ಗಜರಾಮನಾದ ರಾಜವರ್ಧನ್ ಅವರು, ಹೊಸ ಚಿತ್ರ ಘೋಷಿಸಿದ ಕನ್ನಡದ ಖ್ಯಾತ ಹಿರಿಯ ನಟನ ಪುತ್ರ

ಸಾಮಾನ್ಯವಾಗಿ ರಾಜವರ್ಧನ್ ಅಂದಾಕ್ಷಣ ಅಷ್ಟಾಗಿ ಗೊತ್ತಾಗೋದಿಲ್ಲ. ಆದ್ರೇ ಬಿಚ್ಚುಗತ್ತಿ ಸಿನಿಮಾ ರಾಜವರ್ಧನ್ ಅಂದ್ರೆ ಬಹುತೇಕರಿಗೆ ಗೊತ್ತಾಗುತ್ತಾರೆ. ತಂದೆ ಒಬ್ಬ ಕನ್ನಡದ ಖ್ಯಾತ ಹಾಸ್ಯ ನಟರಾಗಿ ಹೆಸರು ಮಾಡಿದವರಾದ್ರು ಕೂಡ ತನ್ನ ಸ್ವಂತ ಪ್ರತಿಭೆಯಿಂದ ಹೆಸರು ಮಾಡ್ಬೇಕು ಅಂತ ರಾಜವರ್ಧನ್ ಸಿನಿಮಾರಂಗದಲ್ಲಿ ಶ್ರಮ ಪಡುತ್ತಿದ್ದಾರೆ. ಒಳ್ಳೇ ಹೈಟು ವೇಯ್ಟು ನಟನೆಯಲ್ಲಿ ಕೂಡ ಪ್ರತಿಭಾವಂತನಾಗಿರೋ ನಟ ರಾಜವರ್ಧನ್ ಅವರಿಗೆ ಒಂದೊಳ್ಳೆ ಕಥೆ ಸಿಕ್ಕು ಆ ಚಿತ್ರ ಯಶಸ್ಸಾದ್ರೇ ನಿಜಕ್ಕೂ ಕೂಡ ನಟ ರಾಜವರ್ಧನ್ ಕನ್ನಡಕ್ಕೆ ಒಬ್ಬ ಮಾಸ್ ಅಂಡ್ ಕ್ಲಾಸ್ ಆಕ್ಟರ್ ಸಿಕ್ಕಂತೆ ಅಂತ ಹೇಳ್ಬೊದು. ಹೌದು ನಟ ರಾಜವರ್ಧನ್ ಅವರು ಬೇರಾರು ಅಲ್ಲ. ಕನ್ನಡದ ಖ್ಯಾತ ಹಿರಿಯ ಹಾಸ್ಯ ನಟರಾದ ಡಿಂಗ್ರಿ ನಾಗರಾಜ್ ಅವರ ಪುತ್ರ.

ಫ್ಲೈ ಎಂಬ ಚಿತ್ರದ ಮೂಲಕ ಸ್ಯಾಂಡಲ್ ವುಡ್ ಗೆ ಎಂಟ್ರಿ ಕೊಟ್ಟ ರಾಜವರ್ಧನ್ ನೂರೊಂದು ನೆನಪು, ಬಿಚ್ಚುಗತ್ತಿ ಎಂಬ ಚಿತ್ರ ಮಾಡಿದ್ದಾರೆ. ಬಿಚ್ಚುಗತ್ತಿ ಸಿನಿಮಾದಲ್ಲಿ ಭರಮಣ್ಣ ಎಂಬ ಪಾತ್ರದ ಮೂಲಕ ನಟ ರಾಜವರ್ಧನ್ ಅವರು ಕನ್ನಡ ಸಿನಿ ಪ್ರೇಕ್ಷಕರ ಗಮನ ಸೆಳೆದಿದ್ದಾರೆ. ಈ ಮೂರು ಸಿನಿಮಾಗಳು ನಿರೀಕ್ಷೆ ಮಟ್ಟಕ್ಕೆ ಯಶಸ್ಸು ನೀಡಿದ್ದರು ಕೂಡ ನಟ ರಾಜವರ್ಧನ್ ಅವರಿಗೆ ಅವಕಾಶಗಳಿಗೇನು ಕೊರತೆ ಇಲ್ಲ. ಅವರಿಗೆ ಸಾಲು ಸಾಲು ಸಿನಿಮಾಗಳ ಅವಕಾಶ ಹರಸಿ ಬರುತ್ತಿವೆ. ಇತ್ತೀಚೆಗಷ್ಟೇ ಹಿರಣ್ಯ ಎಂಬ ಸಿನಿಮಾದ ಮೂಲಕ ಮತ್ತೆ ಸುದ್ದಿಯಾಗಿದ್ದರು. ಹಿರಣ್ಯ ಸಿನಿಮಾದಲ್ಲಿ ರಾಜವರ್ಧನ್ ಅವರು ಫುಲ್ ನೆಗೆಟೀವ್ ಶೇಡ್ ನಲ್ಲಿ ಕಾಣಿಸಿಕೊಂಡಿದ್ದಾರೆ. ಹಿರಣ್ಯ ಸಿನಿಮಾದ ಪೋಸ್ಟರ್ ನಲ್ಲಿ ಸಖತ್ ರಗಡ್ ಲುಕ್ ನಲ್ಲಿ ಕಾಣಿಸಿಕೊಂಡು ಕ್ರೇಜ಼್ ಹುಟ್ಟಿಸಿದ್ದಾರೆ.

ಇದರ ನಡುವೆ ಹೊಸ ಚಿತ್ರವೊಂದಕ್ಕೆ ಸಹಿ ಮಾಡಿ ನಟ ರಾಜ ವರ್ಧನ್ ಶೂಟಿಂಗ್ ನಲ್ಲಿ ಭಾಗವಹಿಸಲು ಕೂಡ ಸಿದ್ದರಾಗುತ್ತಿದ್ದಾರೆ. ಯೋಗರಾಜ್ ಭಟ್ ಮತ್ತು ಸೂರಿ ನಿರ್ದೇಶನದ ಗರಡಿಯಲ್ಲಿ ಪಳಗಿರೋ ಸುನೀಲ್ ಕುಮಾರ್ ಇದೇ ಮೊದಲ ಬಾರಿಗೆ ಡೈರೆಕ್ಟರ್ ಕ್ಯಾಪ್ ತೊಡುತ್ತಿದ್ದಾರೆ. ತಮ್ಮ ಈ ಹೊಸ ಸಿನಿಮಾಗೆ ನಾಯಕ ನಟರಾಗಿ ರಾಜವರ್ಧನ್ ಅವರನ್ನ ಆಯ್ಕೆ ಮಾಡಿಕೊಂಡಿದ್ದಾರೆ. ಚಿತ್ರಕ್ಕೆ ಗಜರಾಮ ಎಂಬ ಟೈಟಲ್ ಇಟ್ಟಿದ್ದಾರೆ. ಈ ಸಿನಿಮಾದ ಫಸ್ಟ್ ಲುಕ್ ಅನ್ನ ಇದೀಗ ಚಿತ್ರತಂಡ ರಿವೀಲ್ ಆಗಿದೆ. ಪೋಸ್ಟರ್ ನಲ್ಲಿ ರಾಜವರ್ಧನ್ ಡಿಫ್ರೆಂಟ್ ಲುಕ್ ನಲ್ಲಿ ಕಾಣಿಸಿಕೊಂಡಿದ್ದಾರೆ. ಗಜರಾಮ ಸಿನಿಮಾಗೆ ಲೈಫ್ ಲೈನ್ ಫಿಲಂ ಪ್ರೊಡಕ್ಷನ್ ಬ್ಯಾನರಡಿಯಲ್ಲಿ ನರಸಿಂಹ ಮೂರ್ತಿ, ಮಲ್ಲಿಕಾರ್ಜುನ್ ಕಾಶಿ ಮತ್ತು ಝವೀಯರ್ ಪರ್ನಾಂಡಿಸ್ ಜಂಟಿಯಾಗಿ ನಿರ್ಮಾಣ ಮಾಡುತ್ತಿದ್ದಾರೆ.

Leave a Reply

%d bloggers like this: