ಈ ಭಿಕ್ಷುಕ ಮಾಡಿದ ಆಸ್ತಿ ನೋಡಿ ಬೆಚ್ಚಿಬಿದ್ದ ಪೊಲೀಸರು? ಭಾರತದ ಶ್ರೀಮಂತ ಭಿಕ್ಷುಕನ ಆಸ್ತಿ ಎಷ್ಟು ಕೋಟಿ ಗೊತ್ತಾ

ಇಂಜಿನಿಯರ್ ವೃತ್ತಿ ಮಾಡಬೇಕಿದ್ದವ ಭಿಕ್ಷಾಟನೆಯನ್ನು ವೃತ್ತಿಯಾಗಿಸಿಕೊಂಡುಕೋಟಿ ಸಂಪಾದಿಸಿದ! ಭಿಕ್ಷಾಟನೆ ಮಾಡುವುದು ಕಾನೂನಿನ ಪ್ರಕಾರ ಅಪರಾಧ.ಆದರೆ ಕಾನೂನಿನಲ್ಲಿ ಇರುವಂತೆಯೇ ನಾವು ನಡೆದುಕೊಳ್ಳುತ್ತಿದ್ದೇವೆ ಎಂಬುದು ಸತ್ಯಕ್ಕೆ ದೂರವಾದ ಮಾತು.ಅಂತೆಯೇ ಭಿಕ್ಷಾಟನೆ ಮಾಡುವುದು ಅಪರಾಧ ಆಗಿದ್ದಷ್ಟೇ,ಭಿಕ್ಷೆ ನೀಡಿ ಅದನ್ನು ಪ್ರೋತ್ಸಾಹಿಸುವುದು ಕೂಡ ಅಪರಾಧವಷ್ಟೇ ಇರುತ್ತದೆ.ಆದರೆ ಅಂಗವಿಕಲರಂತಹ ಅಸಹಾಯಕರಿಗೆ ಮಾನವೀಯತೆಯ ದೃಷ್ಟಿಯಿಂದ ನಾವು ಭಿಕ್ಷೆ ನೀಡುತ್ತೇವೆ.ಆದರೆ ಬೀದಿ ಬದಿಗಳಲ್ಲಿ,ಸಿಗ್ನಲ್ ಗಳಲ್ಲಿ,ದೇವಸ್ಥಾನಗಳಲ್ಲಿ ಅನೇಕರು ಕೈ ಕಾಲು,ದೇಹ ಚೆನ್ನಾಗಿದ್ದರೂ ಕೂಡ ಭಿಕ್ಷೆ ಬೇಡುತ್ತಿರುತ್ತಾರೆ.ಹಾಗಾದರೆ ಈ ಭಿಕ್ಷಾಟನೆಯಲ್ಲಿ ಅದೆಷ್ಟರ ಮಟ್ಟಿಗೆ ಆದಾಯ ಇರಬಹುದು ಎಂದು ಪ್ರಶ್ನೆ ಮೂಡಬಹುದು. ಇಂತಹದ್ದೇ ಪ್ರಶ್ನೆ ಬಿಹಾರದ ಪಾಟ್ನಾ ನಗರದ ಇಂಜಿನಿಯರ್ ವಿಧ್ಯಾರ್ಥಿ ಪಪ್ಪು ಕುಮಾರ್ ಗೂ ಸಹ ಮೂಡುತ್ತದೆ.ಪಪ್ಪು ಕುಮಾರ್ ಪಾಟ್ನಾದ ಖಾಸಗಿ ಕಾಲೇಜೊಂದರಲ್ಲಿ ಇಂಜಿನಿಯರಿಂಗ್ ವಿಧ್ಯಾಭ್ಯಾಸ ಮಾಡುತ್ತಿರುತ್ತಾನೆ.ಇವನಿಗೆ ಕೆಟ್ಟಗಳಿಗೆಯಂತೆ ರಸ್ತೆ ಅಪಘಾತ ಸಂಭವಿಸುತ್ತದೆ.

ಅಪಘಾತದಿಂದಾಗಿ ತನ್ನ ಕೈ ಮತ್ತು ಕಾಲಿಗೆ ಬಲವಾದ ಪೆಟ್ಟು ಬಿದ್ದು ಗಂಭೀರ ಸಮಸ್ಯೆಗೆ ತುತ್ತಾಗುತ್ತಾನೆ.ಸ್ವಾಧೀನ ತಪ್ಪಿ ಕೈ ಕಾಲುಗಳು ನಿಶಕ್ತಿಗೊಂಡಾಗ ಬದುಕಿಗಾಗಿ ಬೇರೆ ಉದ್ಯೋಗ ಮಾಡಲಾಗದೇ ಭಿಕ್ಷಾಟನೆ ಆರಂಭಿಸುತ್ತಾನೆ.ಇವನ ಅಸಹಾಯಕ ಸ್ಥಿತಿ ಕಂಡು ಜನರು ಕೂಡ ಭಿಕ್ಷೆ ನೀಡುತ್ತಿರುತ್ತಾರೆ.ದಿನ ಕಳೆದಂತೆ ಇವನಿಗೆ ನೂರು,ಸಾವಿರ ರೂ.ಸಿಗುತ್ತಾ ಹೋಗುತ್ತದೆ.ಅರೇ,ಇದರಿಂದ ಇಷ್ಟೊಂದು ಸಂಪಾದನೆ ಇದೆಯಾ ಎಂದು ಇದನ್ನೆ ಶಾಶ್ವತ ಉದ್ಯೋಗ ಎಂಬಂತೆ ವೃತ್ತಿಯಾಗಿ ಮಾಡಿಕೊಳ್ಳುತ್ತಾನೆ.ಬಸ್ ಸ್ಟಾಪ್,ರೇಲ್ವೇ ಸ್ಟೇಶನ್ ಸೇರಿದಂತೆ ಅನೇಕ ಸಿಕ್ಕ ಸಿಕ್ಕ ಜಾಗಗಳಲ್ಲಿ ಭಿಕ್ಷಾಟನೆ ಮಾಡಲು ಶುರು ಮಾಡುತ್ತಾನೆ.ಊಟ,ಕಾಸು ಎರಡೂ ಕೂಡ ಸುಲಭವಾಗಿ ಸಿಗುತ್ತಾ ಹೋಗುತ್ತದೆ.ಇವನು ಭಿಕ್ಷಾಟನೆಗೆ ಸಿಕ್ಕ ಸಿಕ್ಕಲ್ಲಿ ಬೇಡುತ್ತಿದ್ದ ಇವನನ್ನು ಕಂಡ ಪೊಲೀಸರು ಎಚ್ಚರಿಕೆಯನ್ನ ಕೂಡ ನೀಡುತ್ತಾರೆ.ಆದರೂ ಕೂಡ ಇವ ಸಿಕ್ಕ ಸಿಕ್ಕಲ್ಲಿ ಜಾಣತನದಿಂದ ಈ ರೀತಿ ಭಿಕ್ಷೆ ಬೇಡುತ್ತಿದ್ದುದ್ದನ್ನ ಗಮನಿಸಿದ ಪಾಟ್ನಾ ನಗರದ ಪೊಲೀಸರು ಪಪ್ಪು ಕುಮಾರ್ ನನ್ನ ಅರೆಸ್ಟ್ ಮಾಡಿ ವಿಚಾರಣೆ ಮಾಡುತ್ತಾರೆ.

ಆಗ ನಿಜಕ್ಕೂ ಕೂಡ ಅಚ್ಚರಿಯ ವಿಚಾರ ಹೊರ ಬರುತ್ತದೆ.ಅದೇನಫ್ಪಾ ಅಂದರೆ ಪಪ್ಪು ಕುಮಾರ್ ಭಿಕ್ಷಾಟನೆಯಿಂದಾನೇ ಕೋಟಿಗೂ ಅಧಿಕ ಹಣವನ್ನು ಸಂಪಾದಿಸಿದ್ದಾನೆ ಎಂದು ತಿಳಿಯುತ್ತದೆ.ಇದು ಪೊಲೀಸರನ್ನು ದಂಗಾಗಿಸುತ್ತದೆ.ಭಿಕ್ಷುಕ ಪಪ್ಪು ಕುಮಾರ್ ನಾಲ್ಕು ಪ್ರತಿಷ್ಟಿತ ಬ್ಯಾಂಕುಗಳಲ್ಲಿ ಒಂದೊಂದು ಅಕೌಂಟ್ ನಲ್ಲೂ ಬರೋಬ್ಬರಿ ಮೂವತ್ತು ಲಕ್ಷ ರೂ.ಹಣವನ್ನು ಹೊಂದಿರುತ್ತಾನೆ.ಇನ್ನು ಇದರ ಜೊತೆಗೆ ಇಪ್ಪತ್ತು ಲಕ್ಷ ರೂ.ಗಳನ್ನು ಬಡ್ಡಿಗೆ ನೀಡಿರುತ್ತಾನೆ.ಹೀಗೆ ಲಕ್ಷಾಂತರ ರೂ.ವ್ಯವಹಾರ ಮಾಡಿಕೊಂಡು ಭಿಕ್ಷೆ ಮಾಡುತ್ತಿದ್ದ ಈ ಪಪ್ಪು ಕುಮಾರ್ ನನ್ನ ಕಂಡು ಪಾಟ್ನಾ ನಗರದ ಪೊಲೀಸರಿಗೆ ಅಚ್ಚರಿ ಆಗಿದೆ.ಈ ಭಿಕ್ಷಾಟನೆಯಲ್ಲೂ ಇಷ್ಟರ ಮಟ್ಟಿಗೆ ಆದಾಯ ಇರುತ್ತದೆಯೋ ಎಂದು ಆಲೋಚನೆಗೆ ಒಳಗಾಗಿದ್ದಾರೆ.ಇತ್ತೀಚೆಗೆ ಈ ಭಿಕ್ಷಾಟನೆ ಮಾಡುವವರಿಂದ ಮಾನವ ಕಳ್ಳ ಸಾಗಣೆ ನಡೆಯುತ್ತಿದೆ ಎಂದು ಬೆಂಗಳೂರು ನಗರದ ಯುವಕರ ಗುಂಪೊಂದು ಭಿಕ್ಷೆ ನೀಡದಿರಲು ಅಭಿಯಾನವನ್ನು ನಡೆಸುತ್ತಿದೆ.

Leave a Reply

%d bloggers like this: