ಈ ವಾರ ಬಿಗ್ ಬಾಸ್ ಮನೆಯಿಂದ ಹೊರಬಂದ ಕಾವ್ಯಾಶ್ರೀ ಗೌಡ ಅವರಿಗೆ ಸಿಕ್ಕ ಸಂಭಾವನೆ ಎಷ್ಟು

ಬಿಗ್ ಬಾಸ್ ಒಂಭತ್ತೇ ಆವೃತ್ತಿಯ ಹತ್ತನೇ ವಾರದಲ್ಲಿ ಹೊರಬಿದ್ದ ಮಂಗಳಗೌರಿ. ಕನ್ನಡ ಕಿರುತೆರೆಯ ಜನಪ್ರಿಯ ರಿಯಾಲಿಟಿ ಶೋಗಳಲ್ಲಿ ನಂಬರ್ ಒನ್ ಸ್ಥಾನ ಪಡೆದುಕೊಂಡು ವೀಕ್ಷಕರನ್ನ ಮನರಂಜಿಸುತ್ತಿರೋದು ಅಂದರೆ ಅದು ಬಿಗ್ ಬಾಸ್. ಕಿಚ್ಚ ಸುದೀಪ್ ಅವರ ನಿರೂಪಣೆಯಲ್ಲಿ ಮೂಡಿ ಬರುತ್ತಿರೋ ಬಿಗ್ ಬಾಸ್ 9ನೇ ಸೀಸನ್ ದಿನದಿಂದ ದಿನಕ್ಕೆ ಭಾರಿ ಕುತೂಹಲ ಮೂಡಿಸುತ್ತಿದೆ. ದೊಡ್ಮನೆಯಲ್ಲಿ ಇರೋ ಮಂದಿ ತಮ್ಮ ಆಟದ ಪರಿಯನ್ನ ಬದಲಾಯಿಸಿಕೊಂಡು ತಾವು ಗೆಲ್ಲಲೇಬೇಕು ಎಂಬ ಉತ್ಸಾಹದಲ್ಲಿ ಒಬ್ಬರಿಗೊಬ್ಫರು ಸಖತ್ ಫೈಟ್ ಕೊಟ್ಟು ಸಖತ್ ಆಗಿ ಚಾಣಾಕ್ಷತನದಿಂದ ಗೇಮ್ ಆಡುತ್ತಿದ್ದಾರೆ.

ಆದರೆ ಏನೇ ಮಾಡಿದರು ವಾರಾಂತ್ಯದಲ್ಲಿ ಒಬ್ಬ ಸದಸ್ಯರು ದೊಡ್ಮನೆಯಿಂದ ಹೊರ ನಡೆಯಲೇಬೇಕು. ಕಳೆದ ವಾರ ವಿನೋದ್ ಗೊಬ್ರಗಾಲ ಹೊರ ಬಂದಿದ್ದರು. ಅದೇ ರೀತಿಯಾಗಿ ಇದೀಗ ಬಿಗ್ ಬಾಸ್ ಮನೆಯಲ್ಲಿ ಎಲ್ಲರ ಪ್ರೀತಿ ವಿಶ್ವಾಸ ಗಳಿಸಿ ನೆಚ್ಚಿನ ಕಂಟೆಂಸ್ಟೆಂಟ್ ಆಗಿದ್ದ ಮಂಗಳಗೌರಿ ಧಾರಾವಾಹಿ ಖ್ಯಾತಿಯ ನಟಿ ಕಾವ್ಯಾ ಶ್ರೀ ಗೌಡ ಅವರು ಈ ವಾರ ಅಂದರೆ 10ನೇ ವಾರ ಮನೆಯಿಂದ ಎಲಿಮಿನೇಟ್ ಆಗಿದ್ದಾರೆ. ಬಾಟಮ್3 ನಲ್ಲಿ ಪ್ರಶಾಂತ್ ಸಂಬರ್ಗಿ, ದಿವ್ಯಾ ಉರುಡುಗ ಮತ್ತು ಕಾವ್ಯಾ ಶ್ರೀ ಗೌಡ ಇದ್ದರು. ಈ ಮೂವರಲ್ಲಿ ಯಾರು ಹೊರ ಹೋಗುತ್ತಾರೆ ಎಂದು ಎಲ್ಲರಿಗೂ ಗೊಂದಲ ಇತ್ತು.ಅಷ್ಟರ ಮಟ್ಟಿಗೆ ಟಫ್ ಫೈಟ್ ಇವರ ನಡುವೆ ಇದ್ದು, ಪ್ರಶಾಂತ್ ಸಂಬರ್ಗಿ ಮೊದಲು ಸೇವ್ ಆಗಿ ನಂತರ ದಿವ್ಯಾ ಉರುಡುಗ ಹೆಚ್ಚು ಓಟ್ ಪಡೆದು.

ಈ ವಾರ ಸೇಫ್ ಆಗಿ ಕಾವ್ಯಾ ಶ್ರೀ ಗೌಡ ತಮ್ಮ ದೊಡ್ಮನೆಯ ವಾಸವನ್ನ ಹತ್ತನೇ ವಾರಕ್ಕೆ ಮುಗಿಸಬೇಕಾಯಿತು. ಎಲಿಮಿನೇಟ್ ಆದ ನಟ ಕಾವ್ಯಾ ಶ್ರೀ ಗೌಡ ಅವರು ರಾಕೇಶ್ ಅಡಿಗ, ಅರುಣ್ ಸಾಗರ್ ಮತ್ತು ರೂಪೇಶ್ ಶೆಟ್ಟಿ ಅವರೊಟ್ಟಿಗೆ ಹೆಚ್ಚು ಆತ್ಮೀಯತೆ ಬೆಳೆಸಿಕೊಂಡಿದ್ದರು. ಅದರ ಜೊತೆಗೆ ನೇರ ನಿಷ್ಠುರವಾಗಿ ಮಾತನಾಡಿದರು ಸಹ ಇಡೀ ಮನೆಯ ಎಲ್ಲಾ ಸದಸ್ಯರೊಟ್ಟಿಗೆ ಉತ್ತಮ ‌ಭಾಂಧವ್ಯ ಹೊಂದಿದ್ದ ಕಾವ್ಯಾ ಶ್ರೀ ಗೌಡ ಅವರು ಮನೆಯಿಂದ ಹೊರ ಬರುವಾಗ ದುಃಖಿಸಿ ಅಳುತ್ತಿದ್ದರು. ಅವರ ಕಣ್ಣೀರಿಗೆ ಬಹುತೇಕ ಮಂದಿ ಭಾವುಕರಾಗಿದ್ದು ಉಂಟು. ಸದ್ಯಕ್ಕೆ ಬಿಗ್ ಬಾಸ್ 9ನೇ ಸೀಸನ್ ನಲ್ಲಿ ಮತ್ತೊಂದು ವಿಕೆಟ್ ಔಟ್ ಆಗಿದ್ದು, ಇನ್ನು ದೊಡ್ಮನೆಯಲ್ಲಿ ಆಟಗಾರರ ಹೊಸ ಪ್ಲ್ಯಾನ್ ನಡೆಯಲಿದ್ದು, ಮುಂದಿನ ವಾರ ಯಾರು ಎಲಿಮಿನೇಟ್ ಆಗಲಿದ್ದಾರೆ ಅನ್ನೋದನ್ನ ಕಾದು ನೋಡಬೇಕಾಗಿದೆ. ಕಾವ್ಯಶ್ರೀ ಅವರಿಗೆ ವಾರಕ್ಕೆ ಒಂದೂವರೆ ಲಕ್ಷ ಸಂಭಾವನೆ ಸಿಕ್ಕಿದೆ ಎಂದು ಮೂಲಗಳಿಂದ ತಿಳಿದು ಬಂದಿದೆ, ವಾರಕ್ಕೆ ಒಂದೂವರೆ ಲಕ್ಷದಂತೆ ಎಂಟು ವಾರಕ್ಕೆ ದೊಡ್ಡ ಮೊತ್ತದ ಸಂಭಾವನೆ ಸಿಕ್ಕಿದೆ.

Leave a Reply

%d bloggers like this: