ಈ ಕಾರಣಕ್ಕಾಗಿಯೇ ಜನ ಕಬ್ಜ ಚಿತ್ರವನ್ನು ಕೆಜಿಎಫ್ ಚಿತ್ರಕ್ಕೆ ಹೋಲಿಕೆ ಮಾಡುತ್ತಿರುವುದು

ಕಬ್ಜ ಸಿನಿಮಾದ ಟೀಸರ್ ನೋಡಿದವ್ರು ಕೆಜಿಎಫ್ ಸಿನಿಮಾದ ಹೋಲಿಕೆ ನೀಡ್ತಿರೋದು ಯಾಕೆ ಗೊತ್ತಾ. ಅದಕ್ಕೆ ಅಸಲಿ ಸತ್ಯ ಈಗ ಹೊರ ಬಿದ್ದಿದೆ. ಇತ್ತೀಚೆಗೆ ತಾನೇ ಕಳೆದ ಶನಿವಾರ ಅಂದರೆ ಸೆಪ್ಟೆಂಬರ್ 17ರಂದು ಬೆಂಗಳೂರಿನ ಒರಾಯನ್ ಮಾಲ್ ನಲ್ಲಿ ರಿಯಲ್ ಸ್ಟಾರ್ ಉಪೇಂದ್ರ ಮತ್ತು ಕಿಚ್ಚ ಸುದೀಪ್ ನಟನೆ ಇರುವ ಬಹು ನಿರೀಕ್ಷಿತ ಪ್ಯಾನ್ ಇಂಡಿಯಾ ಸಿನಿಮಾ ಕಬ್ಜ ಚಿತ್ರದ ಟೀಸರ್ ಅನ್ನ ರಿಲೀಸ್ ಮಾಡಲಾಗಿದೆ. ಈ ಕಬ್ಜ ಸಿನಿಮಾದ ಟೀಸರ್ ಅನ್ನ ಟಾಲಿವುಡ್ ಸ್ಟಾರ್ ನಟ ರಾಣಾ ದಗ್ಗುಬಾಟಿ ಲಾಂಚ್ ಮಾಡಿದ್ದರು. ಈ ಕಾರ್ಯಕ್ರಮಕ್ಕೆ ವಿಶೇಷ ಅತಿಥಿಗಳಾಗಿ ಉದ್ಯಮಿ ಬಿಆರ್ ಶೆಟ್ಟಿ ಆಗಮಿಸಿದ್ರು. ಜೊತೆಗೆ ಕಬ್ಜ ಚಿತ್ರದ ನಾಯಕಿ ನಟಿ ಶ್ರೀಯಾ ಶರಣ್ ನಿರ್ದೇಶಕ ಆರ್.ಚಂದ್ರು, ಕಲಾ ನಿರ್ದೇಶಕ ಶಿವಕುಮಾರ್, ಛಾಯಾಗ್ರಾಹಕ ಎಜಿ ಸೇರಿದಂತೆ ಇಡೀ ಚಿತ್ರತಂಡ ಭಾಗವಹಿಸಿತ್ತು.

ಕಬ್ಜ ಸಿನಿಮಾದ ಬಗ್ಗೆ ನಿರ್ದೇಶಕ ಆರ್.ಚಂದ್ರು ಅವರು ಅದುವರೆಗೆ ಯಾವುದೇ ರೀತಿ ಅಪ್ ಡೇಟ್ಸ್ ನೀಡಿರಲಿಲ್ಲ. ಆದ್ರೇ ಯಾವಾಗ ನಿರ್ದೇಶಕ ಆರ್. ಚಂದ್ರು ಅವರು ಕಬ್ಜ ಚಿತ್ರದ ಟೀಸರ್ ರಿಲೀಸ್ ಮಾಡಿದ್ರೋ ಆಗ ಚಂದ್ರು ಅವರ ಬಗ್ಗೆ ಪ್ಯಾನ್ ಇಂಡಿಯಾ ಸಿನಿಮಾ ಮಾಡ್ತಾರಾ ಇವರ ಕೈಯಲ್ಲಿ ಆಗುತ್ತಾ ಅಂತ ಅನುಮಾನ, ಅಪಹಾಸ್ಯ ಮಾಡುತ್ತಿದ್ದ ಕೆಲವರಿಗೆ ತಕ್ಕ ಉತ್ತರ ನೀಡಿದ್ದಾರೆ. ಕಬ್ಜ ಸಿನಿಮಾ ಟೀಸರ್ ನೋಡಿ ಚಿತ್ರರಂಗ ನಿಬ್ಬೆರಗಾಗಿದೆ. ಕೆಜಿಎಫ್ ಚಿತ್ರಕ್ಕೆ ಹೋಲಿಕೆ ಮಾಡಿ ಮಾತಾಡುತ್ತಿದ್ದಾರೆ. ಅಷ್ಟರ ಮಟ್ಟಿಗೆ ಕಬ್ಜ ಸಿನಿಮಾದ ಮೇಕಿಂಗ್, ಬಿಜಿಎಮ್ ಕ್ವಾಲಿಟಿ ಅದ್ದೂರಿಯಾಗಿ ಮಾಡಿದ್ದಾರೆ. ಈ ಚಿತ್ರವೂ ಕೂಡ ಕೆಜಿಎಫ್ ಅಂತೆಯೇ ವರ್ಲ್ಡ್ ವೈಡ್ ರೂಲ್ ಮಾಡಲಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ.

ಆದ್ರೇ ಕಬ್ಜ ಸಿನಿಮಾದ ಟೀಸರ್ ನೋಡಿದ ಬಹುತೇಕರು ಇದು ಕೆಜಿಎಫ್ ಚಿತ್ರದ ಕಾಪಿ ಅಂತ ಹೇಳ್ತಿದ್ದಾರೆ. ಹಾಗಾದರೆ ನೋಡುಗರಿಗೆ ಆ ರೀತಿ ಕಾಣಿಸಲು ಪ್ರಮುಖ ಕಾರಣ ಏನಪ್ಪಾ ಅಂದ್ರೆ ಈ ಕಬ್ಜ ಚಿತ್ರಕ್ಕೆ ಮ್ಯೂಸಿಕ್ ಮಾಡಿರೋದು ಬೇರಾರು ಅಲ್ಲ. ಕೆಜಿಎಫ್ ಚಿತ್ರಕ್ಕೆ ಮ್ಯೂಸಿಕ್ ಮಾಡಿರೋ ರವಿ ಬಸ್ರೂರ್ ಅವರೇ ಈ ಕಬ್ಜ ಸಿನಿಮಾಗೂ ಮ್ಯೂಸಿಕ್ ಮಾಡಿದ್ದಾರೆ. ಹಾಗಾಗಿಯೇ ಅವರ ಸಂಗೀತ ಶೈಲಿಯ ಛಾಯೆ ಕಬ್ಜ ಸಿನಿಮಾದಲ್ಲಿ ಕಾಣುತ್ತಿದೆ. ಇನ್ನೊಂದು ಪ್ರಮುಖ ಅಂದರೆ ಕಬ್ಜ ಸಿನಿಮಾದ ಕಥೆಯೇ 80-90ರ ದಶಕದಲ್ಲಿ ನಡೆಯೋ ಅಂಡರ್ ವರ್ಲ್ಡ್ ಕಥೆ. ಹಾಗಾಗಿ ಚಿತ್ರದ ಕಥೆಗೆ ತಕ್ಕಂತೆ ಸಿನಿಮಾದುದ್ದಕ್ಕೂ ಭರ್ಜರಿಯಾಗಿ ಅದ್ದೂರಿಯಾದ ಸೆಟ್ ಹಾಕಿದ್ದಾರೆ. ಇಲ್ಲಿ ಆರ್ಟ್ ಡೈರೆಕ್ಟರ್ ಶಿವಕುಮಾರ್ ಅವರ ಕೈ ಚಳಕ ಎದ್ದು ಕಾಣುತ್ತಿದೆ.

ಕೆಜಿಎಫ್ ಚಿತ್ರಕ್ಕೂ ಶಿವಕುಮಾರ್ ಅವರೇ ಮಾಡಿದ್ದು ಎರಡು ಸ್ವಲ್ಪ ಹೋಲಿಕೆ ಇದ್ದೆ ಇರುತ್ತದೆ. ಅದರ ಜೊತೆಗೆ ಕ್ಯಾಮೆರಾ ಮೆನ್ ಅರ್ಜುನ್ ಅವರ ಕೈ ಚಳಕವೂ ಕೂಡ ಕಬ್ಜ ಸಿನಿಮಾಗೆ ಪ್ಲಸ್ ಪಾಯಿಂಟ್ ಆಗಿದೆ. ಒಂದೊಂದು ದೃಶ್ಯ ಸನ್ನಿವೇಶಕ್ಕೂ ಕೂಡ ಸರಿ ಸುಮಾರು ಹತ್ತು ಲಕ್ಷಕ್ಕೂ ಅಧಿಕ ಖರ್ಚು ಮಾಡಿ ಕಬ್ಜ ಸಿನಿಮಾವನ್ನ ಅದ್ದೂರಿ ವೆಚ್ಚದಲ್ಲಿ ನಿರ್ಮಾಣ ಮಾಡಲಾಗುತ್ತಿದೆ. ಹಾಗಾಗಿ ಕಬ್ಜ ಸಿನಿಮಾ ಟೀಸರ್ ನೋಡದ ಕೂಡಲೇ ಕೆಜಿಎಫ್ ಸಿನಿಮಾದ ಛಾಯೆ ಕಾಣುತ್ತಿದೆ. ಬರೋಬ್ಬರಿ ನೂರು ಕೋಟಿ ವೆಚ್ಚದಲ್ಲಿ ಕಬ್ಜ ಸಿನಿಮಾ ತಯಾರಾಗುತ್ತಿದ್ದು, ಇನ್ನೊಂದಷ್ಟು ಕೆಲಸಗಳು ಬಾಕಿಯಿದ್ದು, ಎಲ್ಲವೂ ಅಂದುಕೊಂಡಂತೆ ಆದರೆ ಇದೇ ವರ್ಷದ ಕೊನೆಯಲ್ಲಿ ಕಬ್ಜ ಸಿನಿಮಾವನ್ನ ರಿಲೀಸ್ ಮಾಡುತ್ತೇವೆ. ಇದು ಎರಡು ಭಾಗಗಳಲ್ಲಿ ಬರಲಿದೆ ಎಂದು ನಿರ್ದೇಶಕ, ನಿರ್ಮಾಪಕ ಆರ್.ಚಂದ್ರು ತಿಳಿಸಿದ್ದಾರೆ.