ಐಫೆಲ್ ಟವರ್ ಎದುರು ದಕ್ಷಿಣ ಭಾರತದ ನಟಿಗೆ ಪ್ರಪೋಸ್ ಮಾಡಿದ ಉದ್ಯಮಿ

ದಕ್ಷಿಣ ಭಾರತದ ಮತ್ತೊಬ್ಬ ಸುಪ್ರಸಿದ್ದ ನಟಿ ಹಸೆ ಮಣೆ ಏರಲು ಸಜ್ಜಾಗುತ್ತಿದ್ದಾರೆ. ಈ ಒಂದು ಸುದ್ದಿ ಇದೀಗ ಸೌತ್ ಸಿನಿರಂಗದಲ್ಲಿ ಸಖತ್ ಸನ್ಶೇನಲ್ ಕ್ರಿಯೇಟ್ ಮಾಡಿದೆ. ಯಾರು ಆ ಖ್ಯಾತ ನಟಿ ಅಂತೀರಾ. ಹಾಗಿದ್ರೇ ಈ ಲೇಖನವನ್ನ ಸಂಪೂರ್ಣವಾಗಿ ಓದಿ. ಹೌದು ಇತ್ತೀಚೆಗೆ ನಮ್ಮ ದಕ್ಷಿಣ ಭಾರತದ ಅನೇಕ ನಟ ನಟಿಯರು ತಮ್ಮ ಸಿನಿಮಾಗಳಷ್ಟೇ ತಮ್ಮ ವೈಯಕ್ತಿಕ ಜೀವನದ ವಿಚಾರವಾಗಿ ಭಾರಿ ಸುದ್ದಿಯಾಗುತ್ತಿದ್ದಾರೆ. ಅದರಂತೆ ಇದೀಗ ತಮ್ಮ ವೈಯಕ್ತಿಕ ಜೀವನದ ವಿಷಯವಾಗಿ ಸುದ್ದಿಯಾಗಿರೋದು ಬೇರಾರು ಅಲ್ಲ ದಕ್ಷಿಣ ಭಾರತದ ಸುಪ್ರಸಿದ್ದ ನಟಿ ಹನ್ಸಿಕಾ. ನಟಿ ಹನ್ಸಿಕಾ ಅವರು ಕನ್ನಡದಲ್ಲಿ ಅಪ್ಪು ಅವರೊಟ್ಟಿಗೆ ಬಿಂದಾಸ್ ಅನ್ನೋ ಸಿನಿಮಾದಲ್ಲಿ ನಲ್ಲೆ ನಲ್ಲೆ ಓ ನಲ್ಲೇ ಎಂಬ ಹಾಡಿಗೆ ಬಿಂದಾಸ್ ಸ್ಪೆಪ್ ಹಾಕಿ ಪುನೀತ್ ಅವರ ಜೊತೆ ಅಭಿನಯಿಸಿದ್ದಾರೆ. ಈ ಚಿತ್ರದ ಮೂಲಕ ನಟಿ ಹನ್ಸಿಕಾ ಅವರು ಕನ್ನಡ ಸಿನಿ ಪ್ರೇಕ್ಷಕರು ಮನ ಗೆದ್ದಿದ್ದರು‌.

ನಟಿ ಹನ್ಸಿಕಾ ಅವರು ಪ್ರಮುಖವಾಗಿ ಹೆಚ್ಚು ಸಿನಿಮಾಗಳಲ್ಲಿ ನಟಿಸಿರೋದು ತಮಿಳು ಸಿನಿಮಾಗಳಲ್ಲಿ. ಹಿಂದಿ ಸಿನಿಮಾರಂಗದಲ್ಲಿ ಬಾಲನಟಿಯಾಗಿ ನಟಿಸುವುದರ ಮೂಲಕ ಬಣ್ಣದ ಲೋಕಕ್ಕೆ ಪಾದಾರ್ಪಣೆ ಮಾಡ್ತಾರೆ ನಟಿ ಹನ್ಸಿಕಾ ಮೋಟ್ವಾನಿ. ತದ ನಂತರ ದೇಶಮುದುರು, ಕಂತ್ರಿ, ಮಸ್ತಾ ಅಂತಹ ಸೂಪರ್ ಹಿಟ್ ಸಿನಿಮಾಗಳಲ್ಲಿ ಪ್ರಧಾನ ಪಾತ್ರಗಳಲ್ಲಿ ನಟಿಸಿದ್ದಾರೆ. 2011 ರಲ್ಲಿ ಮಾಪಿಳ್ಳೈ ಎಂಬ ತಮಿಳು ಸಿನಿಮಾದ ಮೂಲಕ ಕಾಲಿವುಡ್ ಗೆ ಎಂಟ್ರಿ ನೀಡ್ತಾರೆ. ವೇಲಾಯುದಮ್, ಎಂಗೆಯುಮ್ ಕಾದಲ್, ಒರು ಕಲ್ ಒರು ಕನ್ನಡಿ, ತೀಯಾ ವೆಲೈ ಸೆಯ್ಯನುಮ್ ಕುಮಾರು, ಸಿಂಗಂ2, ಅರಣ್ಮನೈ, ವಿಲನ್ ಸಿನಿಮಾ ಸೇರಿದಂತೆ ತೆಲುಗು, ತಮಿಳು, ಮಲೆಯಾಳಂ, ಕನ್ನಡ ಸೇರಿದಂತೆ ಹತ್ತಾರು ಸಿನಿಮಾಗಳಲ್ಲಿ ನಟಿಸಿ ದಕ್ಷಿಣ ಭಾರತದಾದ್ಯಂತ ಅಪಾರ ಜನಪ್ರಿಯತೆ ಗಳಿಸಿದ್ದಾರೆ. ಸಿನಿಮಾದ ಜೊತೆಗೆ ಸೋಶಿಯಲ್ ಮೀಡಿಯಾದಲ್ಲಿ ಸಖತ್ ಆಕ್ಟಿವ್ ಆಗಿರುವ ನಟಿ ಹನ್ಸಿಕಾ ಅವರು ತಮ್ಮ ಸಿನಿಮಾ ಅಪ್ ಡೇಟ್ಸ್ ಮತ್ತು ತಮ್ಮ ಲೈಫ್ ಸ್ಟೈಲ್ ವಿಚಾರದ ಬಗ್ಗೆಯೂ ಕೂಡ ತಮ್ಮ ಅಭಿಮಾನಿಗಳಿಗೆ ಮಾಹಿತಿ ನೀಡ್ತಾನೆ ಇರ್ತಾರೆ.

ಅದೇ ರೀತಿಯಾಗಿ ಇದೀಗ ತಮ್ಮ ಅಭಿಮಾನಿಗಳಿಗೆ ಸಖತ್ ಸರ್ಪ್ರೈಸ್ ವಿಚಾರವೊಂದನ್ನ ಶೇರ್ ಮಾಡಿಕೊಂಡಿದ್ದಾರೆ. ಅದೇನಪ್ಪಾ ಅಂದರೆ ಹನ್ಸಿಕಾ ಅವರು ತಮ್ಮ ಭಾವಿ ಪತಿಯ ಫೋಟೋವನ್ನ ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಈ ಮೂಲಕ ತಾವು ದಾಂಪತ್ಯ ಜೀವನಕ್ಕೆ ಹೆಜ್ಜೆ ಇಡುತ್ತಿರುವ ಬಗ್ಗೆ ಮಾಹಿತಿ ನೀಡಿದ್ದಾರೆ. ನಟಿ ಹನ್ಸಿಕಾ ಅವರು ಉದ್ಯಮಿ ಸೋಹೆಲ್ ಖತುರಿಯಾ ಅವರನ್ನ ತಮ್ಮ ಬಾಳ ಸಂಗಾತಿಯಾಗಿ ಸ್ವೀಕರಿಸುತ್ತಿದ್ದಾರೆ. ಸೋಹೆಲ್ ಖತುರಿಯಾ ಅವರು ಫೇಮಸ್ ಗಾರ್ಮೆಂಟ್ ಬ್ರ್ಯಾಂಡ್ ಅವಂತ್ ಅನ್ನ ಹೊಂದಿದ್ದಾರೆ. ತಾವು ಮದುವೆ ಆಗುತ್ತಿರುವ ನಟಿ ಹನ್ಸಿಕಾ ಅವರಿಗೆ ಸೋಹೆಲ್ ಅವರು ಪ್ಯಾರಿಸ್ ನಲ್ಲಿರೋ ಐಫೆಲ್ ಟವರ್ ಮುಂದೆ ಹನ್ಸಿಕಾ ಅವರಿಗೆ ಮಂಡಿಯೂರಿ ಪ್ರೇಮ ನಿವೇದನೆ ಮಾಡಿದ್ದಾರೆ. ಈ ಫೋಟೋಗಳನ್ನ ನಟಿ ಹನ್ಸಿಕಾ ಅವರು ತಮ್ಮ ಇನ್ಸ್ಟಾ ಗ್ರಾಮ್ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಸದ್ಯಕ್ಕೆ ಈ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಹನ್ಸಿಕಾ ಅವರಿಗೆ ನೆಟ್ಟಿಗರು ಶುಭ ಹಾರೈಸುತ್ತಿದ್ದಾರೆ.

Leave a Reply

%d bloggers like this: