ಗಂಡು ಮಗುವಿಗೆ ಜನ್ಮ ನೀಡಿದ ಬಾಲಿವುಡ್ ಖ್ಯಾತ ನಟಿ

ಬಾಲಿವುಡ್ ಸುಪ್ರಸಿದ್ದ ತಾರೆ ಇತ್ತೀಚೆಗೆ ಗಂಡು ಮಗುವಿಗೆ ಜನ್ಮ ನೀಡುವ ಮೂಲಕ ಬಿಟೌನ್ ನಲ್ಲಿ ಭಾರಿ ಸುದ್ದಿಯಲ್ಲಿದ್ದಾರೆ. ಈ ಸಿನಿಮಾ ಸೆಲೆಬ್ರಿಟಿಗಳು ತಮ್ಮ ಸಿನಿಮಾಗಳಷ್ಟೇ ತಮ್ಮ ವೈಯಕ್ತಿಕ ಜೀವನದ ವಿಚಾರಗಳಿಗೂ ಕೂಡ ಸುದ್ದಿ ಆಗುತ್ತಲೇ ಇರುತ್ತಾರೆ. ಅಂತೆಯೇ ಇದೀಗ ಹಿಂದಿ ಚಿತ್ರರಂಗದ ಖ್ಯಾತ ನಟಿ ಸೋನಮ್ ಕಪೂರ್ ಅವರು ಗಂಡು ಮಗುವಿಗೆ ಜನ್ಮ ನೀಡುವ ಮೂಲಕ ಸುದ್ದಿಯಾಗಿದ್ದಾರೆ. ಹೌದು ನಟಿ ಸೋನಮ್ ಕಪೂರ್ ಅವರು ಉದ್ಯಮಿ ಆನಂದ್ ಅಹೂಜ ಅವರನ್ನ 2018ರಲ್ಲಿ ತಮ್ಮ ಬಾಳ ಸಂಗಾತಿಯಾಗಿ ಸ್ವೀಕರಿಸಿದ್ದಾರೆ. ನಟಿ ಸೋನಂ ಕಪೂರ್ ಅವರು ಬಾಲಿವುಡ್ ಖ್ಯಾತ ನಟ ಕಮ್ ನಿರ್ಮಾಪಕ ಅನಿಲ್ ಕಪೂರ್ ಅವರ ಪುತ್ರಿ. ತಮ್ಮ ತಂದೆಯಂತೆ ಸೋನಮ್ ಕಪೂರ್ ಸಹ ಬಣ್ಣದ ಲೋಕದಲ್ಲಿ ಮಿಂಚಿ ಸ್ಟಾರ್ ನಟಿಯಾಗಿದ್ದಾರೆ.

ಸೋನಮ್ ಕಪೂರ್ ಅವರು ತಮ್ಮ ಪ್ರತಿಭೆಗೆ ತಕ್ಕಂತೆ ರಾಷ್ಟ್ರೀಯ ಮತ್ತು ಫಿಲಂಫೇರ್ ಪ್ರಶಸ್ತಿಯನ್ನ ಗೆದ್ದಿದ್ದು, 2012 ರಿಂದ 2016 ರವರೆಗೆ ಫೋರ್ಬ್ಸ್ ಪಟ್ಟಿಯಲ್ಲಿ ಅತ್ಯಧಿಕ ಆದಾಯ ಗಳಿಸುವ ನೂರು ಸೆಲೆಬ್ರಿಟಿಗಳ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದರು. ಸೋನಮ್ ಕಪೂರ್ 2005ರಲ್ಲಿ ಬಣ್ಣದ ಲೋಕಕ್ಕೆ ಬಾಲಿವುಡ್ ಖ್ಯಾತ ನಿರ್ದೇಶಕ ಸಂಜಯ್ ಲೀಲಾ ಬನ್ಸಾಲಿ ಅವರ ಚಿತ್ರವೊಂದಕ್ಕೆ ಸಹಾಯಕ ನಿರ್ದೇಶಕಿಯಾಗಿ ಎಂಟ್ರಿ ಕೊಟ್ಟರು. ತದ ನಂತರ ಸಂಜಯ್ ಲೀಲಾ ಬನ್ಸಾಲಿ ಅವರ ಸಾವರಿಯಾ ಎಂಬ ಪ್ರೇಮಕಥಾ ಹಂದರ ಹೊಂದಿರುವ ಸಿನಿಮಾ ಮೂಲಕ ನಾಯಕಿ ನಟಿಯಾಗಿ ಹೆಜ್ಜೆ ಇಟ್ಟ ಸೋನಮ್ ಕಪೂರ್ ಅವರು ತದ ನಂತರ ತಿರುಗಿ ನೋಡಿದ್ದೇ ಇಲ್ಲ. ಬಹು ಬೇಡಿಕೆಯ ನಟಿಯಾಗಿ ಮಿಂಚುತ್ತಿರುವ ಸಂಧರ್ಭದಲ್ಲಿಯೇ ಬಿಝೆನೆಸ್ ಮ್ಯಾನ್ ಆನಂಜ್ ಅಹೂಜ ಅವರೊಟ್ಟಿಗೆ ಸಾಂಸಾರಿಕ ಜೀವನಕ್ಕೆ ಹೆಜ್ಜೆ ಇಟ್ಟು ಸೋನಮ್ ಕಪೂರ್ ಅವರು ಮದುವೆ ಆದ ನಂತರ ಬಣ್ಣದ ಲೋಕದಿಂದ ಅಂತರ ಕಾಯ್ದುಕೊಂಡರು.

ಇದೀಗ ನಟಿ ಸೋನಮ್ ಕಪೂರ್ ಅವರು ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ಈ ವಿಚಾರವನ್ನು ಸ್ವತಃ ನಟಿ ಸೋನಮ್ ಕಪೂರ್ ಅವರೇ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ತಿಳಿಸಿದ್ದಾರೆ. ಇನ್ಸ್ಟಾ ಗ್ರಾಮ್ ಖಾತೆಯಲ್ಲಿ ಸೋನಮ್ ಕಪೂರ್ ಅವರು 20/08/2022 ರಂದು ನಾವು ಮುದ್ದು ಪುಟಾಣಿ ಗಂಡು ಮಗುವನ್ನ ಹೃದಯಾಂತರಾಳದಿಂದ ಶಿರಬಾಗಿಸಿ ಸ್ವಾಗತ ಮಾಡಿಕೊಂಡಿದ್ದೇವೆ. ನನ್ನ ಈ ಗರ್ಭಿಣಿವಸ್ಥೆಯ ಸಮಯದಲ್ಲಿ ನನಗೆ ಸಹಾಯಕರಾಗಿ, ಮಾರ್ಗದರ್ಶಕರಾಗಿ ನೆರವಾದ ಆಸ್ಪತ್ರೆಯ ವೈದ್ಯರು, ನರ್ಸ್ ಮತ್ತು ಕುಟುಂಬ ವರ್ಗದವರಿಗೆ ತುಂಬ ಧನ್ಯವಾದಗಳು. ನಮ್ಮ ಕುಟುಂಬ ಈಗ ಬದಲಾಗಿದೆ ಎಂದು ಬರೆದು ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಈ ಸುದ್ದಿ ತಿಳಿದ ಸೋನಮ್ ಕಪೂರ್ ಅವರ ಅಭಿಮಾನಿಗಳು ಮತ್ತು ಒಂದಷ್ಟು ಸೆಲೆಬ್ರಿಟಿಗಳು ಸೋನಮ್ ಕಪೂರ್ ಆನಂದ್ ಅಹೂಜ ದಂಪತಿಗಳಿಗೆ ಶುಭ ಹಾರೈಸಿದ್ದಾರೆ.

Leave a Reply

%d bloggers like this: