ಈ ವ್ಯಕ್ತಿ ಮಾಡಿದ ತಪ್ಪಿನಿಂದ ಬೇಸರಗೊಂಡಿದ್ದಾರೆ ನಿರ್ದೇಶಕ ದುನಿಯಾ ಸೂರಿ ಅವರು

ಕನ್ನಡ ಚಿತ್ರರಂಗದ ಖ್ಯಾತ ನಿರ್ದೇಶಕ ಸೂರಿ ಬೇಸರ ವ್ಯಕ್ತಪಡಿಸಿದ್ದಾರೆ. ತಾನಾಯಿತು ತಮ್ಮ ಕೆಲಸ ಆಯಿತು ಅಂತ ಇರುವ ಸೂರಿ ಅವರು ಯಾವುದೇ ರೀತಿ ವಿವಾದ ಮಾಡಿಕೊಳ್ಳುವಿದಿಲ್ಲ. ಹಾಗಿರುವಾಗ ನಿರ್ದೇಶಕ ಸೂರಿ ಅವರು ಇದ್ದಕಿದ್ದಂತೆ ನನಗೆ ಈ ವಿಚಾರವೊಂದು ಬೇಸರ ಮೂಡಿಸಿದೆ ಎಂದು ಹೇಳಿದ್ದಾರೆ‌. ಅದಕ್ಕೆ ಏನು ಕಾರಣ ಎಂದು ತಿಳಿಯೋಣ. ನಿರ್ದೇಶಕ ಸೂರಿ ಅವರು ಕನ್ನಡ ಚಿತ್ರರಂಗದ ವಿಭಿನ್ನ ಪ್ರತಿಭೆ. ಇವರ ನಿರ್ದೇಶನದ ಸಿನಿಮಾಗಳ ಶೈಲಿ ಪಕ್ಕಾ ಲೋಕಲ್ ಅಂತ ಹೇಳ್ಬೋದು. ಜನ ಸಾಮಾನ್ಯರ ಬದುಕಿನ ಕಥಾಹಂದರ ಇಟ್ಟುಕೊಂಡು ಸಾಮಾನ್ಯ ಜನರ ಪಾತ್ರಗಳಲ್ಲಿ ಬದುಕು, ಬವಣೆ ತೋರಿಸುತ್ತಾ ಅದರ ಜೊತೆಗೆ ಒಂದಷ್ಟು ಸಂದೇಶ ಸಾರುವ ಸಿನಿಮಾ ಮಾಡುವುದರಲ್ಲಿ ಸೂರಿ ಎತ್ತಿದ ಕೈ. ಪಡ್ಡೆ ಹುಡುಗರಿಗೆ ಸೂರಿ ಅವರ ಸಿನಿಮಾಗಳು ಅಂದರೆ ಏನೋ ಒಂಥರಾ ಕಿಕ್. ಅವರನ್ನ ಸುಕ್ಕಾ ಸೂರಿ ಅಂತಾನೂ ಕರೆಯುತ್ತಾರೆ. ಅದಕ್ಕೆ ಅವರ ಸಿನಿಮಾಗಳೇ ಕಾರಣ.

ಸದ್ಯಕ್ಕೆ ಸೂರಿ ಅವರು ಅಂಬರೀಷ್ ಅವರ ಪುತ್ರ ಅಭಿಷೇಕ್ ಅಂಬರೀಷ್ ಅವರಿಗೆ ಬ್ಯಾಡ್ ಮ್ಯಾನರ್ಸ್ ಸಿನಿಮಾ ಮಾಡುತ್ತಿದ್ದಾರೆ. ಈ ಚಿತ್ರದ ಕೆಲಸ ಕಾರ್ಯಗಳಲ್ಲಿ ತೊಡಗಿಕೊಂಡಿದ್ದಾರೆ. ಇದರ ನಡುವೆ ಸೂರಿ ಅವರಿಗೆ ಕಿಡಿಗೇಡಿಗಳು ತಲೆನೋವೊಂದನ್ನ ತಂದಿಕ್ಕಿದ್ದಾರೆ. ಅದೇನಪ್ಪಾ ಅಂದರೆ ಸೂರಿ ಅವರು ಸಾಮಾನ್ಯವಾಗಿ ಸೋಶಿಯಲ್ ಮೀಡಿಯಾಗಳಲ್ಲಿ ಸಕ್ರೀಯವಾಗಿ ಇರುವುದಿಲ್ಲ. ಹೆಚ್ಚಾಗಿ ಅವರು ಫೇಸ್ ಬುಕ್ ಟ್ವಿಟರ್ ಬಳಸುವುದೂ ಇಲ್ಲ‌. ಆದರೆ ಅವರ ಹೆಸರಿನಲ್ಲಿ ಒಂದಷ್ಟು ಕಿಡಿಗೇಡಿಗಳು ಟ್ವಿಟರ್ ಅಕೌಂಟ್ ಗಳನ್ನ ತೆರೆದು ಪ್ರಸ್ತುತ ಒಂದಷ್ಟು ವಿದ್ಯಾಮಾನಗಳ ಬಗ್ಗೆ ಪೋಸ್ಟ್ ಮಾಡುತ್ತಿದ್ದಾರಂತೆ. ಇದು ನಿರ್ದೇಶಕ ಸೂರಿ ಅವರಿಗೆ ತಿಳಿಯುತ್ತಿದ್ದಂತೆ ತಾವು ಬಳಸುವ ಇನ್ಸ್ಟಾಗ್ರಾಮ್ ಖಾತೆಯಲ್ಲಿ ನಾನು ಕೇವಲ ಇನ್ಸ್ಟಾಗ್ರಾಮ್ ಖಾತೆಯನ್ನ ಮಾತ್ರ ಬಳಸುತ್ತೇನೆ.

ನಾನು ಯಾವುದೇ ಫೇಸ್ ಬುಕ್, ಟ್ವಿಟರ್ ಬಳಸುತ್ತಿಲ್ಲ. ನನ್ನ ಅನುಮತಿ ಪಡೆಯದೆ ನನ್ನ ಹೆಸರಿನಲ್ಲಿ ಟ್ವಿಟರ್, ಫೇಸ್ ಬುಕ್ ನಲ್ಲಿ ಖಾತೆ ತೆರೆದು ಪೋಸ್ಟ್ ಮಾಡುತ್ತಿರುವುದು ಅಪರಾಧ. ನಾನು ಈಗಾಗಲೇ ಸೈಬರ್ ಪೊಲೀಸ್ ಠಾಣೆಗೆ ದೂರು ನೀಡಿದ್ದೇನೆ‌. ದಯಮಾಡಿ ಈ ರೀತಿ ಅನಗತ್ಯವಾಗಿ ನನ್ನ ಹೆಸರಿನಲ್ಲಿ ಪೋಸ್ಟ್ ಮಾಡುವ ಕೆಲಸ ಮಾಡಬೇಡಿ. ಈ ವಿಚಾರ ನನಗೆ ನಿಜಕ್ಕೂ ಕೂಡ ನೋವನ್ನ ಉಂಟು ಮಾಡಿದೆ ಎಂದು ತಿಳಿಸಿದ್ದಾರೆ. ಇತ್ತೀಚೆಗೆ ಕೆಲವು ವ್ಯಕ್ತಿಗಳು ಸೋಶಿಯಲ್ ಮೀಡಿಯಾದಲ್ಲಿ ಸೆಲೆಬ್ರಿಟಿಗಳ ಹೆಸರಿನಲ್ಲಿ, ಫ್ಯಾನ್ ಫೇಜ್ ಅಂತೇಳಿ ಅದರಲ್ಲಿ ಸಿನಿಮಾ ನಟ ನಟಿಯರ ಪೋಟೋ ಮತ್ತು ಅವರಿಗೆ ಸಂಬಂಧಪಟ್ಟಂತಹ ಸುದ್ದಿಗಳನ್ನ ಪೋಸ್ಟ್ ಮಾಡುತ್ತಿದ್ದಾರೆ. ಇದರಿಂದ ಕೆಲವೊಮ್ಮೆ ಆಯಾ ನಟ ನಟಿಯರ ವೈಯಕ್ತಿಕ ತೇಜೋವದೆ ಕೂಡ ಆಗಬಹುದು. ಇದೀಗ ನಿರ್ದೇಶಕ ಸೂರಿ ಅವರು ತಕ್ಷಣ ತಮ್ಮದಲ್ಲದ ಖಾತೆಗಳ ಬಗ್ಗೆ ಮಾಹಿತಿ ನೀಡಿದ್ದು ಉತ್ತಮ ಅಂತಾನೇ ಹೇಳ್ಬೋದು.

Leave a Reply

%d bloggers like this: