ಫಸ್ಟ್ ನೈಟ್ ದಿನ ಹಾಲು ಯಾಕೆ ಕೊಡುತ್ತಾರೆ ಗೊತ್ತಾ? ಇಂದಿಗೂ 99% ಜನರಿಗೆ ಗೊತ್ತೇ ಇಲ್ಲ.. ನೋಡಿ ಒಮ್ಮೆ

ಮೊದಲ ರಾತ್ರಿಯಲ್ಲಿ ಗಂಡನಿಗೆ ಹೆಂಡತಿ ಹಾಲು ಕೊಡುವುದು ಏಕೆ ಗೊತ್ತಾ…! ನೂರಾರು ಕನಸುಗಳನ್ನು ಹೊತ್ತು ಸಪ್ತಪದಿ ತುಳಿದು ವೈವಾಳಿಕ ಜೀವನಕ್ಕೆ ಹೆಜ್ಜೆ ಇಟ್ಟ ನವ ದಂಪತಿಗಳ ದಾಂಪತ್ಯ ಜೀವನದ ಮೊದಲ ಹೆಜ್ಜೆಯಾಗಿ ಶಾಸ್ತ್ರೋಕ್ತವಾಗಿ ಪ್ರಸ್ಥ ಕಾರ್ಯಕ್ರಮ ಏರ್ಪಡಿಸಲಾಗಿರುತ್ತದೆ. ಈ ಶುಭ ರಾತ್ರಿಯಲ್ಲಿ ಪ್ರತಿಯೊಂದು ದಂಪತಿಗಳು ಭಯ ಆತಂಕ ದುಗುಡ ದುಮ್ಮಾನಗಳು ಇದ್ದೇ ಇರುತ್ತವೆ. ನೂತನ ವಧುವಿಗೆ ಆಕೆಯ ತಾಯಿ ಅಥವಾ ಆಕೆಯ ಸ್ನೇಹಿತರು ಒಂದಷ್ಟು ಗುಟ್ಟಿನ ವಿಚಾರ ಹೇಳಿ ಕೋಣೆಗೆ ಕಳುಹಿಸಿಕೊಡುತ್ತಾರೆ. ಅದರಂತೆ ವರ ಕೂಡ ತನ್ನ ಸಂಗಾತಿಯ ಬರುವಿಕೆಗಾಗಿ ಕಾಯುತ್ತಿರುತ್ತಾನೆ. ಸತಿ-ಪತಿಗಳ ಮಿಲನದ ಮೊದಲ ರಾತ್ರಿಯಲ್ಲಿ ಪರಸ್ಪರ ಒಂದಷ್ಟು ವಿಚಾರ ವಿಷಯಗಳನ್ನು ವಿನಿಮಯ ಮಾಡಿಕೊಳ್ಳುತ್ತಾರೆ. ಅದರಂತೆ ದಂಪತಿಗಳಿಬ್ಬರು ತಮ್ಮ ಸಾಂಸಾರಿಕ ಜೀವನದ ಆರಂಭದ ಮುನ್ನುಡಿಯಾಗಿ ಅಮೃತ ಸಮವಾದ ಹಾಲನ್ನ ಹೆಂಡತಿ ತನ್ನ ಗಂಡನಿಗೆ ಸಹಜ ಎಂಬಂತೆ ನಾಚಿಕೆಯ ಸ್ವಭಾವದಿಂದ ತಲೆ ಬಗ್ಗಿಸಿ ಹಾಲನ್ನ ನೀಡುತ್ತಾಳೆ.

ಈ ಸಂಪ್ರದಾಯ ದಶಕ- ದಶಕಗಳಿಂದ ನಡೆದುಕೊಂಡು ಬಂದಿದೆ. ನಮ್ಮ ಹಿರಿಯರು ಏನೇ, ಯಾವುದೇ ರೀತಿಯ ಶಾಸ್ತ್ರ ಸಂಪ್ರದಾಯ ಆಚರಣೆಗಳನ್ನು ಮಾಡಿರುವ ಉದ್ದೇಶದಲ್ಲಿ ವೈಜ್ಞಾನಿಕ ಕಾರಣಗಳು ಇದ್ದೇ ಇರುತ್ತವೆ. ಅಂತೆಯೇ ಮದುವೆಯಾದ ವರನಿಗೆ ಮೊದಲ ರಾತ್ರಿಯಲ್ಲಿ ವಧು ಹಾಲನ್ನು ನೀಡುವ ಸಂಪ್ರದಾಯದಲ್ಲಿ ಪ್ರಮುಖವಾದ ಕಾರಣವಿದೆ. ಈ ಸಂಪ್ರದಾಯ ಆರಂಭವಾದ ಮೊದಲಲ್ಲಿ ಹಾಲು ನೀಡುವ ಬದಲು ಹಲ್ವಾವನ್ನು ನೀಡುತ್ತಿದ್ದರಂತೆ. ಅದರಲ್ಲಿಯೂ ಈ ಮಡುಗುಲ ಹಲ್ವಾ ವನ್ನೇ ಹೆಚ್ಚಾಗಿ ನೀಡುತ್ತಿದ್ದರಂತೆ. ಏಕೆಂದರೆ ಈ ಮಡುಗುಲ ಹಲ್ವಾದಲ್ಲಿ ಲೈಂಗಿಕ ಶಕ್ತಿ ಹೆಚ್ಚು ಮಾಡುವಂತಹ ಔಷಧಿಯಂಶ ಹೆಚ್ಚಾಗಿರುತ್ತದೆಯಂತೆ. ಹೌದು ಈ ಮಡುಗುಲ ಹಲ್ವಾ ತಯಾರಿಕೆಯಲ್ಲಿ ಬಾದಾಮಿ, ಗೋಡಂಬಿ, ಗೋಧಿ ಹಾಲನ್ನ ಬಳಸುತ್ತಿದ್ದರಂತೆ.

ಹಾಗಾಗಿಯೇ ಈ ಹಲ್ವಾ ತುಂಬಾ ರುಚಿಕರ ಮತ್ತು ಲೈಂಗಿಕ ಶಕ್ತಿ ವೃದ್ದಿ ಆಗಲು ಸಹಕಾರಿಯಾಗುತ್ತಿತ್ತಂತೆ. ಆದರೆ ಕ್ರಮೇಣ ಕಾಲಕ್ಕೆ ತಕ್ಕಂತೆ ಈ ಮಡುಗುಲ ಹಲ್ವಾದ ಬೇಡಿಕೆ ಕಡಿಮೆಯಾಗಿ ಇದರ ತಯಾರಿಕೆ ಕೂಡ ನಿಲ್ಲುತ್ತದೆ. ಬಳಿಕ ಈ ಹಲ್ವಾದ ಪೂರೈಕೆ ಕಡಿಮೆಯಾಗಿ ಪೌಷ್ಟಿಕಾಂಶದ ಆಗರವಾಗಿರುವ ಗೋವಿನ ಹಾಲಿನತ್ತ ಮುಖ ಮಾಡುತ್ತಾರಂತೆ. ಅಂದಿನಿಂದ ಮೊದಲ ರಾತ್ರಿಯಲ್ಲಿ ವರನಿಗೆ ಹಾಲು ನೀಡುವ ಪದ್ದತಿಯನ್ನು ಅಳವಡಿಸಿಕೊಳ್ಳಲಾಯಿತು ಎಂದು ತಿಳಿಸುತ್ತಾರೆ.