ಈ ಸಲದ ಚುನಾವಣೆಯಲ್ಲಿ ಸ್ಪರ್ಧಿಸುತ್ತಿಲ್ಲ ಯೆಡಿಯೂರಪ್ಪ ಅವರು, ಮಗನಿಗೆ ಕ್ಷೇತ್ರ ಬಿಟ್ಟು ಕೊಡುವ ಸಾಧ್ಯತೆ

2023ರ ವಿಧಾನಸಭಾ ಚುನಾವಣೆಯ ಕಾವು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಇದೇ ಹಿನ್ನೆಲೆಯಲ್ಲಿ ರಾಜ್ಯ ರಾಜಕಾರಣದ ಘಟಾನುಘಟಿ ನಾಯಕರುಗಳು ತಮ್ಮ ತಮ್ಮ ಕ್ಷೇತ್ರದ ಮೇಲೆ ಕಣ್ಣಿಟ್ಟಿದ್ದಾರೆ. ಎಲ್ಲೆಲ್ಲಿ ತಮ್ಮ ಪ್ರಾಬಲ್ಯ ಪ್ರದೇಶಗಳಿದ್ಯೋ ಅಲ್ಲಲ್ಲಿ ಮತ್ತಷ್ಟು ಪ್ರಾಬಲ್ಯ ಸಾಧಿಸುವ ಜೊತೆಗೆ ತಮ್ಮ ಹಿಡಿತ ತಪ್ಪುತ್ತಿರುವ ಪ್ರದೇಶದಲ್ಲಿನ ಜನರ ಮನ ಗೆಲ್ಲಲು ಈಗಿನಿಂದಾನೇ ತಯಾರಿ ನಡೆಸುತ್ತಿದ್ದಾರೆ. ಇದೆಲ್ಲದರ ನಡುವೆ ಕುಟುಂಬ ರಾಜಕಾರಣ ಕೂಡ ಭಾರಿ ಜೋರಾಗಿಯೇ ನಡೆಯುತ್ತಿದೆ. ಹೌದು ರಾಜ್ಯ ಬಿಜೆಪಿ ನಾಯಕರಾಗಿ ಮುಖ್ಯಮಂತ್ರಿ ಸ್ಥಾನ ಅನುಭವಿಸಿ ಇದೀಗ ಪಕ್ಷದಲ್ಲಿ ಹಿರಿಯ ಮುಖಂಡರಾಗಿರುವ ಬಿ.ಎಸ್.ಯಡಿಯೂರಪ್ಪ ಅವರು ಇದೀಗ ಅಧಿಕೃತವಾಗಿ ರಾಜಕಾರಣದಿಂದ ನಿವೃತ್ತಿಯಾಗುವುದನ್ನ ಸಾರ್ವಜನಿಕ ಸಭೆಯೊಂದರಲ್ಲಿ ತಿಳಿಸಿದ್ದಾರೆ.

ಹೌದು ಬಿಎಸ್ ಯಡಿಯೂರಪ್ಪ ಅವರನ್ನ ವಯಸ್ಸಿನ ಕಾರಣಕ್ಕಾಗಿ ಬಿಜೆಪಿ ಹೈಕಮಾಂಡ್ ಅವರನ್ನ ಮುಖ್ಯ ಮಂತ್ರಿ ಸ್ಥಾನದಿಂದ ಕೆಳಗಿಳಿಸಿತ್ತು. ಆಗಲೇ ಬಿಜೆಪಿಯ ಅನೇಕ ಮುಖಂಡರು ಇನ್ನು ಬಿ.ಎಸ್.ವೈ ಅವರ ಪ್ರಾಬಲ್ಯ ಕುಂದುತ್ತದೆ ಎಂದು ಅರಿತು ಅನೇಕರು ತಮ್ಮ ಕ್ಷೇತ್ರವನ್ನ ಬಲಗೊಳಿಸುವ ನಿಟ್ಟಿನಲ್ಲಿ ಎಚ್ಚರವಾದರು. ಹಿರಿಯ ಅನುಭವ ರಾಜಕಾರಣಿ ಆಗಿರುವ ಬಿಎಸ್ ಯಡಿಯೂರಪ್ಪ ಅವರು ಅಷ್ಟು ಸುಲಭವಾಗಿ ತಮ್ಮ ಕ್ಷೇತ್ರವನ್ನು ಬಿಟ್ಟುಕೊಡುತ್ತಾರೆಯೇ ಎಂಬ ಪ್ರಶ್ನೆ ಹುಟ್ಟು ಹಾಕಿದ್ರು. ಶಿವಮೊಗ್ಗ ಜಿಲ್ಲೆಗೆ ಬಿಎಸ್ ಯಡಿಯೂರಪ್ಪ ನವರ ಕೊಡುಗೆ ಅಪಾರ ಅಂತ ಹೇಳಬಹುದು. ಹಾಗಾಗಿ ಯಡಿಯೂರಪ್ಪ ಅವರ ಬೆಂಬಲಿಗರು ಶಿವಮೊಗ್ಗ ಕ್ಷೇತ್ರದಲ್ಲಿ ಬಿ.ಎಸ್.ವೈ ಪ್ರಾಬಲ್ಯ ಯಾವುದೇ ಕಾರಣಕ್ಕೂ ಕುಂದಬಾರದು ಎಂದು ಬಿಜೆಪಿ ಪಕ್ಷದ ಸ್ಥಳೀಯ ಕಾರ್ಯಕರ್ತರು ಮತ್ತು ಬಿ.ಎಸ್.ವೈ ಬೆಂಬಲಿಗರು ಯಡಿಯೂರಪ್ಪ ಅವರ ಕುಟುಂಬಕ್ಕೆ ಬೆನ್ನೆಲೆಬುವಾಗಿ ನಿಂತಿದ್ದಾರೆ.

ಅದರಂತೆ ಯಡಿಯೂರಪ್ಪ ಅವರು ಕೂಡ ತಮ್ಮ ಚಾಣಾಕ್ಷತನದಿಂದ ಬಿಜೆಪಿ ಪಕ್ಷದಿಂದ ಶಿಕಾರಿಪುರ ಕ್ಷೇತ್ರದ ಟಿಕೆಟ್ ಗಾಗಿ ತಮ್ಮ ಪುತ್ರ ವಿಜಯೇಂದ್ರ ಅವರನ್ನ ಈಗಾಗಲೇ ಭಾರಿ ಯೋಜನೆಯೊಂದಿಗೆ ತಯಾರು ಮಾಡುತ್ತಿದ್ದಾರೆ. ತನಗೆ ಅವಕಾಶ ಸಿಗದಿದ್ದರು ಕೂಡ ಶಿಕಾರಿಪುರ ಕ್ಷೇತ್ರದಲ್ಲಿ ತಮ್ಮ ವಿಜಯೇಂದ್ರ ಅವರಿಗೆ ಅವಕಾಶ ಸಿಗಲೇಬೇಕು ಎಂಬ ಎಲ್ಲಾ ರೀತಿಯ ಮುಂದಾಲೋಚನೆಯ ದಾಳವನ್ನ ಈಗಲೇ ಬಿಎಸ್ ವೈ ಅವರು ಉರುಳಿಸಿದ್ದಾರೆ. ಆದರೆ ಎಲ್ಲಾ ನಿರ್ಧಾರಗಳು ಬಿಜೆಪಿ ಹೈ ಕಮಾಂಡ್ ಕೈಯಲ್ಲಿರುವುದರಿಂದ ಯಾರಿಗೆ ಯಾವ ಕ್ಷೇತ್ರದ ಟಿಕೆಟ್ ಸಿಗಲಿದೆ ಎಂಬುದನ್ನ ಮುಂದಿನ ದಿನಗಳಲ್ಲಿ ಕಾದು ನೋಡಬೇಕಾಗಿದೆ.

Leave a Reply

%d bloggers like this: