ಎವರ್ಗೀನ್ ಚೆಲುವೆ ರಮ್ಯಾ ಅವರ ಸ್ಥಾನವನ್ನು ತುಂಬುವ ಏಕೈಕ ನಟಿ ಇವರೇ.. ನೋಡಿ ಒಮ್ಮೆ

ಚಂದನವನದ ಮೋಹಕ ತಾರೆ ಎವರ್ಗೀನ್ ಚೆಲುವೆ ರಮ್ಯಾ ಅವರ ಸ್ಥಾನವನ್ನು ಕನ್ನಡದಲ್ಲಿ ಇನ್ಮುಂದೆ ಈ ನಟಿಯಿಂದ ಮಾತ್ರ ತುಂಬಲು ಸಾಧ್ಯ ಎನ್ನುತ್ತಿವೆ ವರದಿ ಸಮೀಕ್ಷೆಗಳು. ಕನ್ನಡ ಚಿತ್ರರಂಗದಲ್ಲಿ ರ ಅಕ್ಷರದಿಂದ ಆರಂಭವಾಗುವ ಹೆಸರಿನ ಎಲ್ಲಾ ನಟಿಮಣಿಯರು ಕನ್ನಡ ಚಿತ್ರರಂಗವನ್ನು ಆಳಿದ್ದಾರೆ.ದಶಕಗಳ ಕಾಲ ಕನ್ನಡ ಚಿತ್ರರಂಗವನ್ನು ಆಳಿದ ನಟಿಯರ ಪೈಕಿ ಮೊದಲ ಪಂಕ್ತಿಯಲ್ಲಿ ನಿಲ್ಲುವುದು ರಮ್ಯಾ, ರಕ್ಷಿತಾ, ರಾಧಿಕಾ ಈ ಮೂವರು ನಟಿಯರು ಸ್ಯಾಂಡಲ್ ವುಡ್ ನಲ್ಲಿ ಯಾವ ಸ್ಟಾರ್ ನಟನಿಗೂ ಕಡಿಮೆ ಇಲ್ಲದಂತೆ ಮಿಂಚಿದ್ದಾರೆ. ಇವರ ಜಮಾನದ ನಂತರ ಬಂದಂತಹ ಅನೇಕ ನಟಿಯರು ಒಂದೆರಡು ವರ್ಷಗಳ ಕಾಲ ಮಿಂಚಿದರು ಸಹ ಕನ್ನಡ ಚಿತ್ರರಂಗದಲ್ಲಿ ನೆಲೆಕಂಡಕೊಳ್ಳಲು ಸಾಧ್ಯವಾಗಲಿಲ್ಲ.

ಸದ್ಯಕ್ಕೆ ತಕ್ಕ ಮಟ್ಟಿಗೆ ಒಂದಷ್ಟು ವರ್ಷಗಳ ಕಾಲ ಕನ್ನಡ ಚಿತ್ರರಂಗದಲ್ಲಿ ಸಾಲು ಸಾಲು ಸಿನಿಮಾಗಳಲ್ಲಿ ನಟಿಸಿ ಯಶಸ್ವಿ ನಟಿಯಾಗಿ ಕನ್ನಡ ಸಿನಿ ಪ್ರೇಕ್ಷಕರ ಮನದಲ್ಲಿ ಸ್ಥಾನ ಪಡೆದಾರುವ ನಟಿಯರು ಅಂದರೆ ರಾಧಿಕಾ ಪಂಡಿತ್, ಭಾವನಾ ಮೆನನ್, ಆಶಿಕಾ ರಂಗನಾಥ್, ಅಧಿತಿ ಪ್ರಭುದೇವ, ಡಿಂಪಲ್ ಕ್ವೀನ್ ರಚಿತಾ ರಾಮ್ ಮತ್ತು ನ್ಯಾಶನಲ್ ಕ್ರಶ್ ರಶ್ಮಿಕಾ ಮಂದಣ್ಣ. ಸದ್ಯಕ್ಕೆ ಸ್ಯಾಂಡಲ್ ವುಡ್ ನಲ್ಲಿ ಬಹು ಬೇಡಿಕೆಯ ಜನಪ್ರಿಯ ನಟಿ ಅಂದರೆ ಅದು ಡಿಂಪಲ್ ಕ್ವೀನ್ ರಚಿತಾ ರಾಮ್. ಕನ್ನಡ ಚಿತ್ರರಂಗಕ್ಕೆ ಎಷ್ಟೇ ನಟಿಯರು ಬಂದರು ಕೂಡ ಬ್ಯೂಟಿ ಕ್ವೀನ್ ರಮ್ಯಾ ಅವರ ಸ್ಥಾನವನ್ನು ತುಂಬಲು ಮಾತ್ರ ಯಾರಿಂದಾನೂ ಸಾಧ್ಯವಿಲ್ಲ ಎಂಬುದು ರಮ್ಯಾ ಅವರ ಅಪ್ಪಟ ಅಭಿಮಾನಿಗಳ ಅನಿಸಿಕೆ ಅಭಿಪ್ರಾಯ.

ನಟಿ ರಮ್ಯಾ ಅವರಿಗೆ ಕನ್ನಡ ಚಿತ್ರ ರಂಗದಲ್ಲಿ ಕ್ವೀನ್,ಜೂಲಿ,ಮೋಹಕತಾರೆ,ಬ್ಯುಟಿಕ್ವೀನ್ ಹೀಗೆ ಸಾಲು ಸಾಲು ಬಿರುದುಗಳಿವೆ. ರಾಜಕೀಯ ಕ್ಷೇತ್ರದತ್ತ ಗಮನ ಹರಿಸಿದ ರಮ್ಯಾ ಬಣ್ಣದ ಲೋಕ ತೊರೆದರು. ಕಾಂಗ್ರೆಸ್ ಪಕ್ಷದಿಂದ ಟಿಕೆಟ್ ಪಡೆದು ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಸ್ಪರ್ಧಿಸಿ ಗೆದ್ದು ಸಂಸದೆಯಾಗಿ ಆಯ್ಕೆ ಆದರು. ಆದರೆ ತದ ನಂತರ ನಡೆದ ಚುನಾವಣೆಯಲ್ಲಿ ಸೋಲು ಅನುಭವಿಸಿದರು. ಇದಾದ ಬಳಿಕ ಕಾಂಗ್ರೆಸ್ ಪಕ್ಷದ ಸಾಮಾಜಿಕ ಜಾಲತಾಣ ವಿಭಾಗದ ಮುಖ್ಯಸ್ಥರಾಗಿ ಕಳೆದ ಲೋಕಸಭಾ ಚುನಾವಣೆಯಲ್ಲಿ ಸಕ್ರೀಯವಾಗಿ ಕೆಲಸ ಮಾಡುತ್ತಿದ್ದರು.ಆದರೆ ಕೆಲವು ವಿವಾದಾತ್ಮಕ ಪೋಸ್ಟ್ ಗಳನ್ನ ಮಾಡಿ ಸಾಮಾಜಿಕ ಜಾಲತಾಣದ ಮುಖ್ಯಸ್ಥೆ ರಮ್ಯಾ ಅವರನ್ನ ಆ ಸ್ಥಾನದಿಂದ ಕಾಂಗ್ರೆಸ್ ಹೈ ಕಮಾಂಡ್ ಕೆಳಗಿಳಿಸಿತು.

ಇದಾದ ಬಳಿ ಸಾರ್ವಜನಿಕವಾಗಿ ಮತ್ತು ಸೋಷಿಯಲ್ ಮೀಡಿಯಾದಲ್ಲಿ ಎಲ್ಲಿಯೂ ಸಹ ಕಾಣಿಸಿಕೊಂಡಿರಲಿಲ್ಲ ರಮ್ಯಾ. ಇದಾದ ವರ್ಷಗಳ ಬಳಿಕ ಸೋಶಿಯಲ್ ಮೀಡಿಯಾದಲ್ಲಿ ಮತ್ತೆ ಸಕ್ರೀಯವಾಗಿ ತೊಡಗಿಕೊಂಡಿದ್ದು, ಕನ್ನಡ ಸಿನಿಮಾಗಳನ್ನು ಪ್ರಮೋಶನ್ ಮಾಡುತ್ತಿದ್ದಾರೆ.ಈ ಮೂಲಕ ಸ್ಯಾಂಡಲ್ ವುಡ್ ಗೆ ಮತ್ತೇ ರಮ್ಯಾ ರೀ ಎಂಟ್ರಿ ಕೊಡಲಿದ್ದಾರೆ ಎಂಬ ಸೂಚನೆಯನ್ನ ನೀಡಿದ್ದಾರೆ ಎನ್ನಲಾಗುತ್ತಿದೆ. ಆದರೆ ಈ ಬಗ್ಗೆ ರಮ್ಯಾ ಎಲ್ಲಿಯೂ ಕೂಡ ಸ್ಪಷ್ಟನೆ ನೀಡಿಲ್ಲ‌. ಅವರ ಅಪಾರ ಅಭಿಮಾನಿ ವಲಯ ಮಾತ್ರ ಮತ್ತೇ ನೀವು ಚಂದನವನಕ್ಕೆ ಬನ್ನಿ ಎಂದು ಮನವಿ ಮಾಡುತ್ತಿದ್ದಾರೆ. ನಿಮ್ಮ ಸ್ಥಾನ ತುಂಬಲು ಯಾರಿಂದಲೂ ಸಾಧ್ಯವಿಲ್ಲ ಎಂದು ಹೇಳುತ್ತಿದ್ದಾರೆ.

ಆದರೆ ಸಿನಿ ಪಂಡಿತರು ಮಾತ್ರ ಸ್ಯಾಂಡಲ್ ವುಡ್ ನಲ್ಲಿ ರಮ್ಯಾ ಅವರ ಸ್ಥಾನವನ್ನು ನ್ಯಾಶನಲ್ ಕ್ರಶ್ ರಶ್ಮಿಕಾ ಮಂದಣ್ಣ ತುಂಬಲಿದ್ದಾರೆ ಎಂದು ಹೇಳುತ್ತಿದ್ದಾರೆ. ಕನ್ನಡ ಮಾತ್ರವಲ್ಲದೆ ತೆಲುಗು,ತಮಿಳು,ಹಿಂದಿ ಸಿನಿಮಾಗಳಲ್ಲಿ ಯಶಸ್ವಿ ನಟಿಯಾಗಿ ಮಿಂಚುತ್ತಿರುವ ರಶ್ಮಿಕಾ ಮಂದಣ್ಣ ಇಷ್ಟು ಚಿಕ್ಕ ವಯಸ್ಸಿಗೆ ಭಾರತೀಯ ಚಿತ್ರರಂಗದಲ್ಲಿ ಅಪಾರ ಜನಪ್ರಿಯತೆ ಗಳಿಸಿದ್ದಾರೆ. ಹೀಗಾಗಿ ಕನ್ನಡ ಚಿತ್ರರಂಗದಲ್ಲಿ ನಟಿ ರಶ್ಮಿಕಾ ಮಂದಣ್ಣ ಕೆಲವೇ ವರ್ಷಗಳಲ್ಲಿ ಉತ್ತುಂಗ ಸ್ಥಾನ ತಲುಪಲಿದ್ದಾರೆ ಎಂದು ತಿಳಿಸಿದ್ದಾರೆ.

Leave a Reply

%d bloggers like this: