ಗಂಡಂದಿರಿಗೆ ಕೊಕ್ ಕೊಟ್ಟು ಮತ್ತೊಬ್ಬರನ್ನು ಮದುವೆಯಾದ ನಟಿಯರು ಇವರು

ಬಣ್ಣದ ಲೋಕದಲ್ಲಿ ಮುಳುಗಿದ ನಟನಟಿಯರು ಬೇರೆ ವೈಯಕ್ತಿಕ ಆಸೆಗಳಿಗೆ ಸ್ಪಂದಿಸದ ಸಂಗಾತಿಯನ್ನು ಬೇಡ ಅಂತ ಸಂಬಂಧ ಮುರಿದುಕೊಂಡ ಉದಾಹರಣೆಗಳು ಹಲವಾರು.ಅದರಲ್ಲಿ ಕೆಲವು ಮೋಸದ ಪ್ರಕರಣಗಳು ಕೂಡ ಸಹಜ.ಅಂಥ ಪ್ರಕರಣಗಳಲ್ಲಿ ಕೆಲವನ್ನು ನೋಡೋಣ ಬನ್ನಿ.ಬರಿ ನಟರಷ್ಟೇ ಅಲ್ಲ ನಟಿಯರು ಇದ್ದಾರೆ.ಈ ಸುದ್ದಿ ನಟಿಯರ ಬಗ್ಗೆ ಇದೆ ಮುಂದೆ ಓದಿ. ಕಾವ್ಯ ಮಾಧವನ್ ಮಲಯಾಳಂ ಸ್ಟಾರ್ ನಟಿ‌.೭೦ಕ್ಕಿಂತ ಹೆಚ್ಚು ಚಿತ್ರಗಳಲ್ಲಿ ನಟಿಸಿದ ಪ್ರತಿಭಾವಂತ ನಟಿ.ಈಕೆ ಮೊದಲ ಗಂಡನಿಗೆ ವಿಚ್ಛೇದನ ಕೊಟ್ಟು ನಂತರ ನಿರ್ದೇಶಕ ದಿಲೀಪ್ ಅವರನ್ನು ಮದುವೆಯಾದರು.ಇತ್ತೀಚೆಗೆ ಇವರ ಹೆಸರು ನಟಿ ಭಾವನಾ ಅವರ ಕಿಡ್ನಾಪ್ ಕೇಸಲ್ಲಿ ಕೇಳಿ ಬಂದಿತ್ತು.ಆ ಕೇಸ್ ಇನ್ನೂ ಇತ್ಯರ್ಥವಾಗಿಲ್ಲ.ಒಂದು ವೇಳೆ ಕಿಡ್ನಾಪಿಗೆ ಇವರೇ ಕಾರಣ ಅಂತ ಸಾಬೀತಾದರೆ ಖಂಡಿತ ದಿಲೀಪ್ ಕಾವ್ಯ ಜೀವನ ಛಿದ್ರವಾಗುತ್ತದೆ.

ಬಾಲಿವುಡ್ಡಿನ ಹೆಸರಾಂತ ನಟಿ ರೇಖಾ ಅಮಿತಾಭ್ ಬಚ್ಚನ್‌ರನ್ನು ತುಂಬಾ ಪ್ರೀತಿಸುತ್ತಿದ್ದರು.ಈ ಕಾರಣಕ್ಕೆ ತನ್ನ ಗಂಡನಿಗೆ ಟಾರ್ಚರ್ ಕೊಡುತ್ತಿದ್ದರಂತೆ.ಅದರಿಂದ ನೊಂದ ರೇಖಾರ ಗಂಡ ಸೂಸೈಡ್ ಮಾಡಿಕೊಂಡರಂತೆ.ಆದರೂ ರೇಖಾ ಅಮಿತಾಭ್ ಮಾತ್ರ ತನ್ನ ಗಂಡ ಅಂತ ಭಾವಿಸಿಕೊಂಡು ಈಗಲೂ ಸುಮಂಗಲಿಯಂತೆ ಇರುತ್ತಾರೆ. ವಿನಿತಾ ವಿಜಯ್‌ಕುಮಾರ್ ಖ್ಯಾತ ನಟಿ ಮಂಜುಳಾ ಹಾಗೂ ವಿಜಯ್‌ಕುಮಾರ್ ಅವರ ಪುತ್ರಿ.ಮೊದಲು ಒಬ್ಬರನ್ನು ಮದುವೆಯಾಗಿ ಆ ಸಂಬಂಧ ಈಕೆಗೆ ಸರಿಬರದೇ ಡೈವೊರ್ಸ್ ಪಡೆದು ಆಕಾಶ್ ಅನ್ನುವ ಟಿವಿ ನಿರೂಪಕರನ್ನು ಮದುವೆಯಾಗುತ್ತಾಳೆ.ಆ ಸಂಬಂಧವೂ ಈಕೆಗೆ ಸರಿ ಬರದೇ ಆನಂದ್ ರಾಜ್ ಅನ್ನುವವರನ್ನು ಮದುವೆಯಾಗಿದ್ದಾರೆ.ಒಟ್ಟು ಈಕೆಗೆ ಮೂರು ಸಾರಿ ಮದುವೆಯಾಗಿದೆ.

ರಾಧಿಕಾ ಶರತ್‌ಕುಮಾರ್ ದಕ್ಷಿಣದ ಭಾರತದ ಪ್ರಮುಖ ಸ್ಟಾರ್ ನಟಿ‌.ಕನ್ನಡದಲ್ಲಿ ಕೂಡ ಹೆಸರು ಮಾಡಿದವರು.ಮೊದಲು ಪ್ರತಾಪ್ ಪುತಾನಿ ಅನ್ನುವವರನ್ನು ಮದುವೆಯಾದರು.ಮೊದಲು ರಾಧಿಕಾನೇ ಅವರನ್ನು ಪ್ರೀತಿಸಿದ್ದರಿಂದ ಆತನಿಗೆ ಇದು ಬಲವಂತದ ಮದುವೆ.ಆ ಸಂಬಂಧ ಸರಿಬರದ ಕಾರಣ ಮತ್ತೊಬ್ಬರನ್ನು ಮದುವೆಯಾಗಿ ಆ ಸಂಬಂಧವೂ ಸರಿಬರದೇ ನಟ ಶರತ್‌ಕುಮಾರ್ ಅವರನ್ನು ವಿವಾಹವಾಗಿ ನೆಲೆ ನಿಂತರು.

Leave a Reply

%d bloggers like this: