ಈ ವರ್ಷದ ಸೈಮಾ ಪ್ರಶಸ್ತಿ ಪಡೆದು ಮಿಂಚಿದ ಕನ್ನಡ ನಟ ನಟಿಯರು ಇವರೇ

ರಾಬರ್ಟ್ ಸಿನಿಮಾ ಮೂರು ಅವಾರ್ಡ್ ಪಡೆದುಕೊಂಡು ಸೈಮಾದಲ್ಲಿಯೂ ಕೂಡ ಸದ್ದು ಮಾಡಿದೆ. ಸೌತ್ ಇಂಡಿಯನ್ ಇಂಟರ್ ನ್ಯಾಶನಲ್ ಮೂವಿ ಅವಾರ್ಡ್ ಕನ್ನಡದ ಯಾವೆಲ್ಲಾ ನಟ ನಟಿಯರಿಗೆ ಸಿಕ್ತು ಗೊತ್ತಾ. ಈ ಬಗ್ಗೆ ಒಂದಷ್ಟು ಮಾಹಿತಿ ಈ ಲೇಖನದಲ್ಲಿದೆ. ಸೈಮಾ ಅವಾರ್ಡ್ ಸೆಪ್ಟೆಂಬರ್10 ಮತ್ತು 11ರಂದು ಬೆಂಗಳೂರಿನ ಅರಮನೆ ಮೈದಾನದಲ್ಲಿ ಅದ್ದೂರಿಯಾಗಿ ನಡೆಯಿತು. ಸೌತ್ ಇಂಡಿಯನ್ ಇಂಟರ್ ನ್ಯಾಶನಲ್ ಮೂವೀ ಅವಾರ್ಡ್ಸ್ ಇದು 10ನೇ ವರ್ಷದಾಗಿತ್ತು. ಈ ಕಾರ್ಯಕ್ರಮ ಇದೇ ಮೊಟ್ಟ ಮೊದಲ ಬಾರಿಗೆ ಸಿಲಿ ಕಾನ್ ಸಿಟಿ ರಾಜಧಾನಿ ಬೆಂಗಳೂರಿನಲ್ಲಿ ನಡೆದಿದೆ. ಕನ್ನಡದ ಧೃವತಾರೆ ಅಪ್ಪು ಅವರ ಸ್ಮರಣಾರ್ಥ ಈ ಸೈಮಾ ಅವಾರ್ಡ್ ನಡೆಯಿತು. ಈ ಕಾರ್ಯಕ್ರಮದಲ್ಲಿ ದಕ್ಷಿಣ ಭಾರತ ಮತ್ತು ಬಾಲಿವುಡ್ನ ಅನೇಕ ನಟ ನಟಿಯರು ತಾಂತ್ರಿಕ ವರ್ಗದವರು ಆಗಮಿಸಿ ಅವಾರ್ಡ್ ಪಡೆದಿದ್ದಾರೆ.

ಕನ್ನಡದಲ್ಲಿ ಯುವರತ್ನ ಸಿನಿಮಾದ ನಟನೆಗಾಗಿ ಅಪ್ಪು ಅವರಿಗೆ ಮರಣೋತ್ತರವಾಗಿ ಅತ್ತುತ್ತಮ ನಟ ಪ್ರಶಸ್ತಿ ದೊರೆತಿದೆ. ಮದಗಜ ಚಿತ್ರದ ನಟನೆಗೆ ಉತ್ತಮ ನಾಯಕಿ ಅವಾರ್ಡ್ ಅಶಿಕಾ ರಂಗನಾಥ್ ಅವರಿಗೆ ಲಭಿಸಿದೆ. ಬಡವ ರಾಸ್ಕಲ್ ಚಿತ್ರದ ನಟನೆಗೆ ಅತ್ಯುತ್ತಮ ವಿಮರ್ಶಕರ ಪ್ರಶಸ್ತಿ ನಟಿ ಅಮೃತಾ ಅಯ್ಯಂಗಾರ್ ಅವರಿಗೆ ದೊರೆತಿದೆ. ರತ್ನನ್ ಪ್ರಪಂಚ ಚಿತ್ರದ ಪೋಷಕ ಪಾತ್ರ ನಟನೆಗೆ ಬೆಸ್ಟ್ ಕೋ ಆಕ್ಟರ್ ಪ್ರಶಸ್ತಿ ಉಡಾಳ್ ಬಾಬು ಪಾತ್ರ ಮಾಡಿದ್ದ ನಟ ಪ್ರಮೋದ್ ಅವರಿಗೆ ಸಿಕ್ಕಿದೆ. ಅದೇ ರೀತಿಯಾಗಿ ಪೊಗರು ಚಿತ್ರದ ನಟನೆಗೆ ಹಾಸ್ಯ ನಟ ಚಿಕ್ಕಣ್ಣ ಅವರಿಗೆ ಬೆಸ್ಟ್ ಕಾಮಿಡಿಯನ್ ಅವಾರ್ಡ್ ಲಭಿಸಿದೆ. ಹಾಗೂ ನಟ ಯಶ್ ಅವರು ಕಾರ್ಯಕ್ರಮದ ಮುಖ್ಯ ಅಥೀತಿಯಾಗಿ ಎಲ್ಲರ ಗಮನ ಸೆಳೆದರು.

ದೃಶ್ಯ2 ಸಿನಿಮಾದ ಉತ್ತಮ ಪೋಷಕ ನಟಿ ಆಗಿ ಆರೋಹಿ ನಾರಯಣ ಅವರಿಗೆ ಪ್ರಶಸ್ತಿ ದಕ್ಕಿದೆ. ಬೆಸ್ಟ್ ಡೆಬ್ಯೂ ಡೈರೆಕ್ಟರ್ ಅವಾರ್ಡ್ ಬಡವ ರಾಸ್ಕಲ್ ಸಿನಿಮಾದ ನಿರ್ದೇಶಕ ಶಂಕರ್ ಗುರು ಅವರಿಗೆ ಲಭಿಸಿದ್ದು,ಬೆಸ್ಟ್ ಡೆಬ್ಯೂ ಆಕ್ಟರ್ ಅವಾರ್ಡ್ ಇಕ್ಕಟ್ ಚಿತ್ರದ ನಟನೆಗಾಗಿ ನಟ ನಾಗಭೂಷಣ್ ಅವರಿಗೆ ದೊರೆತಿದೆ. ರಾಬರ್ಟ್ ಚಿತ್ರದ ಡೈರೆಕ್ಷನ್ ಗಾಗಿ ತರುಣ್ ಅವರಿಗೆ ಬೆಸ್ಟ್ ಡೈರೆಕ್ಟರ್, ಅದೇ ರಾಬರ್ಟ್ ಚಿತ್ರದ ಕ್ಯಾಮೆರಾಮ್ಯಾನ್ ಸುಧಾಕರ್ ಅವರಿಗೆ ಬೆಸ್ಟ್ ಕೊರಿಯೋಗ್ರಾಫರ್ ಅವಾರ್ಡ್ ಸಿಕ್ಕಿದ್ದು, ರಾಬರ್ಟ್ ಚಿತ್ರದ ಮ್ಯೂಸಿಕ್ ಡೈರೆಕ್ಟರ್ ಅರ್ಜುನ್ ಜನ್ಯಾ ಕೂಡ ಬೆಸ್ಟ್ ಮ್ಯೂಸಿಕ್ ಡೈರೆಕ್ಟರ್ ಅವಾರ್ಡ್ ಪಡೆದಿದ್ದಾರೆ. ಒಟ್ಟು ರಾಬರ್ಟ್ ಸಿನಿಮಾ ಮೂರು ಅವಾರ್ಡ್ ಪಡೆದುಕೊಂಡಿದೆ. ನಿನ್ನ ಸನಿಹಕ್ಕೆ ಚಿತ್ರದ ಗೀತೆಗೆ ಉತ್ತಮ ಗೀತಾರಚನೆಕಾರ ಪ್ರಶಸ್ತಿಯನ್ನ ವಾಸುಕಿ ವೈಭವ್ ಪಡೆದಿದ್ದಾರೆ.

Leave a Reply

%d bloggers like this: