ಈ ಊರಿನಲ್ಲಿ ಹುಡುಗಿಯರ ಬಹು ಮುಖ್ಯವಾದ ಖಾಸಗಿ ಅಂಗ ಕಟ್ ಮಾಡ್ತಾರೆ ಯಾಕೆ ಗೊತ್ತಾ? ರೋಚಕ ಕಥೆ

ಈ ದೇಶಗಳಲ್ಲಿ ಹೆಣ್ಣಿನ ಬಯಕೆಗಳನ್ನ ಕಟ್ಟಿ ಹಾಕಲು ಹೆಣ್ಣಿನ ಬಹು ಮುಖ್ಯವಾದ ಖಾಸಗಿ ಭಾಗಕ್ಕೆ ಹೂನ ಮಾಡುತ್ತಾರೆ…..! ಹೆಣ್ಣು ಇಂದು ಆಧುನಿಕ ಜಗತ್ತಿನಲ್ಲಿ ಪ್ರತಿಯೊಂದು ಕ್ಷೇತ್ರದಲ್ಲಿಯೂ ಕೂಡ ಹೆಜ್ಜೆ ಇರಿಸಿದ್ದಾಳೆ.ಸಮಾಜದ ಎಲ್ಲಾ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಯಶಸ್ವಿಯಾಗಿದ್ದಾಳೆ.ಇಪ್ಪತ್ತೊಂದನೆಯ ಶತಮಾನದಲ್ಲಿ ಪುರುಷರಿಗೆ ಸಮಾನವಾಗಿ ಎಲ್ಲಾ ಕೆಲಸ ಕಾರ್ಯದಲ್ಲಿ ತೊಡಗಿಕೊಂಡು ನಾವು ಕೂಡ ಗಂಡಿನಷ್ಟೇ ಸಮರ್ಥರು.ನಾವು ಸಹ ಸ್ವತಂತ್ರವಾಗಿ ಜೀವನ ಕಟ್ಟಿಕೊಳ್ಳಬಲ್ಲೆವು, ಕುಟುಂಬದ ಜವಾಬ್ದಾರಿಯನ್ನು ನಿಭಾಯಿಸಬಲ್ಲೆವು ಎಂಬುದನ್ನ ಮಹಿಳೆ ಸಾಬೀತು ಪಡಿಸಿದ್ದಾಳೆ. ಶಿಕ್ಷಣ, ಸಾರಿಗೆ, ವೈದ್ಯಕೀಯ, ಸಿನಿಮಾ,ರಂಗಭೂಮಿ,ನ್ಯಾಯಾಂಗ,ರಾಜಕೀಯ,ಸಂಶೋಧನೆ ಸೇರಿದಂತೆ ಪ್ರತಿಯೊಂದು ವಲಯದಲ್ಲಿಯೂ ಕೂಡ ಅಸ್ತಿತ್ವವನ್ನು ತಮ್ಮ ಹುಟ್ಟು ಹಾಕಿದ್ದಾರೆ.ಜಾಗತಿಕವಾಗಿ ಇಷ್ಟೆಲ್ಲಾ ತೆರೆದುಕೊಂಡಿದ್ದರು ಕೂಡ ಅವಳ ಮೇಲಿನ ದೌರ್ಜನ್ಯ ಇಂದಿಗೂ ನಡೆಯುತ್ತಲೇ ಮುಂದುವರಿದಿದೆ.

ಸಮಾಜದಲ್ಲಿ ಇಂದು ಅನೇಕ ವಿವಿಧ ವಲಯಗಳಲ್ಲಿ ಅದರಲ್ಲಿಯೂ ಕಾರ್ಪೋರೇಟ್ ಕಂಪನಿಗಳಲ್ಲಿ ಇಂದು ಮಹಿಳೆಯರಿಗೆ ಪರೋಕ್ಷವಾಗಿ ಮಾನಸಿಕ ಹಿಂಸೆಗಳು ನಡೆಯುತ್ತಿರುವುದು ಕೈ ಗನ್ನಡಿಯಾಗಿದೆ.ಇದೆಲ್ಲದರ ನಡುವೆ ನಮಗೆ ನಮ್ಮ ಸುತ್ತಾ ಮುತ್ತಾ ಇರುವ ಭಾರತವನ್ನು ಸೇರಿದಂತೆ ಬಹುತೇಕ ರಾಷ್ಟ್ರಗಳಲ್ಲಿ ಕೆಲವು ಸಮುದಾಯಗಳು ಮೂಢನಂಬಿಕೆಯ ಸಂಪ್ರದಾಯ ಆಚರಣೆಗಳನ್ನು ಮಾಡುತ್ತಲೇ ಬಂದಿದ್ದಾವೆ.ಅಂತಹ ಆಚರಣೆಗಳಲ್ಲಿ ಸುನ್ನತಿ ಎಂಬ ಪದ್ದತಿ ಕೂಡ ಒಂದು.ಈ ಪದ್ದತಿಯಲ್ಲಿ ಹೆಣ್ಣು ಮಕ್ಕಳ ಖಾಸಗಿ ಅಂಗವನ್ನು ಕಟ್ ಮಾಡುತ್ತಾರೆ.ಏಕೆಂದರೆ ಹೆಣ್ಣು ಮಕ್ಕಳು ಮದುವೆಗೆ ಮುಂಚೆ ಕೆಲವು ದೈಹಿಕ ಭಾವನೆಗಳಿಗೆ ಒಳಗಾಗಿ ಪುರುಷರೊಂದಿಗೆ ಸಂಬಂಧ ಇಟ್ಟುಕೊಳ್ಳುತ್ತಾರೆ.ಈ ರೀತಿಯ ಮಾನಸಿಕ ತೊಳಲಾಟಗಳನ್ನು ಹಿಡಿತದಲ್ಲಿಟ್ಟುಕೊಳ್ಳಲಾಗದೆ ತಮ್ಮ ಸ್ಥಿಮಿತವನ್ನು ಕಳೆದುಕೊಂಡು ಪುರುಷರೊಂದಿಗೆ ದೈಹಿಕ ಸಂಪರ್ಕ ಇಟ್ಟುಕೊಳ್ಳುತ್ತಾರೆ.

ಹಾಗಾಗಿ ಹೆಣ್ಣು ಮಕ್ಕಳ ಈ ಮನೋಭಾವನೆಗಳನ್ನು ಕಟ್ಟಿ ಹಾಕಲು ಅವರ ಖಾಸಗಿ ಅಂಗವನ್ನ ಕಟ್ ಮಾಡುತ್ತಾರೆ.ಇದು ನಿಜಕ್ಕೂ ಕೂಡ ವಿಕೃತಿಯ ಲಕ್ಷಣವಾಗಿರುತ್ತದೆ.ಈ ಸುನ್ನತಿ ಪದ್ದತಿಯು ಬೋಹ್ರಾ ಎಂಬ ಸಮುದಾಯದಲ್ಲಿ ಕಂಡು ಬರುತ್ತದೆ.ಇಂದಿಗೂ ಕೂಡ ಈ ಸಮುದಾಯದ ಹೆಣ್ಣು ಮಕ್ಕಳು ಈ ಸುನ್ನತಿ ಪದ್ದತಿಗೆ ಒಳಗಾಗುತ್ತಿದ್ದಾರೆ.ಜಗತ್ತಿನಾದ್ಯಂಥ ಬರೋಬ್ಬರಿ 200 ದಶ ಲಕ್ಷಕ್ಕೂ ಅಧಿಕ ಹೆಣ್ಣು ಮಕ್ಕಳು ಸುನ್ನತಿಗೆ ಒಳಗಾಗಿದ್ದಾರೆ.ಈ ಸುನ್ನತಿ ಪದ್ದತಿಯು ಕೆಲವು ರಾಷ್ಟ್ರಗಳಲ್ಲಿ ಕಾನೂನು ಬದ್ದವಾಗಿದ್ದರೆ,ಕೆಲವು ರಾಷ್ಟ್ರಗಳಲ್ಲಿ ಈ ಸ್ರ್ತೀ ಸುನ್ನತ್ ಪದ್ದತಿಯು ಕಾನೂನು ಬಾಹಿರವಾಗಿರುತ್ತದೆ.ಈ ಸುನ್ನತಿ ಪದ್ದತಿ ಹೆಚ್ಚು ಕಂಡು ಬರುವುದು ಆಫ್ರಿಕನ್ ದೇಶ,ಇರಾಕ್,ಇಂಡೋನೇಷ್ಯಾ,ಕುದಿರ್ಸ್ತಾನ್ ದೇಶಗಳಲ್ಲಿ.ಈ ವಿಲಕ್ಷಣ ಪದ್ದತಿಯೂ ಈ ದೇಶಗಳಲ್ಲಿ ಬಹಿರಂಗವಾಗಿ ಕಾಣಿಸದಿದ್ದರೂ ಕೂಡ ಆಂತರಿಕವಾಗಿ ಆಯಾ ಸಮುದಾಯ ಕುಟುಂಬಗಳು ತಮ್ಮ ಹೆಣ್ಣು ಮಕ್ಕಳನ್ನು ಸುನ್ನತಿಗೆ ಒಳಪಡಿಸುತ್ತಾರೆ.ಇದು ನಿಜಕ್ಕೂ ಕೂಡ ಒಮ್ಮೆಲೆ ಎಂತಹವರನ್ನು ದಂಗಾಗಿಸುತ್ತದೆ.

Leave a Reply

%d bloggers like this: