ಗಂಡನಿಂದ ದುಬಾರಿ ಬೆಲೆಯ ಕಾರು ಉಡುಗೊರೆಯಾಗಿ ಪಡೆದ ದಕ್ಷಿಣ ಭಾರತದ ನಿರೂಪಕಿ

ತಮಿಳಿನ ಸ್ಪೂರದ್ರೂಪಿ ಖ್ಯಾತ ನಿರೂಪಕಿ ಕಮ್ ನಟಿ ಮಹಾಲಕ್ಷ್ಮಿ ಅವರನ್ನ ಮದುವೆಯಾಗಿ ಭಾರಿ ಸುದ್ದಿಯಾಗಿದ್ದ ನಿರ್ಮಾಪಕ ರವೀಂದರ್ ಈಗ ತಮ್ಮ ಮುದ್ದಿನ ಹೆಂಡತಿಗೆ ಸ್ಪೆಷಲ್ ಆಗಿ ಸರ್ಪ್ರೈಸ್ ಗಿಫ್ಟ್ ನೀಡಿದ್ದಾರೆ. ನಿರ್ಮಾಪಕ ರವೀಂದರ್ ಅವರು ತಮ್ಮ ಸಂಗಾತಿಗೆ ನೀಡಿರೋ ಈ ದುಬಾರಿ ಗಿಫ್ಟ್ ಕಂಡು ನೆಟ್ಟಿಗರು ಅಚ್ಚರಿ ವ್ಯಕ್ತಪಡಿಸಿದ್ದಾರೆ. ನಿರ್ಮಾಪಕ ರವೀಂದರ್ ಅವರು ಅಂತಹ ಯಾವ ಉಡುಗೊರೆ ನೀಡಿ ಸುದ್ದಿ ಆಗಿದ್ದಾರೆ‌. ಏನಿದು ಈ ವೈರಲ್ ಸುದ್ದಿ ಅನ್ನೋದನ್ನ ಈ ಲೇಖನದ ಮೂಲಕ ತಿಳಿಯೋಣ. ನಟಿ ಮಹಾಲಕ್ಷ್ಮಿ ಅವರು ತಮಿಳು ಕಿರುತೆರೆಯ ಜನಪ್ರಿಯ ನಟಿ. ಅದರ ಜೊತೆಗೆ ನಿರೂಪಿಕಿಯೂ ಸಹ ಸಾಕಷ್ಟು ಹೆಸರು ಮಾಡಿದವರು. ಮದುವೆಯಾಗಿ ಮಗನನ್ನ ಹೊಂದಿದ್ದ ಮಹಾಲಕ್ಷ್ಮಿ ಅವರು ಕಾರಣಾಂತರಗಳಿಂದ ತಮ್ಮ ದಾಂಪತ್ಯ ಜೀವನಕ್ಕೆ ಅಂತ್ಯ ಹಾಡಿದ್ದರು.

ತದ ನಂತರ ಬದಲಾದ ಕಾಲಾನುಕ್ರಮದಲ್ಲಿ ನಿರ್ಮಾಪಕ ರವೀಂದರ್ ಚಂದ್ರಶೇಖರ್ ಅವರ ಪರಿಚಯ, ಸ್ನೇಹವಾಗಿ ಕೊನೆಗೆ ಮದುವೆ ಕೂಡ ಆದ್ರು. ಇದು ಎಲ್ಲೆಡೆ ಭಾರಿ ಸುದ್ಥಿಯಾಯ್ತು. ಅರೇ ಇವರು ಮದ್ವೆ ಆದ್ರೇ ಯಾಕಪ್ಪಾ ಸುದ್ದಿ ಆಗ್ಬೇಕು ಅನ್ನೋದಾದ್ರೆ. ಇವರು ಒಬ್ಬರು ಸೆಲೆಬ್ರಿಟಿಗಳು ಮದ್ವೆ ಆಗೋದ್ರಲ್ಲಿ ಸುದ್ದಿ ಆಗೋದ್ರಲ್ಲಿ ಅಚ್ಚರಿ ಇರ್ಲಿಲ್ಲ. ಆದರೆ ನಟಿ ಮಹಾಲಕ್ಷ್ಮಿ ಸೌಂದರ್ಯವತಿ. ಆಕೆ ಮದುವೆ ಆಗಿದ್ದು ಮಾತ್ರ ದಡೂತಿ ದೇಹ ಹೊಂದಿರುವ ನಿರ್ಮಾಪಕ ರವೀಂದರ್ ಚಂದ್ರಶೇಖರ್ ಅವರನ್ನ. ಹಾಗಾಗಿ ಈ ಜೋಡಿ ಸೋಶಿಯಲ್ ಮೀಡಿಯಾಗಳಲ್ಲಿ ಭಾರಿ ಟ್ರೋಲ್ ಆಯ್ತು. ಆದ್ರೆ ಇದಕ್ಕೆಲ್ಲಾ ತಲೆ ಕೆಡಿಸಿಕೊಳ್ಳದ ಈ ನವದಂಪತಿ ತಾವು ಅನೂನ್ಯವಾಗಿ ಜೀವನ ಸಾಗಿಸುತ್ತಾ ತಮ್ಮ ಸುಂದರ ಕ್ಷಣಗಳ ಹೊಸ ದಾಂಪತ್ಯದ ಬದುಕನ್ನ ಒಂದಷ್ಟು ಫೋಟೋಗಳನ್ನ ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಪೋಸ್ಟ್ ಮಾಡಿ ಆಗಾಗ ಸುದ್ದಿಯಾಗ್ತಾನೇ ಇರ್ತಾರೆ.

ಆದ್ರಂತೆ ಇದೀಗ ನಿರ್ಮಾಪಕ ರವೀಂದರ್ ಚಂದ್ರಶೇಖರ್ ಅವರು ತಮ್ಮ ಬಾಳಸಂಗಾತಿ ಮಹಾಲಕ್ಷ್ಮಿ ಅವರಿಗೆ ದುಬಾರಿ ಬೆಲೆಯ ಐಷಾರಾಮಿ ಎಂಜಿ ಮೋಟಾರ್ ಕಂಪನಿಯ ಗ್ಲೋಸ್ಟರ್ ಎಸ್ಯೂವಿ ಕಾರನ್ನ ಗಿಫ್ಟ್ ಆಗಿ ನೀಡಿದ್ದಾರೆ. ಈ ಕಾರನ್ನ ಮಹಾಲಕ್ಷ್ಮಿ ಅವರಿಗೆ ಗಿಫ್ಟ್ ನೀಡ್ತಿರೋ ಫೋಟೋವನ್ನ ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಪೋಸ್ಟ್ ಮಾಡಿ ರವೀಂದರ್ ಚಂದ್ರಶೇಖರ್ ಅವರು ನಮ್ಮ ಜೀವನದುದ್ದಕ್ಕೂ ನಮ್ಮನ್ನ ಇಷ್ಟಪಡುವ ವ್ಯಕ್ತಿಯನ್ನ ಕಂಡು ಹಿಡಿಯೋದು ತುಂಬಾ ಕಷ್ಟ. ನಾವು ಪ್ರೀತಿಸುವ ವ್ಯಕ್ತಿಯನ್ನ ಪ್ರೀತಿಸಿದರೆ ಅದಕ್ಕಿಂತ ಖುಷಿ ಮತ್ತೊಂದಿಲ್ಲ. ಹೊಸ ವೈಫ್, ಹೊಸ ಲೈಫ್, ಹೊಸ ಎಂಜಿ ಕಾರು ಡ್ರೈವ್ ಲೈಕ್ ಕ್ರೇಜಿ ಎಂದು ಬರೆದುಕೊಂಡಿದ್ದಾರೆ. ಇನ್ನು ರವೀಂದರ್ ಅವರು ಮಹಾಲಕ್ಷ್ಮಿ ಅವರಿಗೆ ನೀಡಿರೋ ಈ ಕಾರಿನ ಬೆಲೆ ಬರೋಬ್ಬರಿ 32 ಲಕ್ಷ ಎಂದು ತಿಳಿದುಬಂದಿದೆ.

Leave a Reply

%d bloggers like this: