ಗಂಡಸರೇ ಇಲ್ಲದಿರುವ ಈ ಊರಿನಲ್ಲಿ ಹೆಂಗಸರು ತುಂಬು ಗ ರ್ಭಿಣಿಯಾಗುತ್ತಾರೆ. ಇದು ಹೇಗೆ ಸಾಧ್ಯ ಗೊತ್ತಾ

ಗಂಡಸರೇ ಇಲ್ಲದಿರುವ ಈ ಊರಿನಲ್ಲಿ ಹೆಂಗಸರು ತುಂಬು ಗ ರ್ಭಿಣಿಯಾಗುತ್ತಾರೆ. ಇದು ಹೇಗೆ ಸಾಧ್ಯ ಗೊತ್ತಾ
ಗಂಡು-ಹೆಣ್ಣು ಜೊತೆಗೂಡಿ ಸಂತಾನ ಆಗುವುದು ಪ್ರಕೃತಿ ನಿಯಮ.ಆದರೆ ಈ ಊರಿನಲ್ಲಿ ಗಂಡಸರೇ ಇಲ್ಲ ಆದರೂ ಕೂಡ ಹೆಂಗಸರು ಗರ್ಭವತಿಗಳಾಗುತ್ತಾರೆ.ಇದು ನಿಜಕ್ಕೂ ಕೂಡ ಅಚ್ಚರಿ ಸಂಗತಿಯಾಗಿದೆ.ಇದರ ಬಗ್ಗೆ ತಿಳಿಯುವುದಾದರೆ ಈ ವಿಚಿತ್ರ ಗ್ರಾಮ ಇರುವುದು ಕೀನ್ಯಾ ದೇಶದಲ್ಲಿ. ಕೀನ್ಯಾ ದೇಶದ ಉಮೋಜೋ ಎಂಬ ಗ್ರಾಮವೇ ಈ ವಿಚಿತ್ರ ಸುದ್ದಿಗೆ ಸಾಕ್ಷಿಯಾಗಿರೋದು. ಹೌದು ಮನುಷ್ಯ ಸಂಘಜೀವಿ.ಪರಸ್ಪರ ಒಬ್ಬರಿಗೊಬ್ಬರು ಅವಲಂಬನೆ ಇದ್ದೇ ಇರುತ್ತದೆ.ಆದರೆ ಮನುಷ್ಯ ಮನುಷ್ಯನನ್ನು ಹೊರತು ಬದುಕಲಾರ. ಆದರೆ ಈ ಭಿನ್ನ ಲಿಂಗ ಮನುಷ್ಯರು ಅಂದರೆ ಹೆಣ್ಣು ಮತ್ತು ಗಂಡು ಇವರು ಒಬ್ಬರನ್ನ ಬಿಟ್ಟು ಮತ್ತೊಬ್ಬರು ಇರಬಹುದು.ಇದು ಅಗತ್ಯ ಅನಿವಾರ್ಯತೆಗಳ ಮೇಲೆ ಅವಲಂಬಿತವಾಗಿರುತ್ತದೆ.ಅಂತೆಯೇ ಜಗತ್ತಿನಲ್ಲಿ ಕೇವಲ ಹೆಂಗಸರೇ ಹೆಚ್ಚಾಗಿ ವಾಸಿಸುವ ಊರುಗಳಿವೆ.ಆದರೆ ಈ ಕೀನ್ಯಾ ದೇಶದ ಉಮೋಜೋ ಎಂಬ ಇಡೀ ಊರಿಗೆ ಊರೇ ಸಂಪೂರ್ಣವಾಗಿ ಹೆಂಗಸರೇ ಇದ್ದಾರೆ. ಇಲ್ಲಿ ಪುರುಷರು ಯಾರೂ ಕೂಡ ವಾಸಿಸುತ್ತಿಲ್ಲ.ಈ ಊರಿನಲ್ಲಿ ಸೌಂದರ್ಯವಂತ ಯುವತಿಯರು,ಮಹಿಳೆಯರು ಮಾತ್ರ ಕಾಣ ಸಿಗುತ್ತಾರೆ.

ಇಲ್ಲಿ ಗಂಡಸರನ್ನ ನಿಷೇಧ ಮಾಡಲಾಗಿದೆಯಂತೆ.ಇದು ಇತ್ತೀಚೆಗೆ ಅಂದರೆ ಕೇವಲ ಸರಿ ಸುಮಾರು 27 ವರ್ಷಗಳೀಂದೀಚೆಗೆ ಹೆಂಗಸರಷ್ಟೇ ಈ ಊರಿನಲ್ಲಿ ವಾಸಿಸುತ್ತಿದ್ದಾರಂತೆ.ಆರಂಭದಲ್ಲಿ ಉಮೋಜೋ ಗ್ರಾಮದಲ್ಲಿ ಕೇವಲ ಹದಿನೈದು ಮಂದಿ ಮಹಿಳೆಯರು ಮಾತ್ರ ಇದ್ದರಂತೆ.ಇದೀಗ ಈ ಸಂಖ್ಯೆ ನೂರೈವತ್ತನ್ನು ಮೀರಿದೆಯಂತೆ.ಅರೇ ಅದೇಗೆ ಒಂದೆಡೆ ಪುರುಷರೇ ಇಲ್ಲ.ಆದರೂ ಇಲ್ಲಿನ ಮಹಿಳೆಯರ ಸಂಖ್ಯೆ ಹೇಗೆ ಹೆಚ್ಚಾಯಿತು ಎಂಬ ಪ್ರಶ್ನೆ ಮೂಡಬಹುದು. ಹೌದು ಇದಕ್ಕೆ ಮುಂದೆ ಉತ್ತರ ಸಿಗಲಿದೆ.ಈ ಉಮೋಜೋ ಗ್ರಾಮಕ್ಕೆ ಪ್ರವೇಶ ಮಾಡುತ್ತಲೇ ದೊಡ್ಡದಾದ ಕಪ್ಪು ಬೋರ್ಡ್ ವೊಂದು ಕಾಣಿಸುತ್ತದೆ.ಈ ಬೋರ್ಡಿನಲ್ಲಿ ಈ ಊರಿಗೆ ಪುರುಷರ ಪ್ರವೇಶ ನಿಷಿದ್ದ ಎಂದು ಬರೆಯಲಾಗಿದೆ.1990 ರಲ್ಲಿ ಆಂಗ್ಲರು ಕೀನ್ಯಾ ದೇಶದ ಸ್ತ್ರೀಯರ ಮೇಲೆ ದಬ್ಬಾಳಿಕೆ ದೌರ್ಜನ್ಯ ಎಸಗಿದ್ದರಂತೆ.ಇವರ ದೌರ್ಜನ್ಯ ಸಹಿಸಿಕೊಳ್ಳಲಾಗದೆ ಒಂದಷ್ಟು ಮಹಿಳೆಯರು ಯಾರ ಅಂಗಿಲ್ಲದೆ ಸ್ವತಂತ್ರವಾಗಿ ತಮ್ಮದೇಯಾದ ಒಂದು ಗ್ರಾಮವನ್ನು ಕಟ್ಟುತ್ತಾರೆ.ಅಂದಿದ್ದ ಕೇವಲ ಹದಿನೈದು ಮಹಿಳೆಯರೇ ಈ ಗ್ರಾಮವನ್ನು ಕಟ್ಟಿದ್ದರಂತೆ.ಇಲ್ಲಿಗೆ ಗಂಡಸರ ಪ್ರವೇಶವನ್ನ ನಿಷಿದ್ದ ಮಾಡುತ್ತಾರಂತೆ.

ಇಲ್ಲಿದ್ದ ಹದಿನೈದು ಮಹಿಳೆಯರ ಸಂಖ್ಯೆ ಇದೀಗ ನೂರೈವತ್ತು ಆಗಿದ್ದು ಹೇಗೆ ಸಾಧ್ಯ ಅಂದರೆ ಪ್ರಕೃತಿ ನಿಯಮದಂತೆ ಇಲ್ಲಿನ ಹೆಂಗಸರಿಗೆ ತಮ್ಮ ದೈಹಿಕ ಆಸೆಗಳನ್ನ ಈಡೇರಿಸಿಕೊಳ್ಳಲು ಪಕ್ಕದೂರಿಗೆ ಹೋಗುತ್ತಿದ್ದರಂತೆ.ತಮಗೆ ಹೆಣ್ಣು ಮಗುವಾದರೆ ಮಾತ್ರ ತಮ್ಮ ಜೊತೆ ಕರೆದುಕೊಂಡು ತಮ್ಮ ಉಮೋಜೋ ಊರಿಗೆ ಬರುತ್ತಿದ್ದರು.ಗಂಡು ಮಗುವಾಗಿದ್ದರು ಯಾವ ಪುರುಷನ ಜೊತೆ ದೈಹಿಕ ಸಂಬಂಧ ಹೊಂದಿತ್ತಿದ್ದರೋ ಅವರಿಗೆ ಆ ಮಗುವನ್ನು ನೀಡಿ ಬರುತ್ತಿದ್ದರು.ಇಂತಹ ವಿಚಿತ್ರ ಪದ್ದತಿ ಹೊಂದಿರುವ ಈ ಊರಿನಲ್ಲಿ ಯಾವುದೇ ಮೂಲಭೂತ ಸೌಕರ್ಯಗಳಿಂದ ವಂಚಿತವಾಗಿಲ್ಲ. ಇಲ್ಲಿ ಎಲ್ಲಾ ಸೌಕರ್ಯಗಳಿವೆ. ಕೇವಲ ನೂರೈವತ್ತು ಹೆಂಗಸರು ಮಾತ್ರ ವಾಸಿಸುವ ಈ ಉಮೋಜೋ ಎಂಬ ಗ್ರಾಮದಲ್ಲಿ ಸುಸಜ್ಜಿತ ಆಸ್ಪತ್ರೆ,ಕುಡಿಯುವ ನೀರಿನ ಘಟಕ ಸೇರಿದಂತೆ ಸುಂದರ ಉದ್ಯಾನವನ ಕೂಡ ಇಲ್ಲಿದೆ.ಸಂಬುದು ಎಂಬ ಈ ಉದ್ಯಾವನ ನೋಡಲು ಹೊರ ಊರುಗಳಿಂದ ಪ್ರವಾಸಿಗರಂತೆ ಜನ ಬರುತ್ತಾರೆ.ಇದಕ್ಕೆ ಇಲ್ಲಿನ ಹೆಂಗಸರು ಪ್ರವೇಶ ಶುಲ್ಕದಂತೆ ಇಂತಿಷ್ಟು ಹಣವನ್ನೂ ಕೂಡ ಪಡೆಯುತ್ತಾರೆ.ಒಟ್ಟಾರೆಯಾಗಿ ಆಧುನಿಕ ಜಗತ್ತು ಇಷ್ಟು ಮುಂದುವರಿದಿದ್ದರು ಕೂಡ ಈ ಕೀನ್ಯಾ ದೇಶದ ಉಮೋಜೋ ಎಂಬ ಊರು ವಿಶಿಷ್ಟವಾಗಿ ಉಳಿದುಕೊಂಡಿದೆ.