ಈ ಗ್ರಾಮದಲ್ಲಿ ಕಡ್ಡಾಯವಾಗಿ ಒಬ್ಬ ಪುರುಷ ಇಬ್ಬರು ಮಹಿಳೆಯರನ್ನ ಮದುವೆ ಆಗಲೇಬೇಕಂತೆ…! ಇದರ ಹಿಂದಿನ ಅಸಲಿ ಸತ್ಯ ಕೇಳಿದರೆ ಬೆಚ್ಚಿಬೀಳ್ತೀರಾ

ಈ ಗ್ರಾಮದಲ್ಲಿ ಕಡ್ಡಾಯವಾಗಿ ಒಬ್ಬ ಪುರುಷ ಇಬ್ಬರು ಮಹಿಳೆಯರನ್ನ ಮದುವೆ ಆಗಲೇಬೇಕಂತೆ…! ಸಾಮಾನ್ಯವಾಗಿ ಭಾರತೀಯ ಕಾನೂನಿನಲ್ಲಿ ವಿವಾಹ ಕಾಯ್ದೆಯ ಪ್ರಕಾರ ಒಬ್ಬ ವ್ಯಕ್ತಿ ಒಂದು ಮದುವೆಯಾಗಿದ್ದರೆ. ಮತ್ತೊಬ್ಬ ಮಹಿಳೆಯನ್ನ ಮದುವೆ ಆಗುವ ಆಗಿಲ್ಲ. ಅದು ಭಾರತೀಯ ಕಾನೂನು ಹಿಂದೂ ವಿವಾಹ ಕಾಯ್ದೆಯ ಪ್ರಕಾರ ಅಪರಾಧ ಎಂದು ತಿಳಿಸುತ್ತದೆ. ಒಂದು ವೇಳೆ ಆತನ ಹೆಂಡತಿ ನಿಧನರಾಗಿದ್ದರೆ ಅಥವಾ ಹೆಂಡತಿಗೆ ಕಾನೂನಿನ ಪ್ರಕಾರ ವಿಚ್ಚೇದನ ನೀಡಿದ್ದರೆ ಮಾತ್ರ ಅಂತಹ ಸಂಧರ್ಭದಲ್ಲಿ ಆ ವ್ಯಕ್ತಿ ಇನ್ನೊಂದು ಮದುವೆ ಆಗುವುದಕ್ಕೆ ಅವಕಾಶ ಇರುತ್ತದೆ. ಇಲ್ಲವಾದಲ್ಲಿ ತನ್ನ ಮೊದಲ ಪತ್ನಿ ಜೀವಂತವಾಗಿದ್ದು, ಅವರಿಂದ ವಿಚ್ಚೇದನ ಪಡೆಯದಿದ್ದಲ್ಲಿ ಎರಡನೇ ಮದುವೆ ಆದರೆ ಆ ಮದುವೆಯು ಕಾನೂನಿನ ಪ್ರಕಾರ ಅಸಿಂಧು ಆಗುತ್ತದೆ.

ಇಂತಹ ಕಠಿಣ ಕಾನೂನು ಇರುವ ಭಾರತ ದೇಶದಲ್ಲಿ ಒಬ್ಬ ವ್ಯಕ್ತಿ ತನ್ನ ಪತ್ನಿ ಜೀವಂತವಾಗಿದ್ದು, ಅವಳಿಗೆ ಕಾನೂನಿನ ಪ್ರಕಾರ ವಿಚ್ಚೇದನ ನೀಡದೆ ರಾಜಾರೋಷವಾಗಿ ಮರು ಮದುವೆ ಆಗಬಹುದಾಗಿದೆ. ಈ ಪದ್ದತಿ ನಡೆದುಕೊಂಡು ಬರುತ್ತಿರುವುದು ರಾಜಸ್ಥಾನದ ಜೈಸಲ್ಮೇರ್ ಎಂಬ ಜಿಲ್ಲೆಯ ರಾಮದೇಯೋ ಎಂಬ ಗ್ರಾಮದಲ್ಲಿ. ಹೌದು ಈ ಗ್ರಾಮದಲ್ಲಿ ಪ್ರತಿಯೊಬ್ಬ ಯುವಕ ಎರಡು ಮದುವೆ ಆಗುತ್ತಾರೆ. ಇದಕ್ಕೆ ಇಲ್ಲಿನ ಯುವತಿಯರು ಯಾವುದೇ ರೀತಿಯ ಅಪಸ್ವರ ಎತ್ತದೇ ಮನ:ಪೂರ್ವಕವಾಗಿ ಸಮ್ಮತಿ ಸೂಚಿಸುತ್ತಿದ್ದಾರೆ. ಇದಕ್ಕೆ ಬಲವಾದ ಕಾರಣವೂ ಕೂಡ ಇದೆ. ಇದು ಪೂರ್ವಗ್ರಹ ಪೀಡಿತ ಮನಸ್ಥಿತಿಯೋ ಅಥವಾ ಮೂಢನಂಬಿಕೆಯೂ ಸೂಕ್ತವಾಗಿ ತಿಳಿದು ಬಂದಿಲ್ಲ.

ಹೌದು ಇಲ್ಲಿನ ಯುವಕರು ಮೊದಲನೇ ಸಲ ಮದುವೆ ಆದಾಗ ಅವರಿಗೆ ಮಕ್ಕಳಾಗುವುದಿಲ್ಲ. ಒಂದು ವೇಳೆ ಮೊದಲನೆ ಬಾರಿ ಮದುವೆಯಾದ ಕೆಲವರಿಗೆ ಮಗು ಜನಿಸಿದರು ಕೂಡ ಆ ಮಕ್ಕಳು ಬರೀ ಹೆಣ್ಣು ಮಕ್ಕಳೆ ಜನಿಸುತ್ತಾವಂತೆ. ಇದು ಕಾಕತಾಳಿಯೋ ಏನೋ ಆ ಊರಿನಲ್ಲಿ ಅದೇ ರೀತಿಯಾಗಿ ನಡೆದುಕೊಂಡು ಬಂದಿದೆಯಂತೆ‌. ಹಾಗಾಗಿ ಇಲ್ಲಿನ ಗ್ರಾಮಸ್ಥದ ಯುವಕರು ಎರಡನೇ ಮದುವೆಯನ್ನ ಆಗುತ್ತಾರಂತೆ‌. ಇದಕ್ಕೆ ಇಡೀ ಊರಿನ ಜನರ ಒಕ್ಕೋರಲ ಸಮ್ಮತಿ ಕೂಡ ಇರುತ್ತದೆಯಂತೆ. ತಮ್ಮ ವಂಶ ಬೆಳೆಯುವುದಕ್ಕಾಗಿ ಪ್ರತಿ ಯುವಕರು ಕಡ್ಡಾಯವಾಗಿ ಎರಡು ಮದುವೆ ಆಗಲೇಬೇಕಾಗಿದೆಯಂತೆ. ವಿಚಿತ್ರ ಅಂದರೆ ಎರಡನೇ ಹೆಂಡ್ತಿಗೆ ಗಂಡು ಮಗು ಜನಿಸುತ್ತದೆಯಂತೆ.

ಸಾಮಾನ್ಯವಾಗಿ ಯಾವುದೇ ಹೆಣ್ಣು ಮಗಳು ತನ್ನ ಗಂಡನನ್ನು ಮತ್ತೊಬ್ಬ ಹೆಣ್ಣು ಮಗಳೊಂದಿಗೆ ಹಂಚಿಕೊಳ್ಳಲು ಇಷ್ಟ ಪಡುವುದಿಲ್ಲ. ಆದರೆ ಇಲ್ಲಿನ ಊರಿನ ಹೆಣ್ಣು ಮಕ್ಕಳು ತನ್ನ ಸಂಸಾರಕ್ಕೆ ಎರಡನೇ ಹೆಂಡತಿಯಾಗಿ ಬರುವ ಹೆಣ್ಣು ಮಗಳನ್ನ ತಂಗಿಯಂತೆ ಕಾಣುತ್ತಾರಂತೆ. ಸವತಿಯರಾಗಿ ಒಬ್ಬರಿಗೊಬ್ಬರು ಪರಸ್ಪರ ಕಿತ್ತಾಡದೇ ಸೋದರಿಯರಂತೆ ತಮ್ಮ ಇಬ್ಬರ ಮಕ್ಕಳನ್ನು ಕೂಡ ಸೌಹಾರ್ಧತೆಯಿಂದ ಸಾಕುತ್ತಾರಂತೆ. ಈ ಸಂಪ್ರಾದಯ ಶತಮಾನಗಳಿಂದ ನಡೆದುಕೊಂಡು ಬಂದಿದೆಯಂತೆ. ಆದರೆ ಈ ಸಂಪ್ರದಾಯವನ್ನು ಇತ್ತೀಚಿನ ಯುವ ಪೀಳಿಗೆಯ ಪಾಲಿಸಲು ಸಮ್ಮತಿ ನೀಡುತ್ತಿಲ್ಲವಂತೆ.

ಈ ಎರಡು ಮದುವೆ ಆಗುವ ಸಂಪ್ರದಾಯಕ್ಕೆ ಯುವಕರು ಕೂಡ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರಂತೆ. ಇಲ್ಲಿ ಈ ಊರಿನಲ್ಲಿ ದ್ವಿವಿವಾಹ ಪದ್ದತಿ ಇದೆ ಎಂಬುದು ಅನೇಕ ದಶಕಗಳಿಂದ ತಿಳಿದಿದ್ದರು ಕೂಡ ಅಲ್ಲಿನ ಪೊಲೀಸರು ಯಾರನ್ನು ಕೂಡ ಬಂಧಿಸಿರಲಿಲ್ಲವಂತೆ. ಏಕೆಂದರೆ ಅಲ್ಲಿ ಯಾರೂ ಕೂಡ ದೂರನ್ನ ನೀಡುತ್ತಿರಲಿಲ್ಲವಂತೆ. ಒಟ್ಟಾರೆಯಾಗಿ ಭಾರತ ದೇಶ ವೈವಿಧ್ಯತೆಯಲ್ಲಿ ಏಕತೆ ಎಂಬುವುದಕ್ಕೆ ಹಲವು ಭಾಷೆ, ಅನೇಕ ಸಮುದಾಯ, ಜನರ ಪ್ರದೇಶಕ್ಕೆ ತಕ್ಕ ವಿವಿಧ ಆಚರಣೆ ಸಂಪ್ರದಾಯಗಳು, ನಂಬಿಕೆಗಳು, ಜನರ ಆಚಾರ ವಿಚಾರ ಭಿನ್ನ ವಿಭಿನ್ನ ಉಡುಗೆ-ತೊಡುಗೆಗಳು, ಆಹಾರ ಪದ್ದತಿ ಶೈಲಿ ಅನೇಕ ಉದಾಹರಣೆಗಳಿವೆ.

Leave a Reply

%d bloggers like this: