ಈ ಊರಲ್ಲಿ ಹೆಂಡತಿಯರನ್ನು ಬಾಡಿಗೆಗೆ ಕಳಿಸುತ್ತಾರೆ ಗಂಡಂದ್ರು

ಹೆಣ್ಣನ್ನು ನಾವು ಆರಾಧಿಸುವ,ಗೌರವಿಸುವ,ಪೂಜಿಸುವ ರೀತಿ ಜಗತ್ತಿಗೆ ಆದರ್ಶವಾಗಿದೆ.ಅಭಿವೃದ್ಧಿ ಹೊಂದುತ್ತಿರುವ ಭಾರತದಲ್ಲಿ ಮಹಿಳೆಯರನ್ನು ನೋಡುವ ದೃಷ್ಟಿಕೋನ ಹಿಂದುಳಿದಿದೆ ಅನ್ನೋದಕ್ಕೆ ಈ ಊರು ಸಾಕ್ಷಿ.ಅಸಹ್ಯ ಅನ್ನಿಸುವಂಥ ಇಂಥ ಅವೈಜ್ಞಾನಿಕ ಆಚರಣೆಗಳು ಇನ್ನೂ ಜೀವಂತವಾಗಿರೋದು ನೋವಿನ ಸಂಗತಿ.ಮಧ್ಯಪ್ರದೇಶ ರಾಜ್ಯದ ಒಂದು ಹಳ್ಳಿಯಲ್ಲಿ ಅಂಥ ಹೀನಾಯ ಆಚರಣೆ ಏನಿದೆ ನೋಡಿ. ಇಲ್ಲಿ ಮದುವೆಯಾದ ತಮ್ಮ ಹೆಂಡತಿಯರನ್ನು ಗಂಡಂದಿರೇ ಬಾಡಿಗೆಗೆ ಬಿಡುತ್ತಾರಂತೆ.ಇದು ಮಧ್ಯಪ್ರದೇಶದ ಶಿವಪುರಿ ಎಂಬ ಜಿಲ್ಲೆಯ ಕೆಲವು ಹಳ್ಳಿಗಳಲ್ಲಿ ಇರುವ ಪದ್ಧತಿ.ಇಲ್ಲಿನ ಶ್ರೀಮಂತ ಕುಟುಂಬದಲ್ಲಿ ಜನಿಸಿದ ಗಂಡುಗಳಿಗೆ ವಧು ಸಿಗದಿದ್ದಾಗ ಕೆಳವರ್ಗದ ಮನೆಗಳ ಹೆಂಗಸರನ್ನು ಅವರ ಗಂಡಂದಿರೇ ಬಾಡಿಗೆಗೆ ಕೊಡುತ್ತಾರೆ.ಅಂಥ ಅನಿಷ್ಟ ಪದ್ಧತಿ ಈಗಲೂ ಜಾರಿಯಲ್ಲಿದೆ.ಈ ಪದ್ದತಿಯ ಹೆಸರು ‘ಧಡಿಚ್ ಪ್ರಥ್’ ಅಂತ.

ಇಷ್ಟವಿಲ್ಲದಿದ್ರೂ ಈ ಪದ್ಧತಿಯ ಹೆಸರಿನಲ್ಲಿ ಪರಪುರುಷರ ಜೊತೆಗೆ ಹೋಗಲೇಬೇಕಾದಂಥ ಪರಿಸ್ಥಿತಿ ಆ ಕೆಲವು ಊರಿನ ನತದೃಷ್ಟ ಮಹಿಳೆಯರದ್ದು. ತಿಂಗಳಿಗೆ,ವರ್ಷಕ್ಕೆ ಅಂತ ಛಾಪಾ ಕಾಗದದ ಮೇಲೆ ಸಹಿ ಹಾಕಿಸಿಕೊಂಡು ಒಪ್ಪಂದ ಮಾಡಿಕೊಂಡು ತಮ್ಮ ಹೆಂಗಸರನ್ನು ಕಳಿಸುತ್ತಾರೆ ಆ ಊರುಗಳ ಗಂಡಸರು.ಇನ್ನೂ ಬಾಡಿಗೆಗೆ ಪಡೆದ ಹೆಂಗಸರನ್ನು ಕರಾರು ಮುಗಿದ ಬಳಿಕ ಬೇರೆಯವರು ಕೂಡ ಬೆಲೆ ಕಟ್ಟಿ ಬಾಡಿಗೆಗೆ ಪಡೆದುಕೊಳ್ಳುತ್ತಾರೆ.ಬಾಡಿಗೆಯ ಮೊತ್ತ ಹೆಚ್ಚಾಗಿದ್ದು,ಯಾರು ಹೆಚ್ಚಿನ ಬಾಡಿಗೆ ಕೊಡುತ್ತಾರೋ ಅವರ ಪಾಲಿಗೆ ಆ ಹೆಂಗಸಿನ ಸೇವೆ ಸಿಗುತ್ತದೆ.ಹೆಣ್ಣು ಶಿಶುಹತ್ಯೆ ಅಧಿಕವಾಗಿ ನಡೆಯುವ ಸ್ಥಳ ಇದು.ಹೀಗಾಗಿ ಕೊರತೆ ನೀಗಿಸಲು ಇಂಥ ಪದ್ದತಿ ರೂಢಿಗೆ ಬಂತಂತೆ.

ಇಂಥ ವ್ಯವಹಾರಗಳು ಮಹಿಳೆಯರ ಕಡುಬಡತನದ ಮೇಲೂ ನಿರ್ಧರಿತವಾಗುತ್ತದೆ.ಬಡವರನ್ನು ಹೇಗೆಂದರೆ ಹಾಗೆ ಬಳಸಿಕೊಳ್ಳುವ ಕೆಲವು ಮಧ್ಯವರ್ತಿಗಳ ಉಪಟಳದಿಂದ ಈ ಪದ್ಧತಿ ದೊಡ್ಡದಾಗಿ ಬೆಳೆದಿದೆ.ಇದೀಗ ಈ ಪದ್ದತಿ ಅಷ್ಟೊಂದು ಹೆಚ್ಚಿನ ಸಂಖ್ಯೆಯಲ್ಲಿ ಆಚರಣೆಯಲ್ಲಿ ಇಲ್ಲದಿದ್ದರೂ ಅಲ್ಲೊಂದು ಇಲ್ಲೊಂದು ನಡಿತಿದೆ.ಇದನ್ನು ಕಂಡವರು ದೂರು‌ ಕೊಡಲು ಸಹ ಹೋಗುವುದಿಲ್ಲವಂತೆ.ಅದೊಂದು ಪದ್ಧತಿ,ಆಚರಣೆ ಅಂತ ಸುಮ್ಮನಾಗುತ್ತಾರೆ.ಬಡತನ ಎಷ್ಟು ಕೆಟ್ಟದ್ದು ಅನ್ನೋಕೆ ಈ ಉದಾಹರಣೆ ಸಾಕು.

Leave a Reply

%d bloggers like this: