ಎಂಗೇಜ್ಮೆಂಟ್ ಮಾಡಿಕೊಂಡ ಶೈನ್ ಶೆಟ್ಟಿ ಮತ್ತು ದೀಪಿಕಾ ದಾಸ್

ಬಿಗ್ ಬಾಸ್ ಏಳನೇ ಆವೃತ್ತಿ ಗೆಲ್ಲುವ ಮೂಲಕ ದೊಡ್ಡ ಹೆಸರು ಮಾಡಿದ ಕಿರುತೆರೆ ನಟ ಶೈನ್ ಶೆಟ್ಟಿ ಅವರು ಬಿಗ್ ಬಾಸ್ ನಲ್ಲಿ ತಮ್ಮ ಸಹಸ್ಪರ್ಧಿಯಾಗಿದ್ದ ದೀಪಿಕಾ ದಾಸ್ ಅವರೊಂದಿಗೆ ಗಾಢ ಸ್ನೇಹ ಹೊಂದಿದ್ದರು.ಬಿಗ್ ಬಾಸ್ ಗೆ ಹೋಗುವ ಮುನ್ನ ದೀಪಿಕಾ ನಾಗಿಣಿ ಧಾರಾವಾಹಿಯ ‌ಮೂಲಕ ಜನಪ್ರಿಯರಾಗಿದ್ದರು.ಬಿಗ್ ಬಾಸ್ ಗೆ ಬಂದ ನಂತರ ಇವರೂ ಸಖತ್ ಫೇಮಸ್ ಆದ್ರು.ಇನ್ನೂ ಇವರುಗಳು ಬಿಗ್ ಬಾಸ್ ಮನೆಯಿಂದ ಹೊರಬಂದ ಬಳಿಕ ಹಲವಾರು ಸಂದರ್ಶನಗಳನ್ನು ಕೊಟ್ಟಿದ್ದಾರೆ,ಹಲವಾರು ಕಾರ್ಯಕ್ರಮಗಳಿಗೆ ಗೆಸ್ಟ್ ಆಗಿ ಹೋಗಿದ್ದಾರೆ.ಕಾರ್ ಶೋರೂಂ,ಮೊಬೈಲ್ ಶೋರೂಮುಗಳನ್ನು ಉದ್ಘಾಟನೆ ಮಾಡಿದ್ದಾರೆ.ಆ ಮಟ್ಟದ ಬೇಡಿಕೆ ಇವರಿಗೆ ಇದ್ದೇ ಇದೆ.ಹಾಗೇ ಒಂದು ಸಂದರ್ಶನದಲ್ಲಿ ದೀಪಿಕಾ ದಾಸ್ ಶೈನ್ ಶೆಟ್ಟಿ ಇಬ್ಬರೂ ಭಾಗಿಯಾಗಿದ್ದರು.ಇದರ ಬಗ್ಗೆ ದೀಪಿಕಾ ಏನು ಮಾತಾಡಿದ್ದಾರೆ ನೋಡಿ.

ಕುಂದಾಪುರದಲ್ಲಿ ನಡೆದ ಔತಣಕೂಟವೊಂದರಲ್ಲಿ ದೀಪಿಕಾ ಮತ್ತು ಶೈನ್ ಶೆಟ್ಟಿ ಭಾಗಿಯಾಗಿದ್ದರಂತೆ.ಈ ಸಂದರ್ಭದಲ್ಲಿ ತೆಗೆದ ಫೋಟೋವನ್ನು ಇನ್ಸ್ಟಾ ಗ್ರಾಮ್ ನಲ್ಲಿ ಹಾಕಿದ ದೀಪಿಕಾ ಈ ವಿಷಯ ಹೇಳಿಕೊಂಡಿದ್ದಾರೆ.ಶೈನ್ ಶೆಟ್ಟಿ ಬಿಗ್ ಬಾಸ್ ಮನೆಯಲ್ಲಿ ಇದ್ದಾಗ ದೀಪಿಕಾ ಹಿಂದೆ ಬಿದ್ದಿರುವಂತೆ ನಟಿಸಿದ್ದರು.ಹಾಗೇ ಮಂಗಳೂರು ಬೀಚಿನಲ್ಲಿ ದೀಪಿಕಾ, ಶೈನ್ ಶೆಟ್ಟಿ ಹಾಗೂ ಚಂದನಾ ಸೇರಿ ಮಾಡಿದ ವಿಡಿಯೋ ವೈರಲ್ ಆಗಿತ್ತು.ಬಿಗ್ ಬಾಸ್ ಅಲ್ಲಿ ಇರುವಾಗ ಆರಂಭದಿಂದಲೂ ಶೈನ್ ಶೆಟ್ಟಿ ದೀಪಿಕಾರ ಹಿಂದೆ ಬೀಳೋದು,ಕಾಳೆಲೆಯೋದು ಮಾಡುತ್ತಾ ಗಾಢ ಸ್ನೇಹ ಹೊಂದಿದ್ರು.ಇದನ್ನ ಕಿಚ್ಚ ಸುದೀಪ್ ಸಹ ಕಿಚಾಯಿಸುತ್ತಿದ್ದರು.ಯಾವಾಗ ದೀಪಿಕಾರ ತಾಯಿ ಬಿಗ್ ಬಾಸ್ ಮನೆಯೊಳಗೆ ಅತಿಥಿಯಾಗಿ ಹೋಗಿ ಬಂದರೋ ಆಗ ಎಲ್ಲವೂ ತಣ್ಣಗಾಯಿತು.

ದೀಪಿಕಾ ಜೊತೆಗೆ ಟಾಸ್ಕ್ ಒಂದರಲ್ಲಿ ಭಾಗವಹಿಸಿದ್ದ ಶೈನ್ ಕುಂದಾಪುರ ಶೈಲಿಯಲ್ಲಿ ಪ್ರಪೋಸ್ ಮಾಡಿದ್ದು ಭಾರೀ ವೈರಲ್ ಆಗಿತ್ತು.ಈಗ ದೀಪಿಕಾ ಹಾಗೂ ತಮ್ಮ ನಡುವಿನ ಸಮ್ ಥಿಂಗ್ ಬಗ್ಗೆ ಶೈನ್ ಮಾತಾಡಿದ್ದಾರೆ.ನಾನು ದೀಪಿಕಾ ಅವರನ್ನ ತುಂಬಾ ಗೌರವಿಸುತ್ತೇನೆ.ಅವರು ಇರೋದೇ ಹಾಗೆ.ಹುಡುಗರ ಮುಂದೆ ತಗ್ಗಿಬಗ್ಗಿ ನಡೆಯಬೇಕು ಅಂತ ಏನೂ ಇಲ್ಲ ಅವರಿಗೆ.ಒಬ್ಬ ಹುಡುಗಿಯಾಗಿ ಅವರು ತುಂಬಾ ಸ್ಟ್ರಾಂಗಾಗಿ ಇದ್ದಾರೆ.ಹುಡುಗರಿಗೆ ಸವಾಲೆಸೆಯುವ ಮಟ್ಟಿಗೆ ಬಿಗ್ ಬಾಸ್ ಅಲ್ಲಿ ಚಟುವಟಿಕೆಯಿಂದಿದ್ದಾರೆ.ನಮ್ಮಿಬ್ಬರ ನಡುವಿನ ಚೆಲ್ಲಾಟ ಸ್ನೇಹದ್ದು ಎಂದು ಊಹಾಪೋಹಗಳಿಗೆ ತೆರೆ ಎಳೆದಿದ್ದಾರೆ ಶೈನ್ ಶೆಟ್ಟಿ.ಇಬ್ಬರ ವೃತ್ತಿ ಜೀವನಕ್ಕೆ ಶುಭ ಹಾರೈಸೋಣ.

Leave a Reply

%d bloggers like this: