವರ ನಿಜವಾದ ಹೆಸರು ಧನುಷ್.
ಗೀತಾರ ಹೆಸರು ಭವ್ಯ ಗೌಡ.ಭವ್ಯ ಅವರಿಗೆ ಈಗ ಸಿನಿಮಾದಲ್ಲೂ ಅವಕಾಶಗಳು ಸಿಗುತ್ತಿವೆಯಂತೆ.ಮಾಡೆಲಿಂಗ್ ಕ್ಷೇತ್ರದಲ್ಲೂ ಮಿಂಚುತ್ತಿದ್ದಾರೆ.

ಧಾರಾವಾಹಿಯಲ್ಲಿ ವಿಜಯ್ ಎಷ್ಟೇ ಪೇಚಾಡಿದರೂ ಗೀತಾರನ್ನು ಪಡೆದುಕೊಳ್ಳಲಾಗುತ್ತಿಲ್ಲ.ಕಾರಣ ಗೀತಾರಿಗೆ ಬೇಗ ಬೇರೊಂದು ಮದುವೆ ಮಾಡಲು ಹೋರಾಡುತ್ತಾರೆ ಅವರ ತಂದೆ. ಹೀಗೆ ಅನೇಕ ತಿರುವುಗಳನ್ನ ಹೊಂದಿದೆ ಗೀತಾ ಧಾರಾವಾಹಿ.ಈ ಜೋಡಿಯನ್ನು ಪ್ರೇಕ್ಷಕರು ಭಾರೀ ಮೆಚ್ಚಿದ್ದಾರೆ.ಶೂಟಿಂಗ್ ಸಮಯವನ್ನೂ ಬಹಳ ಆತ್ಮೀಯವಾಗಿ ಕಳೆಯುತ್ತಾರಂತೆ.
ನಿಜ ಜೀವನದಲ್ಲೂ ಮದುವೆ ಆಗಿ ಎಂದು ಹೇಳ್ತಿದ್ದಾರೆ.ಎಷ್ಟೋ ಜೋಡಿಗಳು ಹೀಗೆ ಒಂದಾಗಿವೆ ನೀವು ಕೂಡ ಒಂದಾಗಿ ಎಂಬ ಸಲಹೆ ಜನರದ್ದು.ಆದರೆ ಇದಕ್ಕೆ ಪ್ರತಿಕ್ರಿಯೆ ಕೊಟ್ಟಿರುವ ಗೀತಾ ವಿಜಿ ನಿಜ ಜೀವನದಲ್ಲಿ ನಾವಿಬ್ಬರೂ ಉತ್ತಮ ಸ್ನೇಹಿತರು ನಮಗೆ ಆ ಭಾವನೆ ಬಂದಿಲ್ಲ ಎಂದು ತಿಳಿಸಿದ್ದಾರೆ.

Leave a Reply

%d bloggers like this: