ಎರಡು ಅಥವಾ ಹೆಚ್ಚು ಬಾರಿ ಮದುವೆಯಾದ ಕನ್ನಡದ ದೊಡ್ಡ ನಟಿಯರು ಇವರೇ ನೋಡಿ

ಮದುವೆ ಜೀವನದಲ್ಲಿ ಸುಂದರ ಅನುಬಂಧ ಏರ್ಪಡಿಸುವ ಘಟನೆ.ಮದುವೆಗೆ ಎರಡು ಮನಸ್ಸುಗಳು ಮುಖ್ಯ ವಯಸ್ಸಲ್ಲ ಅನ್ನೋದು ಸತ್ಯ.ಇಲ್ಲಿ ನಮ್ಮ ನಟಿಯರ ವೈವಾಹಿಕ ಜೀವನವನ್ನು ನೋಡೋಣ.ಕಾರಣಾಂತರಗಳಿಂದ ಅವರ ಜೀವನದಲ್ಲಿ ಅವರು ಎರಡು ಅಥವಾ ಹೆಚ್ಚು ಬಾರಿ‌ ಮದುವೆ ಆಗುವ ಸಂದರ್ಭ ಬಂದಿರಬಹುದು. ಅದು ಅವರ ವೈಯಕ್ತಿಕ ಹಿತಾಸಕ್ತಿಗಾಗಿ ಅವರು ಮಾಡಿಕೊಂಡ ಆಯ್ಕೆ.ಅದನ್ನು ನಾವು ಬೆಟ್ಟು ಮಾಡಿ ತೋರಿಸುತ್ತಿಲ್ಲ.ಇರುವ ವಿಷಯ ಹಂಚಿಕೊಳ್ಳುವ ಉದ್ದೇಶವಷ್ಟೇ.

ಶೃತಿ ಕನ್ನಡ ಚಿತ್ರರಂಗದ ಹೆಸರಾಂತ ಹಾಗೂ ಪ್ರಭಾವಿ ನಟಿ.ಅವರ ವೃತ್ತಿ ಜೀವನದಲ್ಲಿ ಅವರಿಗೆ ಮಹತ್ತರ ಯಶಸ್ಸು ಕೊಟ್ಟ ಎಸ್.ಮಹೇಂದರ್ ಅವರನ್ನ ವಿವಾಹವಾಗಿ ಅನ್ಯೋನ್ಯ ಜೀವನ ನಡೆಸಿ ಇಬ್ಬರೂ ಒಟ್ಟಿಗೆ ‘ಗಟ್ಟಿಮೇಳ’ ಅನ್ನುವ ಸಿನಿಮಾದಲ್ಲಿ ಆದರ್ಶ ದಂಪತಿಗಳಾಗಿ ಅಭಿನಯ ಕೂಡ ಮಾಡಿದ್ದರು.ಅದು ಅಭಿನಯ ಅನ್ನಿಸದೇ ನೈಜವಾಗಿ ಮೂಡಿಬಂದಿತ್ತು.ಆ ಅನ್ಯೋನ್ಯ ಜೋಡಿ ಹನ್ನೊಂದು ವರ್ಷ ಜೀವನ ನಡೆಸಿ 2009ರಲ್ಲಿ ಬೇರೆಯಾಯಿತು.ನಂತರ 2013ರಲ್ಲಿ ಪತ್ರಕರ್ತ ಚಕ್ರವರ್ತಿ ಚಂದ್ರಚೂಡ ಅನ್ನುವವರನ್ನು ಸರಳವಾಗಿ ಮದುವೆಯಾದರು ಕೊಲ್ಲೂರಿನಲ್ಲಿ‌.ಅದಾದ ಕೆಲವೇ ತಿಂಗಳುಗಳಲ್ಲಿ ಹೊಂದಾಣಿಕೆ ಕಾಣದೇ ವಿಚ್ಛೇದನ ಮಾಡಿಕೊಂಡರು.

ಸುಧಾರಾಣಿ ಕನ್ನಡ ಚಿತ್ರರಂಗಕ್ಕೆ ಪ್ರವೇಶ ಪಡೆದಿದ್ದೇ ಬಹುತೇಕ ನಟಿಯರಿಗೆ ಒಂದು ದೊಡ್ಡ ಕನಸಿನಂತೆ.ವೃತ್ತಿ ಜೀವನದಲ್ಲಿ ಬೃಹತ್ ಯಶಸ್ಸು ಪಡೆದ ನಟಿ ಸುಧಾರಾಣಿ.ಅವರು ಮೊದಲು ಅಮೆರಿಕ ಮೂಲದ ಒಬ್ಬ ಡಾಕ್ಟರನ್ನು ವಿವಾಹವಾದರು.ಐದೇ ವರ್ಷದಲ್ಲಿ ಅವರಿಗೆ ಡೈವೊರ್ಸ್ ಕೊಟ್ಟರು.2001ರಲ್ಲಿ ಅವರ ಸಂಬಂಧಿಕರ ಪೈಕಿಯವರಾದ ಗೋವರ್ಧನ್ ಅನ್ನುವವರನ್ನು ಮದುವೆಯಾದರು.

ಅನುಪ್ರಭಾಕರ್ ಕೂಡ ಆರಂಭದಲ್ಲೇ ಭಾರಿ ಯಶಸ್ಸು ಕಂಡು ಮನೆಮಾತಾದ ನಟಿ.ಮೊದಲು ಅಭಿನಯ ಶಾರದೆ ಜಯಂತಿಯವರ ಪುತ್ರ ಕೃಷ್ಣಕುಮಾರ್ ಅವರನ್ನು ಮದುವೆಯಾಗಿದ್ದ ಅನು ಕೆಲವು ಭಿನ್ನಾಭಿಪ್ರಾಯ ಬಂದ ಕಾರಣ ಅವರಿಗೆ ವಿಚ್ಛೇದನ ಕೊಟ್ಟು ಮತ್ತೊಬ್ಬ ನಟ ರಘು ಮುಖರ್ಜಿಯವರನ್ನು ವಿವಾಹವಾಗಿ ಸುಖವಾಗಿದ್ದಾರೆ.

ರಾಧಿಕಾ ಅಥವಾ ರಾಧಿಕಾ ಕುಮಾರಸ್ವಾಮಿ ಮಂಗಳೂರು ಮೂಲದಾಕೆ.ಇವರದಂತೂ ದಾರುಣ ವೈವಾಹಿಕ ಜೀವನ.ಕೇವಲ ಹದಿನಾಲ್ಕು ವರ್ಷದ ಹರೆಯದಲ್ಲಿ ಇದ್ದಾಗಲೇ ಇವರಿಗೆ ಮದುವೆಯಾಗಿತ್ತು ಅವರ ಪತಿ ಹೃದಯಾಘಾತದಿಂದ ಮೃತಪಟ್ಟು ಆ ಸಂಬಂಧ ಹೆಚ್ಚು ದಿನ ನಡೆಯದೇ ಚಿತ್ರರಂಗಕ್ಕೆ ಬಂದರು,ಇವರು ಕೂಡ ಚಿತ್ರರಂಗದಲ್ಲಿ ಯಾವ ಮಟ್ಟಿಗೆ ಬೇರೂರಿದ್ದರು ಅಂತ ತಮಗೇ ಗೊತ್ತಿದೆ.ನಂತರ ಅವರು ಕುಮಾರಸ್ವಾಮಿಯವರ ಎರಡನೇ ಪತ್ನಿಯಾದರು.

Leave a Reply

%d bloggers like this: