ಈ ನಟಿಯ ಜೊತೆ ಒಂದು ಫೋಟೋ ತೆಗೆಸಿಕೊಳ್ಳಬೇಕೆಂದರೆ ನೀವು ಹದಿನಾಲ್ಕು ಸಾವಿರ ರೂಪಾಯಿ ಕಟ್ಟಬೇಕು

ಈ ಸುಪ್ರಸಿದ್ದ ನಟಿಯ ಜೊತೆ ನೀವು ಸೆಲ್ಫೀ ತೆಗೆದುಕೊಳ್ಳಬೇಕಾದರೆ ಈ ನಟಿಗೆ ಹಣ ನೀಡಬೇಕಾಗುತ್ತದೆ. ಅರೇ ಇದೇನಪ್ಪಾ ಈ ರೀತಿ ರೂಲ್ಸನ್ನ ನಮ್ಮ ಯಾವ ನಟಿ ಮಾಡಿದ್ದಾರೆ ಅಂತ ಅಂತ್ಕೊಳ್ತಿದ್ದೀರಾ ಹಾಗಿದ್ರೇ ಈ ಲೇಖನವನ್ನು ಸಂಪೂರ್ಣವಾಗಿ ಓದಿ. ನಿಜಕ್ಕೂ ಕೂಡ ಈ ನಟಿಯ ರೂಲ್ಸ್ ಅಚ್ಚರಿ ಗೊಳಿಸುತ್ತದೆ. ಸಿನಿಮಾ ತಾರೆಯರು ಮತ್ತು ರಾಜಕೀಯ ಪ್ರಭಾವಿ ವ್ಯಕ್ತಿಗಳು ಕಂಡಾಗ ಅಭಿಮಾನಿಗಳು ಅವರ ಜೊತೆ ಮಾತನಾಡಲು ಅಥವಾ ಅವರೊಟ್ಟಿಗೆ ಸೆಲ್ಫಿ ತೆಗೆದುಕೊಳ್ಳಲು ಬಯಸುತ್ತಾರೆ‌. ಇದು ಪ್ರತಿಯೊಬ್ಬರು ಕೂಡ ಮಾಡುವ ಕೆಲಸ. ತಮ್ಮ ನೆಚ್ಚಿನ ನಟ ನಟಿ ಅಥವಾ ರಾಜಕೀಯ ಗಣ್ಯ ವ್ಯಕ್ತಿಗಳೆಂದರೆ ಪ್ರೀತಿಸುವ ಜನರು ಅವರೊಟ್ಟಿಗೆ ಫೋಟೋ ತೆಗೆಸಿಕೊಳ್ಳುವುದು ಸರ್ವೇ ಸಾಮಾನ್ಯ. ಕೆಲವು ಬಾರಿ ಅಭಿಮಾನಿಗಳು ಸೆಲ್ಪಿ ತೆಗೆದುಕೊಳ್ಳುವಾಗ ನಡೆದುಕೊಳ್ಳುವ ರೀತಿ, ಅವರ ವರ್ತನೆ ಸೆಲೆಬ್ರಿಟಿಗಳಿಗೆ ಮುಜುಗರ ಅಥವಾ ಕಿರಿಕಿರಿ ಆಗುತ್ತದೆ. ಆದರೆ ಅದನ್ನ ಅಭಿಮಾನಿಗಳ ಮುಂದೆ ತೋರಿಸಿಕೊಳ್ಳಲಾಗುವುದಿಲ್ಲ.

ಇತ್ತೀಚಿನ ದಿನಮಾನಗಳಲ್ಲಿ ಈ ಸೆಲ್ಫಿ ಕ್ರೇಜ಼್ ಎಂಬುದು ಒಂದು ರೀತಿ ಖಯಾಲಿ ಆಗಿ ಬಿಟ್ಟಿರುತ್ತದೆ. ಎಲೆಕ್ಟ್ರಾನಿಕ್ ಗ್ಯಾಜೆಟ್ ಗಳಗೆ ಅಡಿಕ್ಟ್ ಆಗಿರುವ ಯುವ ಪೀಳಿಗೆ ಇಂದು ಮೊಬೈಲ್ ಫೋನ್ ಗಳಿಗೆ ಅಡಿಕ್ಟ್ ಆಗಿದ್ದಾರೆ. ಅದರಂತೆ ಇವತ್ತು ಎಷ್ಟೋ ಮಂದಿ ಸಿನಿಮಾ ಸೆಲೆಬ್ರಿಟಿಗಳು ಬಂದಾಗ ಅವರೊಟ್ಟಿಗೆ ಸೆಲ್ಫಿ ತೆಗೆದುಕೊಳ್ಳಲು ಮುಗಿ ಬೀಳುತ್ತಾರೆ. ಆದರೆ ಈ ನಟಿಯ ಜೊತೆ ನೀವು ಸೆಲ್ಫೀ ಬೇಕ್ ಅಂದ್ರೆ ಅವರಿಗೆ ನೀವು ಮೊದಲು 14,000 ರುಪಾಯಿಯನ್ನ ಪಾವತಿ ಮಾಡ್ಬೇಕಂತೆ‌. ಅದೇ ರೀತಿ ಈ ನಟಿಯ ಜೊತೆಗೆ ನೀವು ಸ್ವಲ್ಪ ಹೊತ್ತು ಮಾತನಾಡಬೇಕು ಅಂದರೆ 30,000ಕ್ಕೂ ಹೆಚ್ಚು ಹಣವನ್ನು ಪಾವತಿ ಮಾಡಬೇಕಾಗುತ್ತದೆಯಂತೆ. ಅಂದ್ಹಾಗೇ ಈ ನಟಿ ಯಾರ್ ಅಂತೀರಾ. ಅವ್ರೇ ಹಾಲಿವುಡ್ ನಟಿ ಎಮಿಲಿಯಾ ಕ್ಲಾರ್ಕ್. 2009ರಲ್ಲಿ ಬ್ರೇಕ್ ಫಾಸ್ಟ್ ಅಟ್ ಟಿಫಾನಿಸ್ ಚಿತ್ರದ ಮೂಲಕ ಹಾಲಿವುಡ್ ನಲ್ಲಿ ಸನ್ಶೇನಲ್ ಕ್ರಿಯೇಟ್ ಮಾಡಿದ ನಟಿ ಎಮಿಲಿಯಾ ಕ್ಲಾರ್ಕ್ ತದ ನಂತರ ಸೀಯು, ಎ ವಾಯ್ಸ್ ಆಫ್ ಫ್ರಮ್ ದಿ ಸ್ಟೋನ್, ಟರ್ಮಿನೇಟರ್ ಅಂತಹ ಸೂಪರ್ ಹಿಟ್ ಸಿನಿಮಾಗಳಲ್ಲಿ ನಟಿಸಿ ಹಾಲಿವುಡ್ ನ ಸುಪ್ರಸಿದ್ದ ಬಹು ಬೇಡಿಕೆಯ ನಟಿಯಾಗಿ ಗುರುತಿಸಿಕೊಂಡಿದ್ದಾರೆ.

ನಟಿ ಎಮಿಲಿಯಾ ಅವರು ವೈದ್ಯಕೀಯ ಪದವಿ ಪಡೆದು ಹಾಲಿವುಡ್ ನಲ್ಲಿ ಸ್ಟಾರ್ ನಟಿಯಾಗಿ ಮಿಂಚುತ್ತಿದ್ದಾರೆ. ಎಮಿಲಿಯಾ ಅವರನ್ನ ಕಂಡರೆ ಅಲ್ಲಿನ ಸಿನಿ ಪ್ರೇಕ್ಷಕರಿಗೆ ಅಪಾರ ಹುಚ್ಚು ಪ್ರೀತಿ. ಎಲ್ಲೇ ಹೋದರು ಕೂಡ ಅವರ ಜೊತೆ ಸೆಲ್ಫಿ ಕ್ಲಿಕ್ಕಿಸಿಕೊಳ್ಳಲು ಜನ ಮುಗಿ ಬೀಳುತ್ತಾರಂತೆ. ಇದನ್ನೇ ಸದುಪಯೋಗ ಪಡಿಸಿಕೊಂಡ ನಟಿ ಎಮಿಲಿಯಾ ಅವರು ನಾನು ಯಾರೊಂದಿಗೂ ಕೂಡ ಉಚಿತವಾಗಿ ಫೋಟೋ ತೆಗೆಸಿಕೊಳ್ಳುವುದಿಲ್ಲ. ಜೊತೆಗೆ ಮಾತನಾಡಲು ಅವಕಾಶ ಕೂಡ ನೀಡಲ್ಲ. ನನ್ನ ಜೊತೆ ಸೆಲ್ಫಿ ತೆಗೆದುಕೊಳ್ಳಬೇಕಾದರೆ ಹಣ ಪಾವತಿ ಮಾಡಡೇಕು ಎಂದು ಘೋಷಣೆ ಮಾಡಿದ್ದಾರೆ‌. ಆದರೂ ಕೂಡ ಅಭಿಮಾನಿಗಳು ಹಣ ಪಾವತಿಸಿ ನಟಿ ಎಮಿಲಿಯಾ ಅವರೊಟ್ಟಿಗೆ ಸೆಲ್ಫಿ ತೆಗೆದುಕೊಳ್ಳುತ್ತಾರೆ. ಕಳೆದೆರಡು ವರ್ಷಗಳಲ್ಲಿ ನಟಿ ಎಮಿಲಿಯಾ ಅವರು ಬರೀ ಕೇವಲ ಅಭಿಮಾನಿಗಳೊಟ್ಟಿಗೆ ಸೆಲ್ಫಿ ಕ್ಲಿಕ್ಕಿಸಿಕೊಂಡು ಬರೋಬ್ಬರಿ ಎಪ್ಪತ್ತು ಕೋಟಿಗೂ ಅಧಿಕ ಹಣ ಸಂಪಾದನೆ ಮಾಡಿದ್ದಾರಂತೆ. ಈ ವಿಚಾರ ತಿಳಿದು ಇದೀಗ ಇಂಡಿಯನ್ ಸಿನಿಮಾ ಇಂಡಸ್ಟ್ರಿಯ ಒಂದಷ್ಟು ನಟ ನಟಿಯರು ಈ ರೀತಿ ಸೆಲ್ಫಿಗೆ ಹಣ ನೀಡ್ಬೇಕು ಅಂತಾದ್ರೆ ಹೇಗಿರುತ್ತೆ ಅಂತ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆ ಆಗುತ್ತಿದೆ.

Leave a Reply

%d bloggers like this: