ಎಲ್ಲಾ ಥಿಯೇಟರ್ ಎದುರು ಹೌಸ್ ಫುಲ್ ಬೋರ್ಡ್, ಎರಡನೇ ದಿನ ಕಾಂತಾರ ಚಿತ್ರದ ಗಳಿಕೆ ಎಷ್ಟು

ಗಲ್ಲಾ ಪೆಟ್ಟಿಗೆಯಲ್ಲಿ ಸಖತ್ ಸೌಂಡ್ ಮಾಡ್ತಿದೆ ರಿಷಭ್ ಶೆಟ್ಟಿ ಅವರ ಸಾರಥ್ಯದಲ್ಲಿ ಮೂಡಿಬಂದಿರೋ ಕಾಂತಾರ ಸಿನಿಮಾ. ಸ್ಯಾಂಡಲ್ ವುಡ್ ನಲ್ಲಿ ಕೆಜಿಎಫ್ ಸಿನಿಮಾದ ನಂತರ ಇತ್ತೀಚೆಗೆ ಕನ್ನಡದಲ್ಲಿ ಕಂಟೆಂಟ್ ಮತ್ತು ಅತ್ಯುತ್ತಮ ಮೇಕೀಂಗ್ ಹೊಂದಿರೋ ಸಿನಿಮಾಗಳು ತಯಾರಾಗ್ತಿವೆ. ಸೆಪ್ಟೆಂಬರ್ 30ರಂದು ರಾಜ್ಯಾದ್ಯಂತ ಅದ್ದೂರಿಯಾಗಿ ರಿಲೀಸ್ ಆಗಿದೆ. ಕಾಂತಾರ ಸಿನಿಮಾ ನೋಡಿದ ಪ್ರೇಕ್ಷಕರು ಅಭೂತಪೂರ್ವ ಪ್ರತಿಕ್ರಿಯೆ ನೀಡಿದ್ದಾರೆ. ದಿನದಿಂದ ದಿನಕ್ಕೆ ಕಾಂತಾರ ಸಿನಿಮಾದ ಹವಾ ಜೋರಾಗುತ್ತಿದೆ. ಸಿನಿಮಾ ನೋಡಿದ ಪ್ರೇಕ್ಷಕರು ಜೈ ಹೋ ಹೇಳಿದಂತೆ ವಿಮರ್ಶಕರು ಕೂಡ ರಿಷಬ್ ಶೆಟ್ಟಿ ಅವರ ನಿರ್ದೇಶನ ಮತ್ತು ಅಮೋಘ ನಟನೆಗೆ ಅಪಾರ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಕಾಂತಾರ ಸಿನಿಮಾ ಮಾಡುತ್ತಿರೋ ಕಮಾಲ್ ಅಷ್ಟಿಷ್ಟಲ್ಲ.

ಒಂದು ನಮ್ಮ ನಾಡಿನ ಸಂಸ್ಕೃತಿಯನ್ನ ಕಥೆಯ ಜೀವಾಳವನ್ನಾಗಿಸಿಕೊಂಡು ಅಲ್ಲಿ ನಡೆಯುವಂತಹ ನವಿರಾದ ಪ್ರೇಮ ಕಾವ್ಯವನ್ನ ಎಣೆದಿದ್ದಾರೆ ನಿರ್ದೇಶಕ ರಿಷಬ್ ಶೆಟ್ಟಿ. ಕಾಂತಾರ ಸಿನಿಮಾ ಎಲ್ಲೆಡೆ ಭರ್ಜರಿ ಸದ್ದು ಮಾಡುತ್ತಿದೆ. ಕಾಂತಾರ ಸಿನಿಮಾ ಎಲ್ಲೆಡೆ ಉತ್ತಮ ಪ್ರಶಂಸೆ ಗಿಟ್ಟಿಸುತ್ತಿರೋ ಕಾರಣ ಬಾಕ್ಸ್ ಆಫೀಸ್ ನಲ್ಲಿಯೂ ಕೂಡ ಭರ್ಜರಿ ಕಲೆಕ್ಷನ್ ಮಾಡ್ತಿದೆ. ಕಾಂತಾರ ಸಿನಿಮಾ ಪ್ರೀಮಿಯರ್ ಶೋ ನಲ್ಲಿ ಸಖತ್ ರೆಸ್ಪಾನ್ಸ್ ಕೇಳಿದ್ದೇ ತಡ ಮುಂದಿನ ದಿನವಾದ ಸೆಪ್ಟೆಂಬರ್ 30 ರಂದು ಥಿಯೇಟರಲ್ಲಿ ಸಿನಿಪ್ರಿಯರಿಂದ ಕೂಡ ನಿರೀಕ್ಷೆಗೂ ಮೀರಿ ಹೌಸ್ ಫುಲ್ ಆಗಿದೆ. ಕಾಂತಾರ ಸಿನಿಮಾ ಮೊದಲನೇ ದಿನವೇ ಬರೋಬ್ಬರಿ 5 ಕೋಟಿ ಕಲೆಕ್ಷನ್ ಮಾಡಿತು ಎಂದು ಹೇಳಲಾಗ್ತಿದೆ. ಚಿತ್ರದ ಬಗ್ಗೆ ಅಪಾರ ಮೆಚ್ಚುಗೆ ಕೇಳಿಬಂದ ಹಿನ್ನೆಲೆ ಶನಿವಾರ ಮತ್ತು ಭಾನುವಾರ ಎಲ್ಲಾ ಕಡೆ ಹೌಸ್ ಫುಲ್ ಪ್ರದರ್ಶನ ಕಾಣುತ್ತಿದೆ.

ಈ ಚಿತ್ರ ಎರಡನೇ ದಿನ ಕಾಂತಾರ ಸಿನಿಮಾ ಬರೋಬ್ಬರಿ 8 ಕೋಟಿಗೂ ಅಧಿಕ ಕಲೆಕ್ಷನ್ ಮಾಡಿದೆಯಂತೆ. ವಾರಾಂತ್ಯದ ರಜೆ ಇರೋ ಕಾರಣ ಕಾಂತಾರ ಸಿನಿಮಾ ಭಾನುವಾರ ಒಂದೇ ದಿನ ಹತ್ತು ಕೋಟಿ ಕಲೆಕ್ಷನ್ ಮಾಡರಲಿದೆ ಎಂದು ಸಿನಿ ಪಂಡಿತರು ಲೆಕ್ಕಾಚಾರ ಹಾಕುತ್ತಿದ್ದಾರೆ. ಹೊಂಬಾಳೆ ಫಿಲಂಸ್ ಬ್ಯಾನರಡಿಯಲ್ಲಿ ವಿಜಯ್ ಕಿರಗಂದೂರ್ ಅವರ ನಿರ್ಮಾಣದಲ್ಲಿ ಈ ಕಾಂತಾರ ಸಿನಿಮಾ ಅದ್ದೂರಿಯಾಗಿ ಮೂಡಿಬಂದಿದ್ದು, ಕನ್ನಡ ಸಿನಿ ರಸಿಕರ ಮನಗೆದ್ದಿದೆ. ಸದ್ಯಕ್ಕೆ ದಸರಾ ಆಯುಧ ಪೂಜೆ ಸೇರಿದಂತೆ ಸಾಲು ಸಾಲು ರಜೆ ಗಳು ಇರೋದ್ರಿಂದ ಗಾಂಧಿನಗರದಲ್ಲಿ ಕಾಂತಾರ ಸಿನಿಮಾದ ಕಲೆಕ್ಷನ್ ವಿಚಾರವಾಗಿಯೇ ಸುದ್ದಿ ನಡೆಯುತ್ತಿದೆ. ಕಾಂತಾರ ಸಿನಿಮಾದಲ್ಲಿ ರಿಷಬ್ ಶೆಟ್ಟಿ, ಸಪ್ತಮಿಗೌಡ, ಅಚ್ಯುತ್ ಕುಮಾರ್, ಪ್ರಮೋದ್ ಶೆಟ್ಟಿ, ಕಿಶೋರ್ ಸೇರಿದಂತೆ ಎಲ್ಲರ ಅಭಿನಯಕ್ಕೆ ಪ್ರೇಕ್ಷಕ ಪ್ರಭು ಫುಲ್ ಮಾರ್ಕ್ಸ್ ನೀಡಿದ್ದು, ಕಾಂತಾರ ಸಿನಿಮಾವನ್ನ ಮುಗಿ ಬಿದ್ದು ನೋಡುತ್ತಿದ್ದಾರೆ.