ಪುಟ್ಬಾಲ್ ಪಂದ್ಯ ಗೆದ್ದಿದ್ದಕ್ಕೆ ತಂಡದ ಪ್ರತಿಯೊಬ್ಬ ಆಟಗಾರನಿಗೂ 10 ಕೋಟಿ ಬೆಲೆಯ ಐಷಾರಾಮಿ ಕಾರು ಉಡುಗೊರೆ

ತನ್ನ ದೇಶದ ಆಟಗಾರರು ಗೆಲುವು ಸಾಧಿಸಿದಕ್ಕೆ ಆ ದೇಶದ ರಾಜ ತನ್ನ ದೇಶದಲ್ಲಿ ಮೂರು ದಿನ ರಜೆ ಘೋಷಣೆ ಮಾಡಿ ಪ್ರತಿಯೊಬ್ಬ ಆಟಗಾರರಿಗೆ ದುಬಾರಿ ಬೆಲೆಯ ಐಷಾರಾಮಿ ಕಾರುಗಳನ್ನ ನೀಡುವ ಮೂಲಕ ಬಂಪರ್ ಕೊಡುಗೆ ನೀಡಿದ್ದಾರೆ. ಹೌದು ಈ ಒಂದು ಸುದ್ದಿ ಇದೀಗ ಪ್ರಪಂಚದಾದ್ಯಂತ ಭಾರಿ ವೈರಲ್ ಆಗಿದೆ. ಹಾಗಾದ್ರೇ ಯಾವ ಕ್ರೀಡೆಯಲ್ಲಿ ಜಯಗಳಿಸಿ ಇಷ್ಟೊಂದು ಸಂಭ್ರಮಾಚರಣೆ ಮಾಡುತ್ತಿರುವ ಆ ದೇಶ ಯಾವುದು ಆ ದೇಶದ ರಾಜ ಯಾರು ಅನ್ನೋದನ್ನ ತಿಳಿಯೋಣ. ಇಂದು ಕ್ರೀಡೆ ಅನ್ನೋದು ದೇಶ ದೇಶಗಳ ನಡುವೆ ಭ್ರಾತೃತ್ವ ಸಹಕಾರ ಸಂಬಂಧ ಏರ್ಪಡಲು ಬಹಳ ಉಪಕಾರಿಯಾಗಿದೆ. ಹಾಗಾಗಿಯೇ ವಿವಿಧ ಕ್ರೀಡೆಗಳಿಗೆ ಎಲ್ಲಾ ದೇಶಗಳಿಂದ ಉತ್ತಮ ಸಹಕಾರ ಪ್ರೋತ್ಸಾಹ ಸಿಗುತ್ತಿದೆ.

ಅದರಂತೆ ಇತ್ತೀಚೆಗೆ ಕತಾರ್ ನಲ್ಲಿ ನಡೆದ ಫೀಫಾ ಫೆಡರೇಶನ್ ಇಂಟರ್ ನ್ಯಾಶನಲ್ ಫುಟ್ಬಾಲ್ ಅಸೋಸಿಯೇಶನ್ ಪಂದ್ಯಾವಳಿಯಲ್ಲಿ ಜಗತ್ತಿನ ಅನೇಕ ದೇಶಗಳು ಭಾಗವಹಿಸಿವೆ. ಈ ಫಿಫಾ ವರ್ಲ್ಡ್ ಕಪ್ ನಲ್ಲಿ ಸೌದಿ ಅರೇಬಿಯಾ ದೇಶ ಅರ್ಜೆಂಟೈನಾ ದೇಶದ ನಡುವೆ ನಡೆದ ಪಂದ್ಯದಲ್ಲಿ ಸೌದಿ ಅರೇಬಿಯಾ ತಂಡ 2-1 ಅಂತರಗಳಿಂದ ಭರ್ಜರಿ ಜಯ ಸಾಧಿಸಿದೆ. ಯಾವಾಗ ಸೌದಿ ಅರೆಬಿಯಾ ದೇಶ ಫಿಫಾ ಪುಟ್ಬಾಲ್ ವರ್ಲ್ಢ್ ಕಪ್ ನಲ್ಲಿ ಗೆಲುವು ಸಾಧಿಸಿತೋ ಆಗ ಆ ದೇಶದ ರಾಜಕುಮಾರ ಮಹಮ್ಮದ್ ಬಿನ್ ಸಲ್ಮಾನ್ ಅವರು ತುಂಬಾ ಸಂತೋಷಗೊಂಡು ಈ ಜಯ ನಮ್ಮ ದೇಶದ ಪ್ರತಿಯೊಬ್ಬ ನಾಗರೀಕರು ಕೂಡಾ ಸಂಭ್ರಮಿಸುವ ವಿಚಾರ ಹಾಗಾಗಿ ಈ ಸಂಭ್ರಮಾಚರಣೆ ಮಾಡಲು ಮೂರು ದಿನಗಳ ಕಾಲ ಎಲ್ಲಾರಿಗೂ ರಜೆ ಘೋಷಿಸಿ ಆದೇಶ ಹೊರಡಿಸಿದ್ದರು. ಅಷ್ಟೇ ಅಲ್ಲದೆ ಈ ಫಿಫಾ ಪುಟ್ಬಾಲ್ ವರ್ಲ್ಡ್ ಕಪ್ ನಲ್ಲಿ ತಮ್ಮ ಸೌದಿ ಅರೇಬಿಯಾ ದೇಶ ವಿಜಯ ಸಾಧಿಸಲು ಶ್ರಮಿಸಿದ.

ತಮ್ಮ ದೇಶದ ತಂಡದ ಪ್ರತಿಯೊಬ್ಬ ಆಟಗಾರರಿಗೂ ಸಹ ಸರಿ ಸುಮಾರು ಬರೋಬ್ಬರಿ ಐವತ್ತು ಸಾವಿರ ಪೌಂಡ್ ಬೆಲೆ ಬಾಳುವ ಐಷಾರಾಮಿ ರೋಲ್ಸ್ ರಾಯ್ ಕಾರನ್ನ ವಿಶೇಷ ಉಡುಗೊರೆಯಾಗಿ ನೀಡಿದ್ದಾರೆ. ತಮ್ಮ ದೇಶದ ರಾಜಕುಮಾರ ಈ ಒಂದು ಉಡುಗೊರೆ ನೀಡ್ತಿರೋ ಕಾರಣ ಸೌದಿ ಅರೇಬಿಯಾ ದೇಶದ ಫುಟ್ಬಾಲ್ ಆಟಗಾರರು ಸಖತ್ ಖುಷಿಯಾಗಿದ್ದಾರೆ. ರಾಜಕುಮಾರ ಮಹಮ್ಮದ್ ಬಿನ್ ಸಲ್ಮಾನ್ ಘೋಷಣೆ ಮಾಡಿರುವ ಈ ಕಾರು ಆಟಗಾರರು ಈ ವರ್ಲ್ಡ್ ಕಪ್ ಮುಗಿಸಿ ವಾಪಸ್ ತಮ್ಮ ಮನೆಗೆ ಮರಳಿದ ನಂತರ ಅವರ ಕೈ ಸೇರಲಿದೆಯಂತೆ. ಒಟ್ಟಾರೆಯಾಗಿ ತನ್ನ ದೇಶದ ಫುಟ್ಬಾಲ ಆಟಗಾರರು ದೇಶಕ್ಕೆ ಕೀರ್ತಿ ಗೌರವ ತಂದ ಕಾರಣ ರಾಜಕುಮಾರ ಕ್ರೀಡಾಪಟುಗಳಿಗೆ ಈ ರೀತಿಯಾಗಿ ಪ್ರೋತ್ಸಾಹ ನೀಡ್ತಿರೋದು ನಿಜಕ್ಕೂ ಕೂಡ ಮೆಚ್ಚುವಂತದ್ದು ಎಂದು ಹೇಳಬಹುದು. ಇದೀಗ ಈ ಸುದ್ದಿಯನ್ನು ಕೆಲವು ಮಾಧ್ಯಮಗಳು ಅಲ್ಲಗಳೆಯುತ್ತಿದ್ದು ಅಧಿಕೃತವಾಗಿ ಸುದ್ದಿ ಹೊರಬೀಳೋವರೆಗೂ ಕಾಯಬೇಕಾಗಿದೆ.

Leave a Reply

%d bloggers like this: