ಈ ದೇವಸ್ಥಾನದಲ್ಲಿ ಚಿನ್ನ ಮತ್ತು ಬೆಳ್ಳಿಯನ್ನು ಪ್ರಸಾದವಾಗಿ ನೀಡುತ್ತಾರೆ, ಈ ದೇವಸ್ಥಾನ ಎಲ್ಲಿದೆ ಗೊತ್ತಾ

ಈ ಮಹಾಲಕ್ಷ್ಮಿ ದೇಗುಲದಲ್ಲಿ ದರ್ಶನಕ್ಕೆ ಬರುವ ಭಕ್ತರಿಗೆ ತೀರ್ಥ ಪ್ರಸಾದ ರೂಪವಾಗಿ ಚಿನ್ನ ಬೆಳ್ಳಿ ವಜ್ರ ವೈಡೂರ್ಯಗಳನ್ನು ನೀಡುತ್ತಿದ್ದಾರೆ.ಈ ವಿಶೇಷ ಅತ್ಯಂತ ಪ್ರಸಿದ್ದ ಮಹತ್ವದ ಮಹಾಲಕ್ಷ್ಮೀ ದೇವಾಲಯವು ಬೇರೆ ಯಾವುದೋ ದೇಶದಲ್ಲಿ ಇರುವುದಲ್ಲ. ಈ ಪ್ರಭಾವ ಶಾಲಿ ಮಹಾಲಕ್ಷ್ಮೀ ದೇವಾಲಯ ಇರುವುದು ಭಾರತದಲ್ಲಿ ಎಂಬುದು ಬಹುತೇಕರಿಗೆ ತಿಳಿದೇ ಇಲ್ಲ. ಹೌದು ಇಂದಿನ ಪ್ರಸ್ತುತ ದಿನಗಳಲ್ಲಿ ಚಿನ್ನ ಅಂದಾಕ್ಷಣ ಸಾಮಾನ್ಯ ಜನರು ಆಶ್ಚರ್ಯ ದಿಂದ ನೋಡುವಂತಾಗಿದೆ.ಭಾರತದಲ್ಲಿ ಧಾರ್ಮಿಕ ನಂಬಿಕೆ,ಚಿಂತನೆಗಳಿರುವುದರಿಂದ ದೇವರ ಬಗ್ಗೆಗಿನ ಭಕ್ತಿ ಹೊಂದಿರುವ ಆಸ್ತಿಕರು ಅಪಾರ ಸಂಖ್ಯೆಯಲ್ಲಿದ್ದಾರೆ.ನಮ್ಮ ದೇಶದ ದೇವಾಲಯಗಳು ಅದರಲ್ಲಿಯೂ ದಕ್ಷಿಣ ಭಾರತದ ದೇವಾಲಯಗಳು ವೈಜ್ಞಾನಿಕವಾಗಿ ಪ್ರಕೃತಿಗೆ ಪೂರಕವಾಗಿ ನಿರ್ಮಾಣದದ್ದಾಗಿರುತ್ತದೆ.ಈ ದೇವಾಲಯಗಳ ರಚನೆಯೂ ಮನುಷ್ಯರ ಮೇಲೆ ಸಕರಾತ್ಮಕ ಚಿಂತನೆ ಮೂಡುವಂತಾಗಿರುತ್ತದೆ.

ಇನ್ನು ಈ ಚಿನ್ನ,ಬೆಳ್ಳಿಯನ್ನೇ ಪ್ರಸಾದ ರೂಪದಲ್ಲಿ ನೀಡುತ್ತಿರುವ ಈ ಮಹಾಲಕ್ಷ್ಮಿ ದೇವಾಲಯವು ಮಧ್ಯಪ್ರದೇಶದ ರತ್ಲಂ ನಲ್ಲಿದ್ದು,ಅತ್ಯಂತ ಪ್ರಭಾವ ಶಾಲಿ ದೇವಸ್ಥಾನವಾಗಿ ಪ್ರಸಿದ್ದತೆ ಪಡೆದುಕೊಂಡಿದೆ.ಇಲ್ಲಿಗೆ ಬರುವ ಭಕ್ತರು ತಮ್ಮ ಇಷ್ಟಾರ್ಥ ಸಿದ್ದಿಗಾಗಿ ಹರಕೆಯನ್ನು ಕಟ್ಟಿಕೊಂಡಿರುತ್ತಾರೆ.ತಮ್ಮ ಆಸೆ ಆಕಾಂಕ್ಷೆಗಳು,ಇಷ್ಟಾರ್ಥಗಳು ನೆರೆವೇರಿದ ಬಳಿಕ ಲಕ್ಷ್ಮಿ ದೇವಿಗೆ ಕಾಣಿಕೆಯಾಗಿ ವಜ್ರ ವೈಡೂರ್ಯಗಳನ್ನ ನೀಡುತ್ತಾರೆ. ಭಕ್ತರಿಂದ ಪಡೆದ ಈ ಚಿನ್ನ,ಬೆಳ್ಳಿ ಒಡವೆಗಳು ಒಂದೆಡೆ ನಿಧಿಯಾಗಿ ಸಂಗ್ರಹಿಸಿಟ್ಟು ತದ ನಂತರ ಇದನ್ನ ಮತ್ತೆ ಭಕ್ತರಿಗೇ ತೀರ್ಥ ಪ್ರಸಾದ ನೀಡುವಂತೆ ಬರುವ ಭಕ್ತರಿಗೆ ಹಂಚಿ ಬಿಡುತ್ತಾರೆ.ಲಕ್ಷ್ಮಿ ದೇವಿಯ ಈ ಒಡವೆ ಪ್ರಸಾದವನ್ನು ಸ್ವೀಕರಿಸಲು ದೇಶ ವಿದೇಶಗಳಿಂದ ಲಕ್ಷಾಂತರ ಭಕ್ತರು ಬರುತ್ತಾರೆ.

ದಿನಗಳ ಗಟ್ಟಲೇ ಸರತಿ ಸಾಲಿನಲ್ಲಿ ನಿಲುತ್ತಾರೆ.ಈ ಚಿನ್ನ ಬೆಳ್ಳಿ ಪ್ರಸಾದವನ್ನು ವರ್ಷದ ಪ್ರಮುಖ ಹಬ್ಬ ದಿನಗಳಾದ ದಸರಾ ಮತ್ತು ದೀಪಾವಳಿ ಹಬ್ಬದಂದು ಭಕ್ತರಿಗೆ ನೀಡಲಾಗುತ್ತದೆ.ಇಲ್ಲಿ ಬಂದು ಮಹಾಲಕ್ಷ್ಮಿ ದೇವಿಯ ದರ್ಶನ ಪಡೆದು ಆಶೀರ್ವಾದ ಪಡೆದುಕೊಂಡರೆ ಮನೆಯಲ್ಲಿನ ಆರ್ಥಿಕ ತೊಂದರೆ ಸಮಸ್ಯೆಗಳು ದೂರವಾಗಿ ಲಕ್ಷ್ಮಿ ಕೃಪಾಕಟಾಕ್ಷ ಆಗಿ ಮನೆಯಲ್ಲಿ ಸಮೃದ್ದಿ ನೆಲೆಸುತ್ತದೆ ಎಂದು ಭಕ್ತರು ಹೇಳುತ್ತಾರೆ. ಈ ನಮ್ಮ ಲೇಖನ ನಿಮಗೆ ಇಷ್ಟವಾದರೆ ಲೈಕ್ ಮಾಡಿ ಮತ್ತು ಶೇರ್ ಮಾಡಿ. ಮತ್ತಷ್ಟು ಸುದ್ದಿಗಳಿಗಾಗಿ ನಮ್ಮ ಪೇಜ್ ನ್ನು ಲೈಕ್ ಮಾಡಿ.

Leave a Reply

%d bloggers like this: