ಈಕೆ ಮಗನ ವೀರ್ಯಾಣು ಬಳಸಿ ಯಾವ ತಾಯಿಯೂ ಮಾಡಿರದ ಕೆಲಸವನ್ನು ಮಾಡಿದ್ದಾರೆ! ಏಕೆ ಗೊತ್ತಾ

ತನ್ನ ಮಕ್ಕಳ ಭವಿಷ್ಯ ಹಾಗೂ ತನ್ನ ಮಕ್ಕಳ ಸಂತೋಷಕ್ಕಾಗಿ ಅವರ ತಾಯಿ ಯಾವ ಪರಿಸ್ಥಿತಿಯನ್ನು ಸಹ ಎದುರಿಸುತ್ತಾರೆ. ಇದೀಗ ಎರಡು ವರ್ಷಗಳ ಹಿಂದೆ ಸತ್ತು ಹೋದ ತನ್ನ ಮಗನನ್ನು ಇದೀಗ ಒಬ್ಬ ತಾಯಿ ಬದುಕಿಸಿಕೊಂಡಿರುವ ಒಂದು ನೈಜ್ಯ ಘಟನೆಯನ್ನು ನಿಮಗೆ ತಿಳಿಸುತ್ತೇವೆ ಬನ್ನಿ. ಪೂನಾ ನಿವಾಸಿಯಾದ ರಾಜಶ್ರೀ ಎಂಬುವ ಮಹಿಳೆ, ತಾನು ಗರ್ಭಿಣಿಯಾಗಿದ್ದ ಸಮಯದಿಂದಲೂ ಸಹ ತಮ್ಮ ಮಗನ ಬಗ್ಗೆ ಸಾಕಷ್ಟು ಕನಸ್ಸುಗಳನ್ನು ಕಟ್ಟಿಕೊಂಡಿದ್ದರು.

ಇನ್ನು ತಮ್ಮ ಮಗನನ್ನು ಸಮಾಜದಲ್ಲಿ ಉತ್ತಮ ವ್ಯಕ್ತಿಯಾಗಿ ಬೆಳೆಸಬೇಕು ಎಂಬುವ ಆಸ್ತೆ ಇಟ್ಟುಕೊಂಡಿದ್ದರು. ಪ್ರಥಮೇಶ್ ತಮ್ಮ ತಾಯಿಯ ಆಸೆಯಂತೆ ಚೆನ್ನಾಗಿ ಓದಿ, ವಿದೇಶದಲ್ಲಿ ಕೆಲಸ ತೆಗೆದುಕೊಂಡು ಉತ್ತಮ ವ್ಯಕ್ತಿಯಾಗಿ ಬಾಳುತ್ತಿದ್ದ. ಇನ್ನು ಇದೆ ವೇಳೆ ಪ್ರಥಮೇಶ್ ಅವರಿಗೆ ಕ್ಯಾನ್ಸರ್ ಕಾಯಿಲೆ ಇರುವುದು ಕಚಿತವಾಗಿತು. ಇನ್ನು ಪ್ರಥಮೇಶ್ ಚಿಕಿತ್ಸೆ ಪಡೆಯುತ್ತಿದ್ದ ಆಸ್ಪತ್ರೆಯಲ್ಲಿ ಮುಂದಾಲೋಚಿಸಿ ಆತನ ವೀರ್ಯಾಣಗಳನ್ನು ಸ್ವೀಕರಿಸಿ ಇಟ್ಟಿದ್ದರು.

ಮಗನ ಕಾಯಿಲೆ ತಿಳಿದುಕೊಳ್ಳಲು ರಾಜಶ್ರೀ ಅವರ ಸಹ ತಕ್ಷಣ ಮಗನನ್ನು ನೋಡಿಕೊಳ್ಳಲು ವಿದೇಶಕ್ಕೆ ಹಾರಿದ್ದಾರೆ. ಇನ್ನು ಅಲ್ಲಿ ವೈದ್ಯರು ಹೇಳಿದ ಮಾತುಗಳನ್ನು ಕೇಳಿ ರಾಜಶ್ರೀ ಅವರು ಕುಸಿದು ಬಿದ್ದಿದ್ದಾರೆ. ಇನ್ನು ಮಗನನ್ನು ಕರೆದುಕೊಂಡು ಭಾರತಕ್ಕೆ ಮರಳಿದ ರಾಜಶ್ರೀ ಅವರು ತಮ್ಮ ಮಗನ ಆಪರೇಶನ್ ಮಾಡಿಸಿದ್ದಾರೆ. ನಂತರ ಪ್ರಥಮೇಶ್ ಅವರು ಕೊಂಚ ದಿನಗಳ ನಂತರ ಸಂಪೂರ್ಣವಾಗಿ ಚೇತರಿಸಿಕೊಂಡಿದ್ದಾರೆ. ದಿನಗಳು ಕಳೆದಂತೆ ಪ್ರಥಮೇಶ್ ಆರೋಗ್ಯ ಮತ್ತೊಮ್ಮೆ ಹದಗೆಟ್ಟಿದ್ದು, ನಂತರ ಮೂರು ವರ್ಷಗಳ ಕಾಲ ನರಕ ಅನುಭವಿಸಿದ ಪ್ರಥಮೇಶ್ ಕೊನೆಗೂ ಕ್ಯಾನ್ಸರ್ ಮೃತಪಟ್ಟಿದ್ದಾರೆ.

ಇನ್ನು ಮಗನನ್ನು ಕಳೆದುಕೊಂಡು ನೋವಿನಲ್ಲಿದ್ದ ರಾಜಶ್ರೀ ನಂತರ ತಮ್ಮ ಮಗನ ವೀರ್ಯಾಣು ಬಗ್ಗೆ ನೆನಪಿಗೆ ಬಂದು ವಿದೇಶಕ್ಕೆ ಹೋಗಿ ಅವನ ವೀರ್ಯಾ*ಣು ಅನ್ನು ಭಾರತಕ್ಕೆ ತರಿಸಿದ್ದಾರೆ. ಭಾರತಕ್ಕೆ ಬಂದು ಬಹಳ ಹಣ ಕರ್ಚು ಮಾಡಿ ತನ್ನ ಮಗನ ವೀರ್ಯ ಬಳಸಿಕೊಂಡು ಬಾಡಿಗೆ ತಾಯಿ ಮೂಲಕ ಮೊಮ್ಮಕ್ಕಳನ್ನು ಪಡೆದಿದ್ದಾರೆ. 9 ತಿಂಗಳ ನಂತರ ಇಬ್ಬರೂ ಒಂದು ಗಂಡು ಹಾಗೂ ಹೆಣ್ಣು ಮಗು ಜನಿಸಿದ್ದು, ಗಂಡು ಮಗುವಿಗೆ ಪ್ರಥಮೇಶ್ ಹಾಗೂ ಹೆಣ್ಣು ಮಗುವಿಗೆ ತ್ರಿಷಾ ಎಂದು ಹೆಸರಿಟ್ಟಿದ್ದಾರೆ. ಸದ್ಯ ತಮ್ಮ ಮೊಮ್ಮಕ್ಕಳಲ್ಲಿ ತಮ್ಮ ಮಗನನ್ನು ನೋಡಿಕೊಂಡು ಜೀವನ ನಡೆಸುತ್ತಿದ್ದಾರೆ ರಾಜಶ್ರೀ.

Leave a Reply

%d bloggers like this: