ಎರಡನೇ ದಿನ ಬಾಕ್ಸ್ ಆಫೀಸ್ ಅಲ್ಲಿ ಸಂಪೂರ್ಣ ಡಲ್ ಆದ ವಿಜಯ್ ದೇವರಕೊಂಡ ಅವರ ‘ಲೈಗರ್’ ಚಿತ್ರ

ದಕ್ಷಿಣ ಭಾರತೀಯ ಚಿತ್ರರಂಗದ ಸುಪ್ರಸಿದ್ದ ನಿರ್ದೇಶಕ ಪುರಿ ಜಗನ್ನಾಥ್ ಅವರ ನಿರ್ದೇಶನದಲ್ಲಿ ಮೂಡಿಬಂದ ಬಹು ನಿರೀಕ್ಷಿತ ಪ್ಯಾನ್ ಇಂಡಿಯಾ ಸಿನಿಮಾ ಲೈಗರ್ ಚಿತ್ರ ಇದೇ ಆಗಸ್ಟ್ 25ರಂದು ದೇಶಾದ್ಯಂತ ವಿವಿಧ ಭಾಷೆಗಳಲ್ಲಿ ಅದ್ದೂರಿಯಾಗಿ ರಿಲೀಸ್ ಆಗಿತ್ತು. ಬಾಕ್ಸಿಂಗ್ ಕ್ರೀಡಾಧಾರಿತ ಸಿನಿಮಾ ಆಗಿರೋ ಲೈಗರ್ ಚಿತ್ರದಲ್ಲಿ ವಿಜಯ್ ದೇವರಕೊಂಡ ಸಖತ್ ಆಗಿಯೇ ಮಿಂಚಿದ್ದಾರೆ. ಟ್ರೇಲರ್ ರಿಲೀಸ್ ಆದಾಗಿನಿಂದಾನೂ ಲೈಗರ್ ಚಿತ್ರದ ಬಗ್ಗೆ ಎಲ್ಲೆಡೆ ಅಪಾರ ನಿರೀಕ್ಷೆ ಇತ್ತು. ಮೊದಲ ದಿನದ ಶೋ ನೋಡಲು ಮುಗಿ ಬಿದ್ದು ಪ್ರೇಕ್ಷಕರು ಅಡ್ವಾನ್ಸ್ ಬುಕ್ಕಿಂಗ್ ಮಾಡಿದ್ದರು. ಅಂದರೆ ಲೈಗರ್ ಸಿನಿಮಾ ಮೊದಲ ದಿನದಲ್ಲೇ ಬರೋಬ್ಬರಿ 25 ಕೋಟಿ ಕಲೆಕ್ಷನ್ ಮಾಡಿತ್ತು. ಆದರೆ ಸಿನಿಮಾ ನೋಡಿದ ಸಿನಿ ಪ್ರೇಕ್ಷಕರು ಮಿಶ್ರ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದಾರೆ.

ನಟ ವಿಜಯ್ ದೇವರಕೊಂಡ ತಮ್ಮ ಪಾತ್ರಕ್ಕೆ ಸೂಕ್ತ ನ್ಯಾಯ ಒದಗಿಸಿದ್ದಾರೆ. ಆದರೇ ನಿರ್ದೇಶಕರಾಗಿ ಪುರಿ ಜಗನ್ನಾಥ್ ಅವರು ಎಡವಿದ್ದಾರೆ ಎಂಬ ಅಭಿಪ್ರಾಯಗಳು ಕೇಳಿ ಬಂದಿವೆ. ಲೈಗರ್ ಚಿತ್ರದ ಮೂಲಕ ವಿಜಯ್ ದೇವರಕೊಂಡ ಬಾಲಿವುಡ್ಗೆ ಎಂಟ್ರಿ ಆಗಿದ್ದರು. ಆದರೆ ಅವರಿಗೆ ಅದೃಷ್ಟ ಕೈ ಹಿಡಿದಿಲ್ಲ. ವಿಜಯ್ ದೇವರಕೊಂಡ ಅವರಿಗೆ ಜೋಡಿಯಾಗಿ ಬಾಲಿವುಡ್ ನಟಿ ಅನನ್ಯಾ ಪಾಂಡೆ ನಟಿಸಿದ್ದರು. ಆದರೆ ಅವರ ನಟನೆಯ ಬಗ್ಗೆಯೂ ಕೂಡ ಅಪಸ್ವರ ಕೇಳಿ ಬಂದಿದೆ. ವಿಶೇಷ ಪಾತ್ರದಲ್ಲಿ ಮಾಜಿ ಬಾಕ್ಸರ್ ಮೈಕ್ ಟೈಸನ್ ಕೂಡ ನಟಿಸಿದ್ದಾರೆ. ಜೊತೆಗೆ ತಾರಾಗಣದಲ್ಲಿ ಬಹುಭಾಷಾ ನಟಿ ರಮ್ಯಾ ಕೃಷ್ಣನ್ ಅವರು ವಿಜಯ್ ದೇವರಕೊಂಡ ಅವರ ತಾಯಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಮಕರಂದ್ ದೇಶಪಾಂಡೆ, ಅಲಿ, ರೋನಿತ್ ರಾಯ್ ತಮ್ಮ ಪಾತ್ರಗಳಿಗೆ ಜೀವತುಂಬಿ ನಟಿಸಿದ್ದಾರೆ.

ಆದರೆ ಗಟ್ಟಿತನವಿಲ್ಲದ ಕಥೆ ಸೋತಿದ್ದು, ಮೇಕಿಂಗ್ ನಲ್ಲಿ ಮಾತ್ರ ಗೆದ್ದಿದೆ. ಬರೋಬ್ಬರಿ ನೂರು ಕೋಟಿ ಬಜೆಟ್ ನಲ್ಲಿ ತಯಾರಾಗಿದೆ ಎನ್ನಲಾದ ಲೈಗರ್ ಸಿನಿಮಾ ಬಾಕ್ಸ್ ಅಫೀಸ್ ನಲ್ಲಿ ಮಂಕಾಗಿದೆ. ಮೊದಲ ದಿನದಲ್ಲಿ ಸಿನಿಮಾ 25 ಕೋಟಿ ಕಲೆಕ್ಷನ್ ಮಾಡಿದ್ರೆ ಎರಡನೇ ದಿನ ಕೇವಲ 16ಕೋಟಿ ಕಲೆಕ್ಷನ್ ಮಾಡುವುದಕ್ಕೆ ತೃಪ್ತಿ ಕಂಡಿದೆ. ಚಿತ್ರದ ಬಗ್ಗೆ ಮಿಶ್ರ ಪ್ರತಿಕ್ರಿಯೆ ಕೇಳಿ ಬಂದ ಹಿನ್ನೆಲೆ ಸಿನಿ ಪ್ರೇಕ್ಷಕರು ಲೈಗರ್ ಸಿನಿಮಾ ನೋಡಲು ಹಿಂದೇಟಾಕಿದ್ದಾರೆ. ಆದರೆ ವಾರಾಂತ್ಯದ ದಿನ ಮತ್ತು ಗಣೇಶ ಚತುರ್ಥಿ ಹಬ್ಬ ಇರೋದ್ರಿಂದ ಲೈಗರ್ ಸಿನಿಮಾದ ಕಲೆಕ್ಷನ್ ಪಿಕಪ್ ಅಗಲಿದೆ ಎಂದು ಚಿತ್ರತಂಡ ಆಶಾದಾಯಕವಾಗಿದೆ. ನಿರ್ದೇಶನದ ಜೊತೆಗೆ ನಿರ್ಮಾಪಕರಾಗಿಯೂ ಜವಾಬ್ದಾರಿ ಹೊತ್ತಿರೋ ಪುರಿ ಜಗನ್ನಾಥ್ ಅವರಿಗೆ ಲೈಗರ್ ಸಿನಿಮಾ ಎಲ್ಲೋ ಒಂದು ಕಡೆ ನಕರಾತ್ಮಕವಾಗಿದೆ ಎಂದು ಸಿನಿ ಪಂಡಿತರು ಚರ್ಚೆ ಮಾಡುತ್ತಿದ್ದಾರೆ.