ಈ ಎರಡೂ ಸಾಗರಗಳು ಅಕ್ಕ ಪಕ್ಕದಲ್ಲಿದ್ದರು ಕೂಡ ಒಂದನೊಂದು ಸೇರುವುದಿಲ್ಲ. ವಿಜ್ಞಾನಿಗಳು ಕೊಟ್ಟ ಕಾರಣ ಎಷ್ಟು ರೋಚಕವಾಗಿದೆ ನೋಡಿ

ಭೂಮಿಯ ಐದು ಮಹಾಸಾಗರಗಳಲ್ಲಿ ಹಿಂದೂ ಮಹಾಸಾಗರ ಮತ್ತು ಪೆಸಿಫಿಕ್ ಸಾಗರಗಳು ಕೂಡ ಸೇರಿವೆ. ಈ ಎರಡೂ ಸಾಗರಗಳು ಕೂಡ ಅಕ್ಕ ಪಕ್ಕದಲ್ಲಿದ್ದರು ಕೂಡ ಒಂದನೊಂದು ಸೇರುವುದಿಲ್ಲ. ಇದು ನೋಡಲು ಒಂದು ರೀತಿಯ ವಿಸ್ಮಯದಂತೆ ಕಾಣುತ್ತದೆ. ಅರೇ ಈ ಸಾಗರದ ನೀರಿನ ನಡುವೆ ಅಡ್ಡಲಾಗಿ ಯಾವುದೇ ತಡೆಗೋಡೆ ನಿರ್ಮಿಸಿಲ್ಲ ಆದರೂ ಕೂಡ ಅದೇಗೆ ಇವೆರಡು ಒಂದನ್ನೊಂದು ಸೇರದೆ ಈ ರೀತಿಯಾಗಿ ವಿಭಿನ್ನವಾಗಿ ಬೇರೆ ಬೇರೆಯಾಗಿಯೇ ಇವೆ ಎಂಬುದು ಇದುವರೆಗೆ ಜಗತ್ತಿನ ಎಲ್ಲರಿಗೂ ಕಾಡುತ್ತಿರುವ ಪ್ರಶ್ನೆಯಾಗಿದೆ. ಈ ಹಿಂದೂ ಮಹಾಸಾಗರದ ನೀರಿನ ಬಣ್ಣ ಮತ್ತು ಈ ಪೆಸಿಫಿಕ್ ಸಾಗರದ ನೀರಿನ ಬಣ್ಣ ಒಂದಕ್ಕೊಂದು ವಿಭಿನ್ನವಾಗಿರುತ್ತದೆ. ಅಕ್ಕಪಕ್ಕದಲ್ಲಿರುವ ಈ ಎರಡು ಸಾಗರಗಳನ್ನು ನೋಡುತ್ತಿದ್ದರೆ ಅದೆನೋ ಒಂದು ರೀತಿಯ ವಿಸ್ಮಯಕಾರಿ ಮನಸ್ಸಿಗೆ ಅಚ್ಚರಿಯ ಆನಂದದ ಅನುಭವವನ್ನು ನೀಡುತ್ತದೆ.

ಹಿಂದೂ ಮಹಾ ಸಾಗರವು ಭೂಮಿಯ ಅತಿದೊಡ್ಡ ಮೂರನೇ ಸಾಗರವಾಗಿದೆ. ಕನ್ಯಾಕುಮಾರಿಯಿಂದ ದಕ್ಷಿಣ ಧ್ರುವದ ಪ್ರದೇಶದವರೆಗೂ ಹಬ್ಬಿಕೊಂಡಿರುವ ಹಿಂದೂ ಮಹಾಸಾಗರ ಭೂ ಪ್ರದೇಶದ ಒಟ್ಟು 14.65 ರಷ್ಟು ಭಾಗವನ್ನು ಆವರಿಸಿಕೊಂಡಿದೆ. ಇದು 7.725 ಮಿ ನಷ್ಟು ಆಳವನ್ನು ಹೊಂದಿದೆ. ಪೂರ್ವಕ್ಕೆ ಇಂಡೋಚೈನಾ ಸುಂದ ದ್ವೀಪಗಳು ಮತ್ತು ಆಸ್ಟ್ರೇಲಿಯಾ, ಪಶ್ಚಿಮಕ್ಕೆ ಆಫ್ರಿಕಾ, ಉತ್ತರಕ್ಕೆ ಅರೇಬಿಯನ್ ಸುತ್ತುವರಿದುಕೊಂಡಿದೆ. ಜಾಗತಿಕ ಅಂತರ ಸಂಪರ್ಕಿತ ಸಾಗರದ ಒಂದು ಘಟಕವಾಗಿ ಅಟ್ಲಾಂಟಿಕ್ ಸಾಗರದಿಂದ 20 ಡಿಗ್ರಿ ಪೂರ್ವ ಮೆರಿಡಿಯನ್ ಹಾಗೂ ಪೆಸಿಫಿಕ್ ಸಾಗರದಿಂದ 146.55 ಡಿಗ್ರಿ ಪೂರ್ವ ಮೆರಿಡಿಯನ್ ಮೂಲಕ ಪ್ರತ್ಯೇಕವಾಗಿದೆ. ಈ ಹಿಂದೂ ಮಹಾಸಾಗರವು ಸರಿ ಸುಮಾರು ಪರ್ಷಿಯನ್ ಗಲ್ಫ್ ನ 30 ಡಿಗ್ರಿ ಉತ್ತರಕ್ಕಿದೆ.ಇದು ಆಫ್ರಿಕಾ ಮತ್ತು ಆಸ್ಟ್ರೇಲಿಯಾದ ದಕ್ಷಿಣ ತುದಿಗಳ ನಡುವೆ ಹತ್ತು ಸಾವಿರ ಕಿ.ಮೀ ಗಳಷ್ಟು ವಿಸ್ತಾರವನ್ನೊಂದಿದೆ.

ಈ ಹಿಂದೂ ಮಹಾಸಾಗರ ಮತ್ತು ಪೆಸಿಫಿಕ್ ಸಾಗರಗಳು ಅಕ್ಕ ಪಕ್ಕದಲ್ಲಿದ್ದರು ಸಂಗಮವಾಗುವುದಿಲ್ಲ. ಈ ಎರಡೂ ಸಾಗರಗಳು ಅಲಾಸ್ಕಾ ಕೊಲ್ಲಿಯಲ್ಲಿ ಸೇರಿದರು ಕೂಡ ಎರಡು ಸಾಗರದ ನೀರು ಮಾತ್ರ ಮಿಶ್ರಣ ಆಗುವುದಿಲ್ಲ. ಎರಡು ಸಾಗರದ ಈ ನೀರು ನೀಲಿ ಮತ್ತು ಹಸಿರು ಬಣ್ಣಗಳನ್ನು ಹೊಂದಿರುವುದರಿಂದ ಪ್ರತ್ಯೇಕವಾಗಿ ಕಾಣುತ್ತವೆ. ಇದನ್ನ ಅನೇಕರು ಇದು ದೇವರ ಪವಾಡ ಎಂದು ಕರೆಯುತ್ತಾರೆ. ಇದರ ಬಗ್ಗೆ ವಿಜ್ಞಾನಿಗಳು ಸಂಶೋಧಕರು ಹೇಳುವ ಪ್ರಕಾರ ಈ ಹಿಂದೂ ಮತ್ತು ಪೆಸಿಫಿಕ್ ಸಾಗರಗಳು ಒಟ್ಟುಗೂಡದೇ ಇರಲು ನೀರಿನಲ್ಲಿರುವ ಸಾಂದ್ರತೆ,ತಾಪಮಾನ,ಉಪ್ಪು ಲವಣಾಂಶದಲ್ಲಿನ ವ್ಯತ್ಯಾಸ ಎಂದು ಹೇಳುತ್ತಾರೆ. ಈ ಎರಡು ಸಾಗರಗಳು ಸಂಧಿಸಿದಾಗ ಫೋಮ್ ಗೋಡೆಯು ಏರ್ಪಡುವ ಮೂಲಕ ನೀರಿನ ಸಾಂದ್ರತೆಯು ಬದಲಾಗುತ್ತವೆ. ಸೂರ್ಯನ ಕಿರಣಗಳು ಈ ನೀರಿನ ಸಾಂದ್ರತೆಯ ಮೇಲೆ ಸ್ಪರ್ಶಿಸಿದಾಗ ಈ ಎರಡು ಸಾಗರಗಳ ನೀರಿನ ಬಣ್ಣ ಬದಲಾಗುತ್ತವೆ.