ಗಾಳಿಪಟ2 ಗೆದ್ದಿದ್ದೆ ತಡ, ಈಗ ಕನ್ನಡದ ಬೇರೆ ಮೂವರು ಸ್ಟಾರ್ ನಟರಿಗೆ ಚಿತ್ರ ಮಾಡುತ್ತಿದ್ದಾರೆ ಗಾಳಿಪಟ2 ಚಿತ್ರದ ನಿರ್ಮಾಪಕರು

ಗೋಲ್ಡನ್ ಸ್ಟಾರ್ ಗಣೇಶ್ ಮತ್ತು ಯೋಗರಾಜ್ ಭಟ್ ಕಾಂಬಿನೇಶನ್ ನಲ್ಲಿ ಮೂಡಿ ಬಂದ ಗಾಳಿಪಟ2 ಸಿನಿಮಾ ನಿರೀಕ್ಷೆಯಂತೆ ಸೂಪರ್ ಹಿಟ್ ಆಗಿದೆ. ಈ ಚಿತ್ರ ಥಿಯೇಟರ್ ನಲ್ಲಿ ಒಳ್ಳೆಯ ಕಲೆಕ್ಷನ್ ಮಾಡೋದರ ಜೊತೆಗೆ ಸ್ಯಾಟಲೈಟ್, ಡಿಜಿಟಲ್ ಮತ್ತು ಆಡಿಯೋ ರೈಟ್ಸ್ ಅಂತ ಉತ್ತಮವಾಗಿ ಹಣಕಾಸು ವಹಿವಾಟು ನಡೆಸಿತ್ತು. ಇದರಿಂದಾಗಿ ನಿರ್ಮಾಪಕ ರಮೇಶ್ ರೆಡ್ಡಿ ಕೂಡ ಸಂತಸವಾಗಿದ್ದರು. ಗಾಳಿಪಟ2 ಸಿನಿಮಾ ಮಾಡಿ ಯಶಸ್ಸು ಕಂಡಿರೋ ನಿರ್ಮಾಪಕ ರಮೇಶ್ ರೆಡ್ಡಿ ಅವರು ಇದೀಗ ಹೊಸ ಸಾಹಸಕ್ಕೆ ಕೈ ಹಾಕಿದ್ದಾರೆ. ಅದೇನಪ್ಪಾ ಅಂದರೆ ಗಾಂಧಿನಗರದಲ್ಲಿ ಒಂದು ಮಾತು ಇದೆ. ಒಂದು ಸಿನಿಮಾ ಗೆದ್ದರೆ ಆ ಸಿನಿಮಾದ ನಿರ್ಮಾಪಕ ಇನ್ನೊಂದಷ್ಟು ಸಿನಿಮಾ ಮಾಡ್ತಾನೆ. ಅದೇ ಒಂದು ಚಿತ್ರ ಸೋತ್ರೆ ಆ ಚಿತ್ರದ ನಿರ್ಮಾಪಕ ಅದರಲ್ಲೇ ವಾಪಸ್ ಹೋಗ್ತಾನೆ. ಅದ್ರಂತೆ ಇದೀಗ ಗಾಳಿಪಟ2 ಸಿನಿಮಾ ಮಾಡಿ ಗೆದ್ದಿರೋ ರಮೇಶ್ ರೆಡ್ಡಿ ಅವರು ಈಗ ಸ್ಯಾಂಡಲ್ ವುಡ್ ಮೂವರು ಸ್ಟಾರ್ ನಟರೊಟ್ಟಿಗೆ ಬಿಗ್ ಬಜೆಟ್ ನಲ್ಲಿ ಸಿನಿಮಾ ಮಾಡಲು ಮುಂದಾಗಿದ್ದಾರೆ.

ಹೌದು ಗಾಳಿಪಟ2 ನಂತರ ಈಗ ಯೋಗರಾಜ್ ಭಟ್ ಅವರ ಜೊತೆ ಮತ್ತೊಂದು ಸಿನಿಮಾ ಮಾಡುತ್ತಿದ್ದಾರೆ ರಮೇಶ್ ರೆಡ್ಡಿ. ಯೋಗರಾಜ್ ಭಟ್ ಮತ್ತು ರಮೇಶ್ ರೆಡ್ಡಿ ಅವರ ಕಾಂಬಿನೇಶನ್ ನಲ್ಲಿ ಮೂಡಿ ಬರೋ ಚಿತ್ರಕ್ಕೆ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರು ನಾಯಕ ಅನ್ನೋದು ವಿಶೇಷ. ತದ ನಂತರ ನಿಖಿಲ್ ಕುಮಾರಸ್ವಾಮಿ ಜೊತೆ ಒಂದು ಚಿತ್ರ ಜೊತೆಗೆ ರೋರಿಂಗ್ ಸ್ಟಾರ್ ಶ್ರೀಮುರುಳಿ ಅವರೊಟ್ಟಿಗೆ ಕೂಡ ಒಂದು ಸಿನಿಮಾ ಮಾಡುವುದಕ್ಕೆ ನಿರ್ಮಾಪಕ ರಮೇಶ್ ರೆಡ್ಡಿ ಅವರು ಸಕಲ ತಯಾರಿ ನಡೆಸುತ್ತಿದ್ದಾರೆ. ಒಟ್ಟಾರೆಯಾಗಿ ಗೋಲ್ಡನ್ ಸ್ಟಾರ್ ಗಣೇಶ್ ಮತ್ತು ಯೋಗರಾಜ್ ಭಟ್ ಕಾಂಬಿನೇಶನ್ ನಲ್ಲಿ ಮೂಡಿಬಂದ ಗಾಳಿಪಟ2 ಸಿನಿಮಾ ನಿರ್ಮಾಪಕ ರಮೇಶ್ ರೆಡ್ಡಿ ಅವರಿಗೆ ಮತ್ತೊಂದಷ್ಟು ಸಿನಿಮಾ ಮಾಡಲು ಉತ್ಸಾಹ ಹುರುಪು ನೀಡಿದೆ ಎಂದು ಹೇಳ್ಬೋದು. ಬಿಗ್ ಸ್ಟಾರ್ ನಟರ ಸಿನಿಮಾ ಮಾಡುವ ಮೂಲಕ ರಮೇಶ್ ರೆಡ್ಡಿ ಅವರು ಕೂಡ ಕನ್ನಡ ಚಿತ್ರರಂಗಕ್ಕೆ ಬಿಗ್ ಪ್ರೊಡ್ಯೂಸರ್ ಆಗಿ ಹೊರ ಹೊಮ್ಮುತ್ತಿರೋದು ನಿಜಕ್ಕೂ ಕೂಡ ಖುಷಿ ತಂದಿದೆ.